Breath For Smartphone Unlock: ಇನ್ಮುಂದೆ ಫಿಂಗರ್ ಪ್ರಿಂಟ್ ಅಲ್ಲ, ಉಸಿರಿನಿಂದ ಅನ್ಲಾಕ್ ಆಗಲಿದೆ ಸ್ಮಾರ್ಟ್ ಫೋನ್!

Breath For Smartphone Unlock: ಉಸಿರಾಟದ ಸಮಯದಲ್ಲಿ ಗಾಳಿಯಲ್ಲಿ ಉಂಟಾಗುವ ಪ್ರಕ್ಷುಬ್ಧತೆ ಅಥವಾ ಕಂಪನ ಬಯೋಮೆಟ್ರಿಕ್ ದೃಢೀಕರಣ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾರತೀಯ ವಿಜ್ಞಾನಿಗಳ ತಂಡವು ಪತ್ತೆಹಚ್ಚಿದೇ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹಲವು ವಿಧದ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ, ಆದರೆ ಬಯೋಮೆಟ್ರಿಕ್ಸ್‌ಗಾಗಿ ಉಸಿರನ್ನು ಬಳಸುವುದು ಸಂಪೂರ್ಣವಾಗಿ ಹೊಸ ವಿಧಾನವಾಗಿರಲಿದೆ. (Technology News In Kannada)  

Written by - Nitin Tabib | Last Updated : Jan 15, 2024, 09:03 PM IST
  • ಉಸಿರಾಟದ ದತ್ತಾಂಶವನ್ನು ವಿಶ್ಲೇಷಿಸುವ ಮೂಲಕ ಮಾಹಿತಿ ಸಂಗ್ರಹ
  • ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಈ ಪ್ರಯೋಗವನ್ನು ನಡೆಸಿದ್ದಾರೆ
  • ಈ ತಂತ್ರಜ್ಞಾನ ಬಂದರೆ ಸ್ಮಾರ್ಟ್ ಫೋನ್ ಗಳು ಉಸಿರಿಲ್ಲದೆ ಅನ್ ಲಾಕ್ ಆಗುವುದಿಲ್ಲ
Breath For Smartphone Unlock: ಇನ್ಮುಂದೆ ಫಿಂಗರ್ ಪ್ರಿಂಟ್ ಅಲ್ಲ, ಉಸಿರಿನಿಂದ ಅನ್ಲಾಕ್ ಆಗಲಿದೆ ಸ್ಮಾರ್ಟ್ ಫೋನ್! title=

ನವದೆಹಲಿ: ಭಾರತೀಯ ವಿಜ್ಞಾನಿಗಳು ದೊಡ್ಡ ಹಕ್ಕೊಂದನ್ನು ಮಂಡಿಸಿದ್ದಾರೆ. ಉಸಿರಾಟದ ಸಮಯದಲ್ಲಿ ಗಾಳಿಯಲ್ಲಿ ಉಂಟಾಗುವ ಪ್ರಕ್ಷುಬ್ಧತೆ ಅಥವಾ ಕಂಪನ ಅಥವಾ ಟರ್ಬ್ಯೂಲೆನ್ಸ್ ಅನ್ನು  ಬಯೋಮೆಟ್ರಿಕ್ ದೃಢೀಕರಣ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹಕ್ಕನ್ನು ಮಂಡಿಸಿದ್ದಾರೆ. ಅಂದರೆ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳನ್ನು ಆ ಕಂಪನದಿಂದ ಅನ್‌ಲಾಕ್ ಮಾಡಬಹುದು. ಇದರಿಂದ ಮರಣ ಹೊಂದಿದ ವ್ಯಕ್ತಿಯ ವೈಯಕ್ತಿಕ ಗ್ಯಾಜೆಟ್ ಅನ್ಲಾಕ್ ಮಾಡಲು ಸಾಧ್ಯವಿಲ್ಲ ಎಂಬುದು ಇದರ ದೊಡ್ಡ ಪ್ರಯೋಜನವಾಗಿದೆ. ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಹೇಶ್ ಪಂಚಾಗ್ನುಲಾ ಮತ್ತು ಅವರ ತಂಡ ತಮ್ಮ ಪ್ರಯೋಗಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. (Technology News In Kannada)

ಗಾಳಿಯ ಒತ್ತಡ ಸಂವೇದಕಗಳಿಂದ ದಾಖಲಿಸಲ್ಪಟ್ಟ ಉಸಿರಾಟದ ಡೇಟಾವನ್ನು ತಂಡವು ಪ್ರಯೋಗಿಸಿದೆ. ಆರಂಭದಲ್ಲಿ, ವಿಜ್ಞಾನಿಗಳ ಉದ್ದೇಶವು ಕೃತಕ ಬುದ್ಧಿಮತ್ತೆಯ ಮಾದರಿಯನ್ನು ಅಭಿವೃದ್ಧಿಪಡಿಸುವುದು ಮಾತ್ರವಾಗಿತ್ತು, ಇದು ಉಸಿರಾಟದ ಕಾಯಿಲೆಗಳ ರೋಗಿಗಳನ್ನು ಗುರುತಿಸುತ್ತದೆ. ಆದರೆ ಉಸಿರಾಟದ ದತ್ತಾಂಶಗಳು ವಿಜ್ಞಾನಿಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಿದೆ.

ಕೃತಕ ಬುದ್ಧಿಮತ್ತೆ ಮಾದರಿಯು ವ್ಯಕ್ತಿಯ ಉಸಿರಾಟದ ಡೇಟಾವನ್ನು ವಿಶ್ಲೇಷಿಸಿದ ನಂತರ, ವ್ಯಕ್ತಿಯು ಹೊಸ ಉಸಿರಾಟವನ್ನು ತೆಗೆದುಕೊಂಡಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಶೇ. 97 ರಷ್ಟು ನಿಖರತೆಯೊಂದಿಗೆ ಪರಿಶೀಲಿಸಬಹುದು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ-Google Kids App: ಮಕ್ಕಳ ಓದಿನಲ್ಲಿ ತುಂಬಾ ಸಹಕಾರಿಯಾಗಿದೆ ಈ ಅದ್ಭುತ ಆಪ್, ಇಂದೇ ಡೌನ್ ಲೋಡ್ ಮಾಡಿ!

ಕೃತಕ ಬುದ್ಧಿಮತ್ತೆ ಮಾದರಿಯು ಇಬ್ಬರು ಜನರ ಉಸಿರಾಟದ ನಡುವೆ ವ್ಯತ್ಯಾಸವನ್ನು ತೋರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ಸಹ ಸಂಶೋಧಕರು ಪರೀಕ್ಷಿಸಿದ್ದಾರೆ. ಅವರು ಈ ಕಾರ್ಯವನ್ನು ಶೇಕಡಾ 50 ಕ್ಕಿಂತ ಹೆಚ್ಚು ನಿಖರತೆಯೊಂದಿಗೆ ಪೂರ್ಣಗೊಳಿಸಿದ್ದಾರೆ. ಎಐ ಮಾದರಿಯು ಉಸಿರಾಟದ ಸಮಯದಲ್ಲಿ ವ್ಯಕ್ತಿಯ ಮೂಗು, ಬಾಯಿ ಮತ್ತು ಗಂಟಲು ಸೃಷ್ಟಿಸುವ ಟರ್ಬ್ಯೂಲೆನ್ಸ್  ವಿಶೇಷ ಮಾದರಿಯನ್ನು ಗುರುತಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದನ್ನೂ ಓದಿ-Bad News: ಜಿಯೋ-ಏರ್ಟೆಲ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್, 4ಜಿ ಪ್ಲಾನ್ ನಲ್ಲಿ ಇನ್ಮುಂದೆ ಸಿಗಲ್ಲ ಈ ಸೇವೆ!

ಈ ಪ್ರಯೋಗವು ಪ್ರಾಥಮಿಕವಾಗಿದ್ದರೂ, ಇದು ಉತ್ತೇಜನಕಾರಿಯಾಗಿದೆ. ಪ್ರಸ್ತುತ, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅನೇಕ ರೀತಿಯ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ, ಆದರೆ ಬಯೋಮೆಟ್ರಿಕ್ಸ್‌ಗಾಗಿ ಉಸಿರನ್ನು ಬಳಸುವುದು ಸಂಪೂರ್ಣವಾಗಿ ಹೊಸ ವಿಧಾನವಾಗಿ ಹೊರಹೊಮ್ಮಲಿದೆ. ಮೃತ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳು ಅನ್‌ಲಾಕ್ ಆಗುತ್ತಿರುವುದನ್ನು ನಾವು ಹಲವು ಚಲನಚಿತ್ರಗಳಲ್ಲಿ ನೋಡಿದ್ದೇವೆ. ಗ್ಯಾಜೆಟ್‌ಗಳು ಉಸಿರಾಟದ ಮೂಲಕ ಅನ್‌ಲಾಕ್ ಮಾಡಲು ಪ್ರಾರಂಭಿಸುತ್ತವೆ, ಹೀಗಾಗಿ ಮೃತಪಟ್ಟ ಬಳಿಕ ಆ ವ್ಯಕ್ತಿಗೆ ಸಂಬಧಿಸಿದ ಸಾಧನವೂ ಅನ್‌ಲಾಕ್ ಆಗುವುದಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News