ಛತ್ತೀಸ್‌ಗಢದ ಬೋಡ್ಲಿ ಐಇಡಿ ಬ್ಲಾಸ್ಟ್‌ನಲ್ಲಿ ಸಿಆರ್‌ಪಿಎಫ್ ಜವಾನ್ ಹುತಾತ್ಮ

ಹುತಾತ್ಮರಾದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಿಹಾರದ ನವಾಡಾ ನಿವಾಸಿ ರೋಶನ್ ಕುಮಾರ್ ಎಂದು ಗುರುತಿಸಲಾಗಿದೆ.

Last Updated : Jul 31, 2019, 09:16 AM IST
ಛತ್ತೀಸ್‌ಗಢದ ಬೋಡ್ಲಿ ಐಇಡಿ ಬ್ಲಾಸ್ಟ್‌ನಲ್ಲಿ ಸಿಆರ್‌ಪಿಎಫ್ ಜವಾನ್ ಹುತಾತ್ಮ  title=
Representative image

ದಂತೇವಾಡಾ: ಛತ್ತೀಸ್‌ಗಢದ ದಂತೇವಾಡದ ಬೊಡ್ಲಿ ಬಳಿ ಬುಧವಾರ ಬೆಳಿಗ್ಗೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನ್ ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ಸೈನಿಕನನ್ನು ಬಿಹಾರದ ನವಾಡಾ ನಿವಾಸಿ ರೋಶನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಸಿಆರ್‌ಪಿಎಫ್ನ 195 ಬೆಟಾಲಿಯನ್ ನ ಭಾಗವಾಗಿದ್ದರು.

ಮಂಗಳವಾರ ಬೆಳಿಗ್ಗೆ 6:15 ರ ಸುಮಾರಿಗೆ ದಂತೇವಾಡ-ಜಗದಾಲ್‌ಪುರ ಗಡಿ ಬಳಿಯ ಮಾಲೆವಾಹಿ ಸಿಆರ್‌ಪಿಎಫ್ ಶಿಬಿರದಿಂದ ಸುಮಾರು 700 ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿದೆ. ಐಇಡಿ ಬಾಂಬ್‌ನಲ್ಲಿ ಒತ್ತಡದ ಕಾರ್ಯವಿಧಾನವನ್ನು ಬಳಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೃತ ಜವಾನ್ ರೋಶನ್ ಕುಮಾರ್ ಅವರ ಮೃತದೇಹವನ್ನು ಬುಧವಾರ ಛತ್ತೀಸ್‌ಗಢದ ಬರ್ಸೂರ್‌ಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
 

Trending News