Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು!

FD Interest Increase: ನೀವು ಎಫ್‌ಡಿ ಪಡೆಯಲು ಯೋಜಿಸುತ್ತಿದ್ದರೆ ಸುದ್ದಿ ಈ ಸುದ್ದಿ ಕೇವಲ ನಿಮಗಾಗಿ. ಎಫ್‌ಡಿಯಲ್ಲಿ ಹೆಚ್ಚಿನ ಆದಾಯವನ್ನು ಪಡೆಯಲು ನಿಮಗೆ ಉತ್ತಮ ಅವಕಾಶವಿದೆ. ಹೌದು, 4 ಬ್ಯಾಂಕ್‌ಗಳು ಎಫ್ಡಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಇವುಗಳಲ್ಲಿ ಫೆಡರಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಡಿಸಿಬಿ ಬ್ಯಾಂಕ್ ಇತ್ಯಾದಿ ಶಾಮೀಲಾಗಿವೆ. (Business News In Kannada)  

Written by - Nitin Tabib | Last Updated : Jan 3, 2024, 09:00 PM IST
  • 4 ಬ್ಯಾಂಕ್‌ಗಳು ತಮ್ಮ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ
  • ಈಗ ಹೊಸ ವರ್ಷದಲ್ಲಿ ಜನರು ಎಫ್ ಡಿ ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯಲಿದ್ದಾರೆ
  • ಎಫ್‌ಡಿ ಹೊಂದಿರುವವರಿಗೆ ಇದೊಂದು ಉತ್ತಮ ಅವಕಾಶ.
Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು! title=

ನವದೆಹಲಿ: ದೇಶದ ಬಹುತೇಕ ಜನರು ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನೀವು ಸಹ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ. ದೇಶದ 4 ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಇದರಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಬ್ಯಾಂಕ್‌ಗಳ ಹೆಸರುಗಳು ಸೇರಿವೆ. ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮಾಡುವ ಮೂಲಕ ಹೂಡಿಕೆದಾರರು ಶೇಕಡಾ 8.60 ಬಡ್ಡಿ ಪಡೆಯುತ್ತಿದ್ದಾರೆ. ಬ್ಯಾಂಕ್‌ಗಳು ಈ ಹಿಂದಿನ ತನ್ನ ಎಫ್‌ಡಿ  ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಎಫ್ಡಿ  ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ಬ್ಯಾಂಕ್‌ಗಳು ಯಾವುವು ತಿಳಿದುಕೊಳ್ಳೋಣ ಬನ್ನಿ. (Business News In Kannada)

ಈ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿವೆ
ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 1, 2023 ರಿಂದ 2 ಕೋಟಿಯಿಂದ 10 ಕೋಟಿವರೆಗಿನ ಎಫ್‌ಡಿ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್ ಆಫ್ ಇಂಡಿಯಾ 46 ದಿನಗಳಿಂದ 90 ದಿನಗಳ ಎಫ್‌ಡಿಗಳ ಮೇಲೆ ಶೇಕಡಾ 5.25, 91 ರಿಂದ 179 ದಿನಗಳ ಎಫ್‌ಡಿಗಳಲ್ಲಿ ಶೇಕಡಾ 6.00, 180 ದಿನಗಳಿಂದ 210 ದಿನಗಳ ಎಫ್‌ಡಿಗಳಲ್ಲಿ ಶೇಕಡಾ 6.25 ಬಡ್ಡಿಯನು ನೀಡುತ್ತಿದೆ, 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಲ್ಲಿ ಶೇಕಡಾ 6.50 ರಷ್ಟು  ನೀಡುತ್ತಿದೆ. 7.50 ರಷ್ಟು ಬಡ್ಡಿಯನ್ನು ಒಂದು ವರ್ಷದ ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ಅವಧಿಯ ಎಫ್ ಡಿಗಾಗಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ-ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!

ಡಿಸಿಬಿ ಬ್ಯಾಂಕ್
ಡಿಸಿಬಿ ಬ್ಯಾಂಕ್ ಕೂಡ 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿದೆ. ಹೊಸ ದರಗಳು ಡಿಸೆಂಬರ್ 13 ರಿಂದ ಜಾರಿಗೆ ಬಂದಿದ್ದು, ಇದರ ಪ್ರಕಾರ ಸಾಮಾನ್ಯ ಗ್ರಾಹಕರಿಗೆ ಶೇಕಡಾ 8 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 8.60 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಏಳು ದಿನಗಳಿಂದ ಹತ್ತು ವರ್ಷಗಳವರೆಗಿನ ಎಫ್‌ಡಿಗಳಿಗೆ ಶೇ.3.75ರಿಂದ ಶೇ.8ರವರೆಗೆ ಬಡ್ಡಿ ನೀಡಲಾಗುತ್ತಿದೆ ಮತ್ತು ಹಿರಿಯ ನಾಗರಿಕರಿಗೆ ಶೇ.4.25ರಿಂದ ಶೇ.8.60ರಷ್ಟು ಬಡ್ಡಿ ನೀಡಲಾಗುತ್ತಿದೆ.

ಇದನ್ನೂ ಓದಿ-ಒಂದು ಲಕ್ಷಕ್ಕೂ ಕಡಿಮೆ ಬೆಲೆ ಬಾಳುವ ಈ ಸ್ಕೂಟರ್ ಗಳು ಮಹಿಳೆಯರಿಗೆ ಬೆಸ್ಟ್ ಆಯ್ಕೆಯಾಗಿವೆ!

ಇಲ್ಲಿಯೂ ಕೂಡ ನೀವು ಶೇಕಡಾ 7 ಕ್ಕಿಂತ ಹೆಚ್ಚು ಬಡ್ಡಿಯನ್ನು ಪಡೆಯುತ್ತೀರಿ
ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಬಡ್ಡಿದರವನ್ನು ಹೆಚ್ಚಿಸಿದೆ. ಈಗ ಬ್ಯಾಂಕ್ ಎಫ್‌ಡಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 2.75 ರಿಂದ ಶೇಕಡಾ 7.25 ರವರೆಗೆ ಬಡ್ಡಿಯನ್ನು ನೀಡುತ್ತಿದೆ. ಈ ಬಡ್ಡಿ ದರಗಳು ಡಿಸೆಂಬರ್ 11, 2023 ರಿಂದ ಜಾರಿಗೆ ಬಂದಿವೆ. ಫೆಡರಲ್ ಬ್ಯಾಂಕ್ ಡಿಸೆಂಬರ್ 5, 2023 ರಿಂದ ಎಫ್ಡಿಗಳ  ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಇದರಲ್ಲಿ 500 ದಿನಗಳ ಎಫ್‌ಡಿಗೆ ಶೇಕಡಾ 7.50 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಇದಲ್ಲದೆ ಇದೇ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ಶೇ.8.15ರಷ್ಟು ಬಡ್ಡಿ ನೀಡಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News