Pavi Poovappa on Bigg Boss Kannada: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕೇವಲ ಮನರಂಜನೆ ಮಾತ್ರವಲ್ಲ, ಜೊತೆಗೆ ಅದೆಷ್ಟೋ ವಿವಾದಗಳನ್ನೂ ಹುಟ್ಟುಹಾಕುತ್ತಿದೆ. ಪ್ರೀತಿ, ಸ್ನೇಹ, ಜಗಳ, ಮನಸ್ತಾಪ ಹೀಗೆ ಅದೆಷ್ಟೋ ಭಾವನೆಗಳನ್ನು ಸೃಷ್ಟಿಸಿ ಬೆಸೆಯುವ ರಿಯಾಲಿಟಿ ಶೋ ಎಂದರೂ ತಪ್ಪಾಗಲಾರದು.
ಇದನ್ನೂ ಓದಿ: New Year 2024: ಈ ರಾಶಿಯ ಜನರಿಗೆ ಹೊಸ ವರ್ಷದಲ್ಲಿ ಸಮಸ್ಯೆಗಳು ಬೆನ್ನು ಬಿಡದ ಬೇತಾಳನ ರೀತಿ ಕಾಡಲಿವೆ!
ಅಂದಹಾಗೆ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಶನ್ ನಡೆದಿದೆ. ಈ ಮೂಲಕ ಮೈಕಲ್ ಮತ್ತು ಅವಿನಾಶ್ ಜರ್ನಿ ಅಂತ್ಯ ಕಂಡಿದೆ. ಇದಕ್ಕೂ ಮುನ್ನ ಮನೆಯಿಂದ ಹೊರ ನಡೆದಿದ್ದ ಪವಿ ಪೂವಪ್ಪ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವ ಮುನ್ನ ಯಾವೆಲ್ಲಾ ರೀತಿಯ ಟೆಸ್ಟ್’ಗಳನ್ನು ಮಾಡಿಸಬೇಕೆಂಬುದನ್ನು ಬಹಿರಂಗಪಡಿಸಿದ್ದಾರೆ.
ವಿಜಯವಾಣಿ ಮಾಧ್ಯಮದ ಜೊತೆ ಮಾತುಕತೆ ನಡೆಸಿದ್ದ ಪವಿ ಪೂವಪ್ಪ ಈ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಬೇಕೆಂದರೆ ಕಡ್ಡಾಯವಾಗಿ ಒಂದು ಟೆಸ್ಟ್ ಮಾಡಿಸಬೇಕು. ಅದುವೇ ರಕ್ತಪರೀಕ್ಷೆ. ಮನೆಯೊಳಗೆ ಎಂಟ್ರಿ ಪಡೆಯುವ ಮುನ್ನ ಸ್ಪರ್ಧಿಯ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಟೆಸ್ಟ್ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ಧೂಳಿಪಟ: ಮೂರೇ ದಿನಕ್ಕೆ 400 ಕೋಟಿ ರೂ. ಬಾಚಿದ ‘ಸಲಾರ್’!
ದೊಡ್ಮನೆಯೊಳಗೆ ಆರೋಗ್ಯದಲ್ಲಿ ಏರುಪೇರಾದರೆ, ಬಿಗ್ ಬಾಸ್ ವಿರುದ್ಧ ಆರೋಪಗಳು ಕೇಳಿ ಬರುವ ಸಾಧ್ಯತೆ ಇರುತ್ತದೆ. ಇದೇ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.