ತೆಲಂಗಾಣದಲ್ಲಿ ಟಿಡಿಪಿಗೆ ಬಿಗ್ ಶಾಕ್; 60 ಮಂದಿ ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆ!

ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ರಾಜ್ಯದ 60 ಹಿರಿಯ ನಾಯಕರು ಟಿಡಿಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದಾರೆ.

Last Updated : Aug 19, 2019, 07:46 AM IST
ತೆಲಂಗಾಣದಲ್ಲಿ ಟಿಡಿಪಿಗೆ ಬಿಗ್ ಶಾಕ್; 60 ಮಂದಿ ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆ! title=

ಹೈದರಾಬಾದ್: ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ರಾಜ್ಯದ 60 ಹಿರಿಯ ನಾಯಕರು ಟಿಡಿಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದಾರೆ. ಟಿಡಿಪಿಯ ಈ ನಾಯಕರೊಂದಿಗೆ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಸಾವಿರಾರು ಕಾರ್ಮಿಕರು ಬಿಜೆಪಿಗೆ ಸೇರಿದರು.

ಈ ಸಂದರ್ಭದಲ್ಲಿ ಟಿಡಿಪಿಯನ್ನು ತೊರೆದು ಜೂನ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾದ ಲಂಕಾ ದಿನಕರನ್, "ತೆಲಂಗಾಣ ಬಿಜೆಪಿಗೆ ಸಂಬಂಧಪಟ್ಟಂತೆ ಇದು ಬಹಳ ಒಳ್ಳೆಯ ಸಂಕೇತವಾಗಿದೆ. ಇದು ತೆಲಂಗಾಣಕ್ಕೂ ಸಕಾರಾತ್ಮಕ ಸಂಕೇತವಾಗಿದೆ" ಎಂದು ಹೇಳಿದರು. "ತ್ರಿವಳಿ ತಲಾಖ್ ಮತ್ತು 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಅನೇಕ ಹೊಸ ಕಾರ್ಯಕರ್ತರು ಪಕ್ಷಕ್ಕೆ ಸೇರಿದ್ದಾರೆ" ಎಂದು ದಿನಕರನ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, "ಸೆಪ್ಟೆಂಬರ್‌ನಲ್ಲಿ 8 ಲಕ್ಷ ಬೂತ್‌ಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್‌ನಲ್ಲಿ ಮಂಡಲ್ ಚುನಾವಣೆ ಮತ್ತು ನವೆಂಬರ್‌ನಲ್ಲಿ ಜಿಲ್ಲಾ ಮಟ್ಟದ ಚುನಾವಣೆ ನಡೆಯಲಿದೆ. ಡಿಸೆಂಬರ್ 15 ರೊಳಗೆ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ. ಡಿಸೆಂಬರ್ 31 ರ ಮೊದಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯಲಿದೆ ಎಂದರು.

ತೆಲಂಗಾಣದ ಚಂದ್ರಶೇಖರ್ ರಾವ್ ಸರ್ಕಾರವನ್ನೂ  ಗುರಿಯಾಗಿಸಿಕೊಂಡು ವಾಗ್ಧಾಳಿ ನಡೆಸಿದ ನಡ್ಡಾ, "ತೆಲಂಗಾಣದಲ್ಲಿ ಸುಮಾರು 26 ಲಕ್ಷ ಕುಟುಂಬಗಳಿಗೆ ಆಯುಷ್ಮಾನ್ ಭಾರತ್ - ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಪ್ರಯೋಜನ ಸಿಗುತ್ತಿಲ್ಲ, ಏಕೆಂದರೆ ಈ ಯೋಜನೆ ಇಲ್ಲಿ ಜಾರಿಗೆ ಬಂದಿಲ್ಲ. ಇಲ್ಲಿನ ಮುಖ್ಯಮಂತ್ರಿಗೆ ಸಾರ್ವಜನಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲ" ಎಂದು ಹೇಳಿದರು.

ಇದಕ್ಕೂ ಮೊದಲು ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಬಿಜೆಪಿ ಉತ್ತಮ ಯಶಸ್ಸನ್ನು ಕಂಡಿತ್ತು. ಸಿಕ್ಕಿಂ ಡೆಮಾಕ್ರಟಿಕ್ ಪಕ್ಷದ (ಎಸ್‌ಡಿಎಫ್) 10 ಶಾಸಕರು ಕಳೆದ ವಾರ ಬಿಜೆಪಿಗೆ ಸೇರಿದರು. ಈಶಾನ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲದ ಏಕೈಕ ರಾಜ್ಯ ಸಿಕ್ಕಿಂ.

Trending News