ನವದೆಹಲಿ : ಭಾರತೀಯ ರೈಲ್ವೇಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ. ಅನೇಕ ಬಾರಿ ಮಹಿಳೆಯರು ತಮ್ಮ ಚಿಕ್ಕ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪುಟ್ಟ ಮಕ್ಕಳು, ಹಿರಿಯರೊಂದಿಗೆ ಆರಾಮಾಗಿ ಪ್ರಯಾಣಿಸಬಹುದು. ಇದೇ ಕಾರಣಕ್ಕೆ ಮನೆಯಲ್ಲಿ ಮಕ್ಕಳಿದ್ದರೆ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಆರಿಸಿಕೊಳ್ಳುತ್ತಾರೆ. ತನ್ನ ಪ್ರಯಾಣಿಕ ಅನುಕೂಲಕ್ಕಾಗಿ ರೈಲ್ವೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಮಕ್ಕಳ ಟಿಕೆಟ್ ರಿಸರ್ವೇಶನ್ ಬಗ್ಗೆಯೂ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.
5 ವರ್ಷದೊಳಗಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು:
1 ವರ್ಷದಿಂದ 4 ವರ್ಷದೊಳಗಿನ ಮಕ್ಕಳು ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದರೆ ಅವರಿಗೆ ಟಿಕೆಟ್ ಬುಕ್ ಮಾಡುವ ಅಗತ್ಯವಿಲ್ಲ. 5 ವರ್ಷದೊಳಗಿನ ಮಕ್ಕಳು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ, ಜನರ ಬೇಡಿಕೆಯ ಮೇರೆಗೆ, ರೈಲ್ವೆಯು ಆಗಸ್ಟ್ 2022 ರಲ್ಲಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅದರಂತೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು ಆದರೆ ಪ್ರತ್ಯೇಕ ಸೀಟು ಸಿಗುವುದಿಲ್ಲ. ಪೋಷಕರು ತಮ್ಮ ಮಗುವಿಗೆ ಪ್ರತ್ಯೇಕ ಆಸನವನ್ನು ಕಾಯ್ದಿರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಕ್ಕಾಗಿ ಅವರು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : CNG Price Hike: ಸಿಎನ್ಜೆ ಬೆಲೆಯಲ್ಲಿ ಮತ್ತೆ ಏರಿಕೆ
ಭಾರತಿಯ ರೈಲ್ವೆ ಹೇಳಿದ್ದೇನು ? :
"06.03.2020 ರ ರೈಲ್ವೆ ಸಚಿವಾಲಯದ ಸುತ್ತೋಲೆಯ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ, ಪ್ರತ್ಯೇಕ ಬರ್ತ್ ಅಥವಾ ಆಸನ ಒದಗಿಸಲಾಗುವುದಿಲ್ಲ. ಆದ್ದರಿಂದ, ಪ್ರತ್ಯೇಕ ಬರ್ತ್ ಬೇಡ ಎಂದಾದರೆ ಈ ಮಕ್ಕಳಿಗೆ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆದರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಬರ್ತ್/ಸೀಟ್ ಅಗತ್ಯವಿದ್ದರೆ, ಆ ಸಂದರ್ಭದಲ್ಲಿ ಪೂರ್ಣ ಶುಲ್ಕದಲ್ಲಿ ವಿಧಿಸಲಾಗುತ್ತದೆ.
12 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯಿಸುತ್ತದೆ ಈ ನಿಯಮ :
5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಸೀಟು ಬೇಡ ಎಂದಾದರೂ ಆ ಮಗುವಿಗೆ ನೀವು ಟಿಕೆಟ್ ದರದ ಅರ್ಧದಷ್ಟು ಪಾವತಿಸಬೇಕಾಗುತ್ತದೆ. ಮಗುವು ತನ್ನ ಪೋಷಕರ ಸೀಟಿನಲ್ಲಿ ಕುಳಿತು ಪ್ರಯಾಣಿಸಬಹುದು. 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಆಸನವನ್ನು ರಿಸರ್ವ್ ಮಾಡಿದ್ದರೆ, ಪೂರ್ಣ ಟಿಕೆಟ್ ದರವನ್ನು ವಿಧಿಸಲಾಗುತ್ತದೆ. ಇದು ಹಿಂದಿನ ನಿಯಮವಲ್ಲದಿದ್ದರೂ. ಮಾರ್ಚ್ 31, 2016 ರಂದು, ರೈಲ್ವೇ ಇಲಾಖೆಯು 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಬರ್ತ್ ಅಥವಾ ರಿಸರ್ವೇಶನ್ ಕಂಪಾರ್ಟ್ಮೆಂಟ್ನಲ್ಲಿ ಆಸನದ ಅಗತ್ಯವಿದ್ದರೆ ಪೂರ್ಣ ಶುಲ್ಕವನ್ನು ವಿಧಿಸಲಾಗುವುದು ಎಂದು ಘೋಷಿಸಿತು. ಈ ನಿಯಮವನ್ನು 21 ಏಪ್ರಿಲ್ 2016 ರಿಂದ ಜಾರಿಗೆ ತರಲಾಗಿದೆ.
ಇದನ್ನೂ ಓದಿ : ಪಿಂಚಣಿದಾರರೇ ಗಮನಿಸಿ ! ಇನ್ನು ಇದೇ ಬ್ಯಾಂಕ್ ಖಾತೆಗೆ ಬರುವುದು ನಿಮ್ಮ ಪೆನ್ಶನ್
ಈ ಮಧ್ಯೆ, 10 ಕೋಟಿಗೂ ಹೆಚ್ಚು ಮಕ್ಕಳು ಈಗ ಪ್ರತ್ಯೇಕ ಬರ್ತ್ ಅಥವಾ ಆಸನವನ್ನು ಆರಿಸಿಕೊಂಡಿದ್ದಾರೆ. ಸಂಪೂರ್ಣ ಶುಲ್ಕವನ್ನು ಪಾವತಿಸಿ, ಪ್ರಯಾಣ ಬೆಳೆಸಿದ್ದಾರೆ. ರೈಲ್ವೇಯಲ್ಲಿ ಪ್ರಯಾಣಿಸುವ ಶೇಕಡ 70 ರಷ್ಟು ಮಕ್ಕಳು ತಮ್ಮ ಪೋಷಕರು ಸಂಪೂರ್ಣ ಪ್ರಯಾಣ ದರವನ್ನು ಪಾವತಿಸಲು ಮತ್ತು ಬರ್ತ್ ಬುಕ್ ಮಾಡಲು ಬಯಸುತ್ತಾರೆ ಎಂದು RTI ಬಹಿರಂಗಪಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ