ಡಿವೋರ್ಸ್ ಬಳಿಕ ಐಶ್ವರ್ಯಾಗೆ ಅಭಿಷೇಕ್ ಎಷ್ಟು ಜೀವನಾಂಶ ನೀಡಬೇಕು?

Aishwarya Rai Divorce with Abhishek Bachchan: ಅಭಿಷೇಕ್ ಬಚ್ಚನ್‌ ಮತ್ತು ಐಶ್ವರ್ಯ ರೈ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Written by - Chetana Devarmani | Last Updated : Dec 16, 2023, 02:19 PM IST
  • ಅಭಿಷೇಕ್ - ಐಶ್ವರ್ಯ ರೈ ಸಂಬಂಧದಲ್ಲಿ ಬಿರುಕು
  • ಐಶ್ವರ್ಯ ರೈ ಅಭಿಷೇಕ್ ಬಚ್ಚನ್‌ ವಿಚ್ಛೇದನ?
  • ಮನೆ ಬಿಟ್ಟು ಹೊರಬಂದ ಐಶ್ವರ್ಯ ರೈ
ಡಿವೋರ್ಸ್ ಬಳಿಕ ಐಶ್ವರ್ಯಾಗೆ ಅಭಿಷೇಕ್ ಎಷ್ಟು ಜೀವನಾಂಶ ನೀಡಬೇಕು? title=
ಐಶ್ವರ್ಯ ರೈ ಅಭಿಷೇಕ್ ಬಚ್ಚನ್‌

Aishwarya Rai Divorce with Abhishek Bachchan: ಅಭಿಷೇಕ್ ಬಚ್ಚನ್‌ ಮತ್ತು ಐಶ್ವರ್ಯ ರೈ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಐಶ್ವರ್ಯಾ ರೈ ಮನೆ ಬಿಟ್ಟು ಹೊರಬಂದಿದ್ದಾರೆ. ಮಗಳೊಟ್ಟಿಗೆ ಮನೆಯಿಂದ ಹೊರಬಂದು ತಮ್ಮ ತಾಯಿಯ ಜೊತೆ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಗಳ ನಡುವೆ ಮನಸ್ತಾಪವಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಎಲ್ಲಾ ಸುದ್ದಿಗಳ ನಡುವೆ ಬಚ್ಚನ್ ಕುಟುಂಬ ಮೌನ ವಹಿಸಿದೆ. ಅಭಿಷೇಕ್ ಮತ್ತು ಐಶ್ವರ್ಯಾ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಲಿದ್ದಾರೆ ಎಂಬ ಸುದ್ದಿಗಳು ಸಹ ವೈರಲ್‌ ಆಗುತ್ತಿವೆ. ಕಳೆದ ಮೂರು ತಿಂಗಳಿನಿಂದ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅಭಿಷೇಕ್ ಮತ್ತು ಐಶ್ವರ್ಯ ಮದುವೆಯಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಶುರುವದವು. ಹಾಗೊಂದು ವೇಳೆ ಅಭಿಷೇಕ್ ವಿಚ್ಛೇದನ ಪಡೆದರೆ, ಐಶ್ವರ್ಯ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುವುದು ಗೊತ್ತೇ! 

ಅಭಿಷೇಕ್ ಬಚ್ಚನ್ 2000ದಲ್ಲಿ ರಿಲೀಸ್ ಆದ ರೆಫ್ಯೂಜಿ ಸಿನಿಮಾ ಮೂಲಕ ಬಾಲಿವುಡ್‌ ಎಂಬ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಬೆಸ್ಟ್ ಮೇಲ್ ಡಿಬಟ್ ಫಿಲ್ಮ್‌ ಫೇರ್ ಅವಾರ್ಡ್ ಕೂಡಾ ಪಡೆದರು. ಅಂದಿನಿಂದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಭಿಷೇಕ್ ಬಚ್ಚನ್ ಅವರ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಪರಿಹಾರ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ. 

ಇದನ್ನೂ ಓದಿ: ಖ್ಯಾತ ಕಿರುತೆರೆ ನಟಿಯ ಮೇಲೆ ಕುಟುಂಬಸ್ಥರ ಹಲ್ಲೆ.. ಪತಿಯಿಂದಲೇ ಚಿತ್ರ ಹಿಂಸೆ! 

ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರ ಏಕೈಕ ಪುತ್ರ ಅಭಿಷೇಕ್ ಬಚ್ಚನ್ ಅವರ ಒಟ್ಟು ಆಸ್ತಿ ಸುಮಾರು 280 ಕೋಟಿ ರೂಪಾಯಿ. ಅಭಿಷೇಕ್ ಬಚ್ಚನ್ ತಿಂಗಳಿಗೆ ಸುಮಾರು 1.8 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಅವರ ವಾರ್ಷಿಕ ಆದಾಯ ಸುಮಾರು 25 ಕೋಟಿ ಆಗಿದೆ. ಸುಮಾರು 50 ಕೋಟಿ ರೂಪಾಯಿ ಬೆಲೆಬಾಳುವ ಸಂಪತ್ತನ್ನು ಹೊಂದಿದ್ದಾರೆ. ಇಷ್ಟಲ್ಲ ಆಸ್ತಿಯ ಒಡೆಯನಾದ ಅಭಿಷೇಕ್‌, ತಿಂಗಳಿಗೆ 25% ಎಂದು ಅಂದಾಜಿಸಿದರೂ ಐಶ್ವರ್ಯ ರೈ ಅವರಿಗೆ 45 ಲಕ್ಷ ರೂಪಾಯಿ ಜೀವನಾಂಶ ನೀಡಬೇಕಾಹಬಹುದು. 

ಅದೊಂದು ವೇಳೆ ಡಿವೋರ್ಸ್‌ ಪಡೆದು ದೂರವಾದರೆ, ಅಭಿಷೇಕ್‌ ಪ್ರತಿ ತಿಂಗಳು 45 ಲಕ್ಷ ರೂಪಾಯಿ ಜೀವನಾಂಶವನ್ನು ಐಶ್ವರ್ಯ ರೈಗೆ ನೀಡಬೇಕಾಗುತ್ತದೆ. 

ಆದರೆ ಮತ್ತೆ ಕೆಲವು ವರದಿಗಳ ಪ್ರಕಾರ, ಅವರಿಬ್ಬರೂ ವಿಚ್ಛೇದನ ಪಡೆದಿಲ್ಲ ಮತ್ತು ಪಡೆಯುವ ಯೋಚನೆಯಲ್ಲಿಯೂ ಇಲ್ಲ ಎನ್ನಲಾಗುತ್ತಿದೆ. ಬಚ್ಚನ್ ಕುಟುಂಬ ಹಾಗೂ ಸ್ಟಾರ್ ನಟಿ ಐಶ್ವರ್ಯಾ ರೈ ನಡುವಿನ ಈ ವಿರಸದ ಬಗ್ಗೆ ಅಧಿಕೃತವಾಗಿ ಯಾರೂ ಸ್ಪಷ್ಟನೆ ನೀಡಿಲ್ಲ. ಇದೆಲ್ಲವೂ ಕೇವಲ ವದಂತಿಯಾಗಿ ಹಬ್ಬುತ್ತಿದೆ. 

ಇದನ್ನೂ ಓದಿ: ಐಶ್ವರ್ಯ ರೈ ಜೊತೆ ಅಭಿಷೇಕ್ ಡಿವೋರ್ಸ್ ಕನ್ಫರ್ಮ್! ಮಗಳೊಟ್ಟೊಗೆ ಮನೆ ಬಿಟ್ಟು ಬಂದ ಬಚ್ಚನ್ ಸೊಸೆ?‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News