ನಟ ಯಶ್ 'ಸಲಾರ್' ಸಿನಿಮಾದಲ್ಲಿ..!?

Salaar Movie : ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಸಲಾರ್ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. 

Written by - Chetana Devarmani | Last Updated : Dec 13, 2023, 03:16 PM IST
  • ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್
  • ಸಲಾರ್ ಡಿಸೆಂಬರ್ 22 ರಂದು ಬಿಡುಗಡೆ
  • ಸಲಾರ್ ಸಿನಿಮಾದಲ್ಲಿ ನಟ ಯಶ್
ನಟ ಯಶ್ 'ಸಲಾರ್' ಸಿನಿಮಾದಲ್ಲಿ..!?  title=
Salaar Movie

Salaar Movie : ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಸಲಾರ್ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 

'ಕೆಜಿಎಫ್' ಹೀರೋ ಯಶ್ 'ಸಲಾರ್' ಚಿತ್ರದಲ್ಲಿ ನಟಿಸಿದ್ದಾರೆ ಎಂಬ ವರದಿಗಳಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಬಾಲ ಗಾಯಕಿ ತೀರ್ಥ ಸುಭಾಷ್ ಈ ವಿಷಯವನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. 

ಯಶ್ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಈ ವಿಚಾರ ಪುಷ್ಠಿ ನೀಡಿದೆ. ಸಂದರ್ಶನವೊಂದರಲ್ಲಿ ತೀರ್ಥ ಅವರು, ಯಶ್ ಅಂಕಲ್, ಪ್ರಭಾಸ್ ಅಂಕಲ್, ಪೃಥ್ವಿರಾಜ್ ಅಂಕಲ್ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: 2023 ರಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಟಾಪ್ 10 ಸಿನಿಮಾಗಳಿವು 

ಈ ಸುದ್ದಿ ಕೇಳಿ ಪ್ರಭಾಸ್ ಅಭಿಮಾನಿಗಳ ಜೊತೆಗೆ ಯಶ್ ಅಭಿಮಾನಿಗಳು ಸಹ ಸಂಭ್ರಮಿಸಿದ್ದಾರೆ. ‘ಕೆಜಿಎಫ್’ ಭಾಗವಾಗಿಯೇ ಈ ಸಿನಿಮಾ ಬರಲಿದೆ ಎಂಬುದು ಹಲವರ ಅಭಿಪ್ರಾಯ. 'ಕೆಜಿಎಫ್' ಚಿತ್ರದೊಂದಿಗೆ ಸಾಮ್ಯತೆಯು 'ಸಲಾರ್' ಚಿತ್ರದ ಟೀಸರ್ ಮತ್ತು ಟ್ರೇಲರ್‌ನಲ್ಲಿಯೂ ಕಂಡುಬಂದಿದೆ. ಈ ಹಿನ್ನಲೆಯಲ್ಲಿ 'ಕೆಜಿಎಫ್' ಚಿತ್ರದ ಮುಂದುವರಿದ ಭಾಗವಾಗಿ 'ಸಲಾರ್' ಸಿನಿಮಾ ಬರಬಹುದು ಎಂದು ಭಾವಿಸಲಾಗಿತ್ತು.  

ಇತ್ತೀಚೆಗಷ್ಟೇ ತೀರ್ಥ ಸುಭಾಷ್ ಅವರೇ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎಂದು ತಪ್ಪಾಗಿ ಹೇಳಿರುವುದಾಗಿ ತೀರ್ಥ ತಿಳಿಸಿದ್ದಾರೆ. 

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯೇ ಮೊದಲ ಪಾಠಶಾಲೆ: ಮೈಕಲ್ ಮೇಷ್ಟ್ರ ನುಡಿ ರೋಮಾಂಚನ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News