Real age of most wanted terrorist Dawood Ibrahim: ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬೆನ್ನಲ್ಲೇ ಆತನ ಆಪ್ತ ಛೋಟಾ ಶಕೀಲ್ ಕಡೆಯಿಂದ ಸ್ಫೋಟಕ ಮೆಸೇಜ್ ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಗರ್ಲ್ ಫ್ರೆಂಡ್ ಇವರೇ… ಮೊಟ್ಟಮೊದಲ ಬಾರಿಗೆ ಫೇಸ್ ರಿವೀಲ್!
ಭೂಗತ ಪಾತಕಿ, ಡಿ ಕಂಪನಿ ಮಾಲೀಕ ಮತ್ತು ಕ್ರಿಮಿನಲ್ ಭಯೋತ್ಪಾದಕ ಜಾಲದ ಮುಖ್ಯಸ್ಥ ದಾವೂದ್ ಇಬ್ರಾಹಿಂ ಭಾರತ ಸರ್ಕಾರಕ್ಕೆ ಮೋಸ್ಟ್ ವಾಂಟೆಡ್ ಉಗ್ರ. ಈತನ ವಯಸ್ಸು ಈಗ 67 ವರ್ಷ.
1993ರ ಮುಂಬೈ ಬಾಂಬ್ ಸ್ಫೋಟದಲ್ಲಿ ದಾವೂದ್ ಮೋಸ್ಟ್ ವಾಂಟೆಡ್ ಆಗಿದ್ದು, ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಅನೇಕ ಬಾರಿ ಭಾರತ ವಾದಿಸಿದರೂ ಸಹ, ಪಾಕಿಸ್ತಾನ ಈ ಸುದ್ದಿಯನ್ನು ಅಲ್ಲಗಳೆಯುತ್ತಲೇ ಬಂದಿದೆ.
ದಾವೂದ್ ಇಬ್ರಾಹಿಂ ಜನಿಸಿದ್ದು 26 ಡಿಸೆಂಬರ್ 1955ರಲ್ಲಿ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಹುಟ್ಟಿದ ಈತನ ಪೂರ್ಣ ಹೆಸರು ಶೇಖ್ ದಾವೂದ್ ಇಬ್ರಾಹಿಂ ಕಷ್ಕರ್. ದಾವೂದ್’ನ ತಂದೆ ಶೇಖ್ ಇಬ್ರಾಹಿಂ ಅಲಿ ಕಸ್ಕರ್ ಮುಂಬೈ ಪೊಲೀಸ್ ಠಾಣೆಯಲ್ಲಿ ಕಾನ್’ಸ್ಟೇಬಲ್ ಆಗಿದ್ದರು. ದಾವೂದ್ ಶಾಲಾ ಹಂತದಲ್ಲೇ ಓದು ಬಿಟ್ಟಿದ್ದ. ಆಗಲೇ ಕೆಟ್ಟ ಅಭ್ಯಾಸಗಳಿಗೆ ದಾಸನಾಗಿದ್ದ ದಾವೂದ್, ಡ್ರಗ್ಸ್, ಕಳ್ಳತನ, ದರೋಡೆ ಹೀಗೆ ಅನೇಕ ಅಪರಾಧಗಳನ್ನು ಎಸಗಲು ಪ್ರಾರಂಭಿಸಿದ.
ಮದುವೆಯ ನಂತರ ದಾವೂದ್ ಸರಿಯಾದ ದಾರಿಯಲ್ಲಿ ಬರಬಹುದು ಎಂದು ಮನೆಯವರು ಭಾವಿಸಿ, ಆತನಿಗೆ ಮೆಹಜಬೀನ್ ಅಲಿಯಾಸ್ ಜುಬಿನಾ ಜರೀನಾ ಎಂಬಾಕೆಯನ್ನು ಮದುವೆ ಮಾಡಲಾಯಿತು. ಈ ದಂಪತಿಗೆ ನಾಲ್ಕು ಜನ ಮಕ್ಕಳು. ಒಬ್ಬ ಗಂಡು ಮತ್ತು ಮೂರು ಹೆಣ್ಣು ಮಕ್ಕಳು. ಅದರಲ್ಲಿ ಕಿರಿಯ ಮಗಳು ಸಾವನ್ನಪ್ಪಿದ್ದಾಳೆ.
ಇಂದು ಹಣದಿಂದ ಜಗತ್ತನ್ನು ಆಳುತ್ತಿರುವ ಮತ್ತು ಭಯೋತ್ಪಾದಕ ಸಂಘವನ್ನು ನಡೆಸುತ್ತಿರುವ ದಾವೂದ್ ಇಬ್ರಾಹಿಂಗೆ ಒಂದು ಕಾಲದಲ್ಲಿ ಆಹಾರಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಇನ್ನು ದಾವೂದ್’ನ ತಂದೆ ಕಾನ್ಸ್‌ಟೇಬಲ್ ಆಗಿದ್ದು, ಹಾಜಿ ಮಸ್ತಾನ್ ಬಕ್ಷೀಶ್ ಮತ್ತು ಕಳ್ಳಸಾಗಾಣಿಕೆ ಲೋಕದ ದೊರೆ ಕರೀಂ ಲಾಲಾ ಮನೆಗೆ ಬಂದಾಗ ಮಾತ್ರ ಮನೆಯಲ್ಲಿ ಒಳ್ಳೆಯ ಆಹಾರ ಸಿಗುತ್ತಿತ್ತು.
ಇದನ್ನೂ ಓದಿ: ಒಡೆದ ಹಿಮ್ಮಡಿಗೆ ಜೇನುತುಪ್ಪ ಅತ್ಯುತ್ತಮ ಮನೆಮದ್ದು: ಹೀಗೆ ಬಳಸಿದ್ರೆ ನೋವಿನ ಜೊತೆ ಒಡೆತವೂ ಮಾಯ
ಬಾಲ್ಯದಿಂದಲೂ ಇದನ್ನೆಲ್ಲ ನೋಡುತ್ತಾ ಬೆಳೆದ ದಾವೂದ್ ತಾನೂ ಕರೀಂ ಲಾಲಾ ಗ್ಯಾಂಗ್ ಸೇರಿಕೊಂಡ. 1980 ರ ದಶಕದಲ್ಲಿ, ದಾವೂದ್’ನ ಹೆಸರು ಮುಂಬೈ ಅಪರಾಧ ಜಗತ್ತಿನಲ್ಲಿ ವೇಗವಾಗಿ ಕೇಳಿಬಂತು. ಇನ್ನು ದಾವೂದ್ ಭೂಗತ ಜಗತ್ತನ್ನು ಪ್ರವೇಶಿಸಿದಾಗ ಕತ್ತಿ, ಚಾಕು, ರಿವಾಲ್ವರ್ ಮತ್ತು ಪಿಸ್ತೂಲ್ ಬಳಕೆ ಮಾಡಲು ಪ್ರಾರಂಭಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ