Laptops: ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಾರೆ. ಜನರು ತಮ್ಮ ಕಚೇರಿ ಕೆಲಸಗಳಿಗಾಗಿ ಬಳಸಿದರೆ, ಮಕ್ಕಳು ಆನ್‌ಲೈನ್ ತರಗತಿಗಳನ್ನು ಕೇಳಲು ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಾರೆ. ಜೀವನದ ಒಂದು ಭಾಗವಾಗಿಯೇ ಲ್ಯಾಪ್‌ಟಾಪ್ ಕಾರ್ಯನಿರ್ವಹಿಸುತ್ತದೆ. ಇನ್ನೂ ಕೆಲವರು ಆಟವಾಡಲು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಲ್ಯಾಪ್‌ಟಾಪ್‌ಗಳನ್ನು ಸಹ ಬಳಸುತ್ತಾರೆ.
ನೀವು ಉತ್ತಮ ಲ್ಯಾಪ್‌ಟಾಪ್‌ಗಳನ್ನು ಹುಡುಕುತ್ತಿದ್ದು, ಮತ್ತು ಖರೀದಿಸಲು ನೀವು ಬಯಸಿದರೆ, ಈ ಸ್ಟೋರಿ ನಿಮಗೆ ಉಪಯುಕ್ತವಾಗಲಿದೆ. ಏಕೆಂದರೆ ಅಮೆಜಾನ್‌ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಪ್ರಾರಂಭವಾಗಿದೆ . ಅಲ್ಲದೇ, ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳಲ್ಲಿ ಉತ್ತಮ ಡೀಲ್‌ಗಳಲ್ಲಿಯೂ ಈಗ ಲಭ್ಯವಿವೆ. ನೀವು ರಿಯಾಯಿತಿಯಲ್ಲಿ ಖರೀದಿಸಬಹುದಾದ ಅಂತಹ ಲ್ಯಾಪ್‌ಟಾಪ್‌ಗಳ ಬಗ್ಗೆ ನಾವು ಹೇಳಲೋರಟ್ಟಿದ್ದೇವೆ. ಅವುಗಳೆಂದರೆ,
ಇದನ್ನೂ ಓದಿ: Microsoft Surface Laptop SE: ವಿದ್ಯಾರ್ಥಿಗಳಿಗಾಗಿ ಅತ್ಯಂತ ಅಗ್ಗದ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್
* ASUS Vivobook 15:
ಅತ್ಯುತ್ತಮ ಕಾರ್ಯಕ್ಷಮತೆಗಾಗಿ, ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i5-12500H 12 ನೇ ಜನ್ ಪ್ರೊಸೆಸರ್ ಅನ್ನು ಹೊಂದಿದೆ. ಇದು 15.6 ಇಂಚಿನ ಪರದೆಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 16GB RAM ಮತ್ತು 512GB ಹಾರ್ಡ್ ಡಿಸ್ಕ್‌ನೊಂದಿಗೆ ಬರುತ್ತದೆ ಮತ್ತು Windows 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಇದು ಕೈಗೆಟುಕುವ ಬೆಲೆಯಲ್ಲಿ Amazon ನಲ್ಲಿ ಲಭ್ಯವಿದೆ. ಇದರ ಬೆಲೆ ರೂ 76,990 ಆದರೆ ಅದರ ಮೇಲೆ 31% ರಿಯಾಯಿತಿ ಲಭ್ಯವಿದೆ. ಕೊಡುಗೆಯ ನಂತರ ಇದು 52,990 ರೂ.ಗೆ ಲಭ್ಯವಿದೆ.
* Lenovo IdeaPad Slim 3 :
ಈ Lenovo ಲ್ಯಾಪ್‌ಟಾಪ್ Intel Core i7 11th Gen ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ವಿಂಡೋಸ್ 11 ಆಪರೇಟಿಂಗ್ ಸಿಸ್ಟಂನಲ್ಲಿ 16GB RAM ಮತ್ತು 512GB ಹಾರ್ಡ್ ಡಿಸ್ಕ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್‌ನೊಂದಿಗೆ 1 ವರ್ಷದ ವಾರಂಟಿ ಲಭ್ಯವಿದೆ. ಇದರ ಬೆಲೆ ರೂ 76,690 ಆದರೆ ಅದರ ಮೇಲೆ 27% ರಿಯಾಯಿತಿ ಇದೆ. ನೀವು ಇದನ್ನು ಖರೀದಿಸಲು ಬಯಸಿದರೆ, ನೀವು ಅಮೆಜಾನ್‌ನಿಂದ 57,990 ರೂ.ಗೆ ಆರ್ಡರ್ ಮಾಡಬಹುದು.
ಇದನ್ನೂ ಓದಿ: Tech Tips: ಲ್ಯಾಪ್ ಟಾಪ್ ಪದೇ ಪದೇ ಹ್ಯಾಂಗ್ ಆಗುತ್ತದೆಯೇ? ಈ ಸಲಹೆಗಳನ್ನು ಟ್ರೈ ಮಾಡಿ ನೋಡಿ
* HP ಲ್ಯಾಪ್‌ಟಾಪ್ 15s :
ಈ ಲ್ಯಾಪ್‌ಟಾಪ್‌ನಲ್ಲಿ ಉತ್ತಮ ವೈಶಿಷ್ಟ್ಯಗಳು ಲಭ್ಯವಿವೆ. ಇದು 12 ನೇ ಜನ್ ಇಂಟೆಲ್ ಕೋರ್ i3-1215U ಪ್ರೊಸೆಸರ್ ಮತ್ತು 15.6 ಇಂಚಿನ ಪರದೆಯನ್ನು ನೀಡುತ್ತದೆ. ಇದು 8GB DDR4 RAM ಮತ್ತು 512GB ಸಂಗ್ರಹದೊಂದಿಗೆ Intel UHD ಗ್ರಾಫಿಕ್ಸ್ ಅನ್ನು ಹೊಂದಿದೆ. ಇದರ MRP ರೂ 56,261 ಆದರೆ ಇದು Amazon ನಲ್ಲಿ 32% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು 37,999 ರೂ.ಗೆ ಆರ್ಡರ್ ಮಾಡಬಹುದು.
* Lenovo IdeaPad Gaming 3 ಲ್ಯಾಪ್‌ಟಾಪ್ :
ಗೇಮಿಂಗ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅತ್ಯುತ್ತಮ ಕಾರ್ಯಕ್ಷಮತೆಗಾಗಿ, ಇದು Intel Core i5 11th Gen ಪ್ರೊಸೆಸರ್ ಮತ್ತು 15.6 ಇಂಚಿನ ಪರದೆಯನ್ನು ಹೊಂದಿದೆ. ಇದು Windows 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು NVIDIA GeForce GTX 1650 ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ. ಇದರ ಬೆಲೆ ರೂ 82,490 ಆದರೆ ಅದರ ಮೇಲೆ 42% ರಷ್ಟು ದೊಡ್ಡ ರಿಯಾಯಿತಿ ಲಭ್ಯವಿದೆ. ರಿಯಾಯಿತಿಯ ನಂತರ, ನೀವು ಅದನ್ನು ರೂ 47,990 ಗೆ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.