ರೋಮಾಂಚನಕಾರಿ ಮಹಿಳಾ ಕಬ್ಬಡಿ ಪಂದ್ಯಾವಳಿಗೆ ಅದ್ದೂರಿ ತೆರೆ

ಗೋಕಾಕ ತಾಲೂಕಿನ ಕೊಣ್ಣೂರಿನ ಮರಡಿ ಮಠದ ಶ್ರೀ ಕಾಡಸಿದ್ದೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾತ್ರೆಯಲ್ಲಿ, ಮಹಿಳಾ ಕಬ್ಬಡ್ಡಿಯನ್ನು ಆಯೋಜಿಸಲಾಗಿತ್ತು. 

Written by - Yashaswini V | Last Updated : Dec 19, 2023, 08:44 AM IST
  • ಮರಡಿ ಮಠದ ಶ್ರೀ ಕಾಡಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿ
  • ಪಂದ್ಯಾವಳಿಯಲ್ಲಿ ದೇಶದ ಪ್ರತಿಷ್ಠಿತ 12 ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸುವ ಮೂಲಕ ಒಟ್ಟು 34 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ರೋಮಾಂಚನಕಾರಿ ಮಹಿಳಾ ಕಬ್ಬಡಿ ಪಂದ್ಯಾವಳಿಗೆ ಅದ್ದೂರಿ ತೆರೆ  title=

ಬೆಳಗಾವಿ : ಒಂದೆಡೆ ಗಂಡು ಮಕ್ಕಳಿಗೆ ತಾವೇನು ಕಮ್ಮಿ ಇಲ್ಲವೆಂಬಂತೆ ಭರ್ಜರಿ ಕಬಡ್ಡಿ ಆಡಿದ ಯುವತಿಯರು, ಮತ್ತೊಂದೆಡೆ ಯುವತಿಯರ ಕಬಡ್ಡಿ ಆಟ ಕಂಡು ಚಪ್ಪಾಳೆ ತಟ್ಟಿ ಹುರುದುಂಬಿಸುತ್ತಿರುವ ಪ್ರೇಕ್ಷಕರು, ಕ್ರೀಡೆ ಉತ್ತೇಜನಕ್ಕಾಗಿ ವಿಜೇತರಿಗೆ ಲಕ್ಷ, ಲಕ್ಷ ಬಹುಮಾನ ನೀಡಿ ಕ್ರೀಡಾಪಟುಗಳನ್ನ ಗೌರವಿಸಿದ ಆಯೋಜಕರು, ಅಂದಹಾಗೆ ಇಂತಹವೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ಗೋಕಾಕ ತಾಲೂಕಿನ ಕೊಣ್ಣೂರಿನ ಮರಡಿ ಮಠದ ಶ್ರೀ ಕಾಡಸಿದ್ದೇಶ್ವರ ಜಾತ್ರೆ.

ಹೌದು, ಕರ್ನಾಟಕ ಕಬಡ್ಡಿ ಅಮೆಚೂರು ಪೆಡರೇಶನ್ ಸಹಯೋಗದಲ್ಲಿ ಕ್ರೀಡಾ ಪ್ರೇಮಿ, ಘನ ಲಿಂಗ ಚಕ್ರವರ್ತಿ ಶ್ರೀ ಡಾ: ಪವಾಡೇಶ್ವರ ಮಹಾಸ್ವಾಮಿಗಳ ಸಾರಥ್ಯದಲ್ಲಿ  ಅಖಿಲ ಭಾರತ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿತ್ತು. 

ಇದನ್ನೂ ಓದಿ- IPL 2024 ಹರಾಜು ಯಾವಾಗ, ಲೈವ್ ಸ್ಟ್ರೀಮಿಂಗ್ ಎಲ್ಲಿ, ತಂಡಗಳ ಬಳಿ ಇರುವ ಹಣವೇಷ್ಟು.? ಇಲ್ಲಿದೆ ಮಾಹಿತಿ

ಮರಡಿ ಮಠದ ಶ್ರೀ ಕಾಡಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ದೇಶದ ಪ್ರತಿಷ್ಠಿತ  12 ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸುವ ಮೂಲಕ ಒಟ್ಟು 34 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ವಿಶೇಷ ರೋಮಾಂಚನವಾಗಿ ನಡೆದ ಸಿ‌ಐ‌ಎಸ್‌ಎಫ್  ಮತ್ತು ಈಸ್ಟರ್ನ್ ರೈಲ್ವೆ ಮದ್ಯ ಪೈನಲ್ ಪಂದ್ಯವನ್ನು ರಾಷ್ಟ್ರಗೀತೆ ಹಾಡಿ ಪ್ರಾರಂಭಿಸಿದರು. ಈ ಪಂದ್ಯದಲ್ಲಿ ಸಿ‌ಎಸ್‌ಐ‌ಎಫ್ ಪ್ರಥಮ ಸ್ಥಾನ ಪಡೆದರೆ,  ಈಸ್ಟರ್ನ್ ರೈಲ್ವೆ ದ್ವಿತೀಯ ಸ್ಥಾನ ಪಡೆದಿದೆ.  ಜೈ ಮಹಾಕಾಳಿ ಚಿಂಚಲಿ ತಂಡಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಈ ಎಲ್ಲಾ ತಂಡಗಳಿಗೆ  ವಿವಿಧ ಮಠಾಧೀಶರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಇದರೊಂದಿಗೆ ಮೂರು ದಿನಗಳ ರೊಮಾಂಚನಕಾರಿ ಪಂದ್ಯಾವಳಿಗೆ ಅದ್ಧೂರಿ ತೆರೆ ಎಳೆದರು.

ಇದನ್ನೂ ಓದಿ- RCB ತಂಡಕ್ಕೆ‌ ಹಿಟ್‌ ಮ್ಯಾನ್‌ ರೋಹಿತ್‌ ಕ್ಯಾಪ್ಟನ್‌..!? ಎಲ್ಲಾ ತಂಡಗಳಿಗೆ ನಡುಕ ಶುರು

ಕಬಡ್ಡಿ ಪಂದ್ಯಾವಳಿಗಳನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಹಿಳಾ ಕಬಡ್ಡಿಗೆ ಇನ್ನಷ್ಟು ಉತ್ತೇಜನ ನೀಡಬೇಕೆಂಬ ಕಾರಣದಿಂದ ಶ್ರೀಗಳು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ  ಹಮ್ಮಿಕೊಂಡು ಗ್ರಾಮೀಣ  ಪ್ರತಿಭೆಗಳಿಗೆ ಪ್ರೋತ್ಸಾಹಿಸುತಿದ್ದಾರೆಂದು ಸ್ಥಳಿಯ ಕ್ರೀಡಾ ಪ್ರೇಮಿಗಳು ಶ್ಲ್ಯಾಘನೀಯ ವ್ಯಕ್ತ ಪಡಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News