ತನ್ನ ದೀರ್ಘಾಯುಷ್ಯಕ್ಕಾಗಿ ಪತ್ನಿ ಉಪವಾಸ ಮಾಡಿಲ್ಲ ಎಂದು ಪತ್ನಿ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಪತಿ !

Husband-Wife Dispute:ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡಿಲ್ಲ ಎನ್ನುವ ಕಾರಣಕ್ಕೆ ಪತ್ನಿ 'ಕರ್ವಾ ಚೌತ್' ಉಪವಾಸ ವೃತ ಆಚರಿಸಲು ಕೂಡಾ ನಿರಾಕರಿಸಿದ್ದಳು ಎನ್ನುವ ಆರೋಪ ಪತಿಯದ್ದು.  

Written by - Ranjitha R K | Last Updated : Dec 23, 2023, 12:25 PM IST
  • ಪತಿಯ ವಿಚ್ಛೇದನ ಅರ್ಜಿಗೆ ಕೌಟುಂಬಿಕ ನ್ಯಾಯಾಲಯ ಅಸ್ತು
  • ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ ಪತ್ನಿ
    '
  • ಕರ್ವಾ ಚೌತ್' ಉಪವಾಸ ವೃತ ಆಚರಿಸಲು ಪತ್ನಿ ನಿರಾಕರಣೆ
ತನ್ನ ದೀರ್ಘಾಯುಷ್ಯಕ್ಕಾಗಿ ಪತ್ನಿ ಉಪವಾಸ ಮಾಡಿಲ್ಲ ಎಂದು ಪತ್ನಿ ವಿರುದ್ದ ಕೋರ್ಟ್ ಮೆಟ್ಟಿಲೇರಿದ  ಪತಿ ! title=

Husband-Wife Dispute : ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿ ಉಪವಾಸ ವೃತ ಆಚರಿಸುವುದು ಕರ್ವಾ ಚೌತ್ ಹಬ್ಬದ  ಸಂಪ್ರದಾಯ. ಆದರೆ ಈ ದಿನದಂದು ಪತ್ನಿ  ಉಪವಾಸ ಮಾಡುವುದು ಅಥವಾ ಮಾಡದೇ ಇರುವುದು ಅದು ಆಕೆಯ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಇಲ್ಲೊಬ್ಬ ಪತಿ ವಿಚ್ಛೇದನ ಅರ್ಜಿಯಲ್ಲಿ ಈ ಕಾರಣವನ್ನು ನಮೂದಿಸಿದ್ದಾನೆ. ಪತಿಯ ವಿಚ್ಛೇದನ ಅರ್ಜಿಗೆ ಕೌಟುಂಬಿಕ ನ್ಯಾಯಾಲಯ ಅಸ್ತು ಎಂದಿತ್ತು. ಕೌಟುಂಬಿಕ ನ್ಯಾಯಾಲಯದ  ತೀರ್ಪನ್ನು ಪ್ರಶ್ನಿಸಿ ಪತ್ನಿ ಹೈ ಕೋರ್ಟ್ ಮೆಟ್ಟಿಲೇರಿದ್ದಳು. 

ಏನಿದು ಪ್ರಕರಣ : 
ದಂಪತಿ ಏಪ್ರಿಲ್ 2009 ರಲ್ಲಿ ವಿವಾಹವಾಗಿದ್ದು, ಅಕ್ಟೋಬರ್ 2011 ರಲ್ಲಿ ಇವರಿಗೆ ಹೆಣ್ಣು ಮಗು ಜನಿಸಿದ್ದಾಳೆ. ಆದರೆ ಮಗುವಿಗೆ ಜನ್ಮ ನೀಡುವುದಕ್ಕಿಂತ ಕೆಲವು ದಿನಗಳ ಮೊದಲು ಮಹಿಳೆ ತನ್ನ ಅತ್ತೆಯ ಮನೆಯನ್ನು ತೊರೆದಿದ್ದಳು. ಈ ಬಗ್ಗೆ  ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದ ಪತಿ,  ವೈವಾಹಿಕ ಜೀವನದ ಆರಂಭದಿಂದಲೂ, ಪತ್ನಿ ತನ್ನ ಬಗ್ಗೆ ಅಸಡ್ಡೆ ಹೊಂದಿದ್ದರು. ವೈವಾಹಿಕ ಜವಾಬ್ದಾರಿಗಳನ್ನು ಪೂರೈಸಲು ಆಸಕ್ತಿ ಹೊಂದಿಲ್ಲ ಎಂದು  ದೂರಿದ್ದಾರೆ. 

ಇದನ್ನೂ ಓದಿ : ಮೋದಿ ಆಡಳಿತದಲ್ಲಿ ಭಾರತ : ಬದಲಾಗುತ್ತಿರುವ ರಾಷ್ಟ್ರದಲ್ಲಿ ನಾಯಕತ್ವ, ಪ್ರಗತಿಗಳೊಡನೆ ವಿವಾದಗಳ ಹುತ್ತ

ಸಣ್ಣ ಪುಟ್ಟ ವಿಷಯಗಳಿಗೂ ಪತ್ನಿ ಕೋಪಗೊಂಡು ಮನೆಯವರೊಂದಿಗೆ ಜಗಳವಾಡುತ್ತಿದ್ದಳು ಎಂದು ಪತಿ ಆರೋಪಿಸಿದ್ದಾರೆ. ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡಿಲ್ಲ ಎನ್ನುವ ಕಾರಣಕ್ಕೆ ಪತ್ನಿ 'ಕರ್ವಾ ಚೌತ್' ಉಪವಾಸ ವೃತ ಆಚರಿಸಲು ಕೂಡಾ ನಿರಾಕರಿಸಿದ್ದಳು ಎನ್ನುವ ಆರೋಪ ಪತಿಯದ್ದು.  

2011ರ ಏಪ್ರಿಲ್‌ನಲ್ಲಿ ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದಾಗ ಆತನನ್ನು ನೋಡಿಕೊಳ್ಳುವ ಬದಲು ಪತ್ನಿ ಹಣೆಯಲ್ಲಿದ್ದ ಕುಂಕುಮ ಅಳಿಸಿ, ಬಳೆಗಳನ್ನು ಒಡೆದು,  ಬಿಳಿ ಬಟ್ಟೆ ಧರಿಸಿ ತಾನು ವಿಧವೆಯಾಗಿದ್ದೇನೆ ಎಂಡು ಹೇಳಿಕೊಂಡಿದ್ದಾಳೆ ಎನ್ನುವುದನ್ನು ಪತಿ ಕೋರ್ಟ್ ಗಮನಕ್ಕೆ ತಂದಿದ್ದಾನೆ. ಈ ಘಟನೆಯನ್ನು 'ವೈವಾಹಿಕ ಸಂಬಂಧವನ್ನು ತಿರಸ್ಕರಿಸುವ ಅಂತಿಮ ಹಂತ' ಎಂದು ಹೈಕೋರ್ಟ್ ಬಣ್ಣಿಸಿದೆ. ಹೀಗಾಗಿ ಪತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. 

ಆದರೆ 'ಕರ್ವಾ ಚೌತ್' ದಿನದಂದು ಉಪವಾಸ ಮಾಡುವುದು ವೈಯಕ್ತಿಕ ಆಯ್ಕೆ. ಅದನ್ನು ವಸ್ತುನಿಷ್ಠವಾಗಿ ಪರಿಗಣಿಸಿದರೆ ಅದನ್ನು ಕ್ರೌರ್ಯ ಎದ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. 

ಇದನ್ನೂ ಓದಿ : ಟ್ರೇನ್‌ನಲ್ಲಿ ವೃದ್ಧ ದಂಪತಿಗಳು 22,000 ರೂ. ದಂಡ: ಆದರೆ ಮಗನಿಗೆ 40000 ರೂ. ಪರಿಹಾರ!

ಪತಿ-ಪತ್ನಿಯರಲ್ಲಿ ಯಾರಾದರೂ ವೈವಾಹಿಕ ಸಂಬಂಧಗಳನ್ನು ಕಸಿದುಕೊಂಡರೆ, ಆ ಸಂಬಂಧ ಉಳಿಯುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, "ಪತಿ ಜೀವಂತವಾಗಿರುವಾಗ ತನ್ನ ಹೆಂಡತಿ ವಿಧವೆಯಾಗಿರುವುದನ್ನು ನೋಡುವುದಕ್ಕಿಂತ ಹೆಚ್ಚಿನ ನೋವು ಬೇರೊಂದಿಲ್ಲ. ಅದು ಕೂಡಾ ಆತ  ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಎಂದು ಹೇಳಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News