IPL 2024 ಹರಾಜು ಯಾವಾಗ, ಲೈವ್ ಸ್ಟ್ರೀಮಿಂಗ್ ಎಲ್ಲಿ, ತಂಡಗಳ ಬಳಿ ಇರುವ ಹಣವೇಷ್ಟು.? ಇಲ್ಲಿದೆ ಮಾಹಿತಿ

IPL 2024 auction : ಇಷ್ಟು ದಿನ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ ಬಹು ನಿರೀಕ್ಷಿತ ಐಪಿಎಲ್ 2024 ಮೆಗಾ ಹರಾಜಿನ ಸಮಯ ಹತ್ತಿರ ಬಂದಿದೆ. ನಾಳೆ ದುಬೈನಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಯಾವ ಫ್ರಾಂಚೈಸಿಗಳಲ್ಲಿ ಎಷ್ಟು ಹಣ ಉಳಿದಿದೆ, ಎಷ್ಟು ಆಟಗಾರರಿದ್ದಾರೆ, ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು ಎಂಬ ವಿವರಗಳನ್ನು ತಿಳಿಯೋಣ..

Written by - Krishna N K | Last Updated : Dec 18, 2023, 02:57 PM IST
  • ಐಪಿಎಲ್ 2024 ಮೆಗಾ ಹರಾಜಿನ ಸಮಯ ಹತ್ತಿರ ಬಂದಿದೆ.
  • ನಾಳೆ ದುಬೈನಲ್ಲಿ ಐಪಿಎಲ್ ಹರಾಜು ನಡೆಯಲಿದೆ.
  • ಎಷ್ಟು ಆಟಗಾರರಿದ್ದಾರೆ, ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ.
IPL 2024 ಹರಾಜು ಯಾವಾಗ, ಲೈವ್ ಸ್ಟ್ರೀಮಿಂಗ್ ಎಲ್ಲಿ, ತಂಡಗಳ ಬಳಿ ಇರುವ ಹಣವೇಷ್ಟು.? ಇಲ್ಲಿದೆ ಮಾಹಿತಿ title=

IPL 2024 auction live : IPL 2024 ಹರಾಜು ನಾಳೆ ಅಂದರೆ ಡಿಸೆಂಬರ್ 19 ರಂದು ಮಧ್ಯಾಹ್ನ 1 ಗಂಟೆಗೆ ದುಬೈನಲ್ಲಿ ನಡೆಯಲಿದೆ. ಹರಾಜಿನಲ್ಲಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿದ್ದು, 333 ಮಂದಿ ಶಾರ್ಟ್‌ಲಿಸ್ಟ್ ಆಗಿದ್ದಾರೆ. 214 ಭಾರತೀಯ ಆಟಗಾರರು ಮತ್ತು 119 ವಿದೇಶಿ ಆಟಗಾರರು ಇದ್ದಾರೆ. ಎಲ್ಲಾ ಫ್ರಾಂಚೈಸಿಗಳು ಸೇರಿ 77 ಜನರನ್ನು ನೇಮಿಸಿಕೊಳ್ಳುತ್ತವೆ.

ದೇಶದ ಹೊರಗೆ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು. ಈ ಬಾರಿಯ ಹರಾಜಿನಲ್ಲಿ ಆಸ್ಟ್ರೇಲಿಯಾದ ಮೂವರು ಪ್ರಮುಖ ಆಟಗಾರರಾದ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಎಲ್ಲ ತಂಡಗಳೂ ಇವರತ್ತ ಗಮನ ಹರಿಸಿರುವುದರಿಂದ ಭಾರೀ ಬೆಲೆ ತೆರುವ ಸಾಧ್ಯತೆಯೂ ಇದೆ. 

ಇದನ್ನೂ ಓದಿ: RCB ತಂಡಕ್ಕೆ‌ ಹಿಟ್‌ ಮ್ಯಾನ್‌ ರೋಹಿತ್‌ ಕ್ಯಾಪ್ಟನ್‌..!? ಎಲ್ಲಾ ತಂಡಗಳಿಗೆ ನಡುಕ ಶುರು

ಲೈವ್‌ ಸ್ಟ್ರೀಮಿಂಗ್‌ ಎಲ್ಲಿ : IPL 2024 ಹರಾಜು ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಆದರೆ ಸ್ಟಾರ್ ಸ್ಪೋರ್ಟ್ಸ್ ಹರಾಜು ನೇರ ಪ್ರಸಾರವನ್ನು ನೀಡುತ್ತಿಲ್ಲ. ನೀವು ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ನಾಳೆ ಮಧ್ಯಾಹ್ನ 1 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. 

IPL 2024 ಹರಾಜು-ಫ್ರಾಂಚೈಸ್‌ನ ಪರ್ಸ್‌ನಲ್ಲಿ ಎಷ್ಟು? : ಗುಜರಾತ್ ಟೈಟಾನ್ಸ್ 38.15 ಕೋಟಿ, ಸನ್ ರೈಸರ್ಸ್ ಹೈದರಾಬಾದ್ 34 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 32.7 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 31.4 ಕೋಟಿ, ಪಂಜಾಬ್ ಕಿಂಗ್ಸ್ ಇಲೆವೆನ್ 29.1 ಕೋಟಿ, ದೆಹಲಿ ಕ್ಯಾಪಿಟಲ್ಸ್ 28.95 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 23.25 ಕೋಟಿ, ಮುಂಬೈ ಇಂಡಿಯನ್ಸ್ 17.75 ಕೋಟಿ, ರಾಜಸ್ಥಾನ್ ರಾಯಲ್ಸ್ 14.5 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ 13.15 ಕೋಟಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News