ಸಿಎಂ ಸಿದ್ಧರಾಮಯ್ಯ ತಕ್ಷಣ ರಾಜೀನಾಮೆ ಕೊಡಲಿ- ಪ್ರಮೋದ್ ಮುತಾಲಿಕ್

ಕೋರ್ಟ್ ನಲ್ಲಿ ಯಾರ ವಿರುದ್ಧವೂ ಷಡ್ಯಂತರ ಮಾಡೋಕೆ ಬರಲ್ಲ: ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು- ಪ್ರಮೋದ್ ಮುತಾಲಿಕ್..

Written by - Yashaswini V | Last Updated : Sep 26, 2024, 02:24 PM IST
  • ರಾಜ್ಯಾದ್ಯಂತ ಹೆಚ್ಚಾದ ಸಿಎಂ ರಾಜೀನಾಮೆ ಕೂಗು
  • ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹ
  • ಯಾರಗ್ತಾರೆ ಮುಂದಿನ ಕರ್ನಾಟಕ ಸಿಎಂ?
ಸಿಎಂ ಸಿದ್ಧರಾಮಯ್ಯ ತಕ್ಷಣ ರಾಜೀನಾಮೆ ಕೊಡಲಿ- ಪ್ರಮೋದ್ ಮುತಾಲಿಕ್ title=

Siddaramaiah Resign: ಮೈಸೂರು ನಗರಾಭಿವೃದ್ಧಿ (ಮುಡಾ) ಇಲಾಖೆಯಲ್ಲಿನ ಹಗರಣದಲ್ಲಿ ಈಗಾಗಲೇ ಎರಡು ಕೋರ್ಟ್ ಸಾಕಷ್ಟು ಪರಾಮರ್ಶೆ ಮಾಡಿ ಸಿದ್ಧರಾಮಯ್ಯ ನವರ ಮೇಲೆ ದೂರು ದಾಖಲು ಮಾಡಲು ಆದೇಶ ನೀಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯ ಮಾಡಿದರು.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರಮೋದ್ ಮುತಾಲಿಕ್ , ಮುಖ್ಯಮಂತ್ರಿ  ಸಿದ್ಧರಾಮಯ್ಯ ಮೇಲೆ ಎಫ್ ಐ ಆರ್ ಮಾಡಬೇಕು ಎಂಬ ಕೋರ್ಟ್ ಆದೇಶ ವಿಚಾರವಾಗಿ ಸಾಕಷ್ಟು ಚರ್ಚೆ ಸಹ ಆಯಿತು. ಇದೊಂದು ದೀರ್ಘವಾದ ಇದರ ಮೇಲೆ ಚರ್ಚೆ ಆಗಿದ್ದು ನೋಡಿದರೆ ಇದೊಂದು ದೊಡ್ಡ ಪ್ರಕರಣ ಆಗಿದೆ ಅಂತಲೇ ಹೇಳಬಹುದು.  ಮೈಸೂರು ನಗರಾಭಿವೃದ್ಧಿ (ಮುಡಾ) ಇಲಾಖೆಯ ಪ್ರಕರಣದಲ್ಲಿ ಏನೇನು ಆಗಿದೆ ಎಂಬ ಕುರಿತು ಸಾಕಷ್ಟು  ಸಮಯ ಅವಕಾಶ ತೆಗೆದುಕೊಳ್ಳಲಾಯಿತು. ವಾದ ವಿವಾದ ಸಹ ನಡೆಸಲಾಯಿತು. ಮುಡಾ ಹಗರಣದಲ್ಲಿ ಸಿಎಂ ಮೇಲೆ ಗಂಭೀರ ಸ್ವರೂಪದ ಆರೋಪ ಸಹ ಬಂದಿತು ಇದರ ಜೊತೆಗೆ ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಸಹ ದೆಹಲಿಯಿಂದ ಬಂದು ವಾದ ಮಾಡಿದರು. ಆದರೆ ಈಗ ಏನಾಯಿತು ಅಂತಿಮವಾಗಿ ಕೋರ್ಟ್ ಸಿಎಂ ಮೇಲೆ ದೂರು ದಾಖಲೆ ಮಾಡಲು ಅನುಮತಿ ಕೊಟ್ಟಿದೆ. ಕಾರಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಡಮಾಡದೇ  ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು. 

ಇದನ್ನೂ ಓದಿ- ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ಫಿಕ್ಸ್...!

ಕೋರ್ಟ್ ನಲ್ಲಿ ಯಾರ ವಿರುದ್ಧವೂ ಷಡ್ಯಂತರ ಮಾಡೋಕೆ ಬರಲ್ಲ: ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು- ಪ್ರಮೋದ್ ಮುತಾಲಿಕ್..
ಕೋರ್ಟ್ ನಲ್ಲಿ ಯಾರ ವಿರುದ್ಧವೂ ಷಡ್ಯಂತರ ಮಾಡೋಕೆ ಬರಲ್ಲ. ಹೀಗಾಗಿ ಕೋರ್ಟ್ ತೀರ್ಪಿನ ನಂತರವಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಇದನ್ನೂ ಓದಿ- MUDA Scam: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು; ಮಹತ್ವದ ಸಲಹೆ ನೀಡಿದ ನ್ಯಾಸಂತೋಷ್ ಹೆಗ್ಡೆ!

ಹೆಚ್ಚಾದ ಸಿಎಂ ರಾಜೀನಾಮೆ ಕೂಗು: 
ಮುಡಾ ಪ್ರಕರಣದ ತೀರ್ಪು ಹೊರಬಿದ್ದ ಬೆನ್ನಲ್ಲೇ ರಾಜ್ಯಾದ್ಯಂತ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ. 

ಭ್ರಷ್ಟಾಚಾರ ಅಂಟಿದ್ದರು ನಾನು ಪ್ರಾಮಾಣಿಕ ಅನ್ನೋದು ಸಿಎಂ ಸುಳ್ಳು. ಭ್ರಷ್ಟಾಚಾರ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರಿಂದ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗಿದೆ. 

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ತಮ್ಮದೇ ಆದ ಮಹತ್ವ ಹೆಜ್ಜೆ ಗುರುತು ಇದ್ದು ಅವರಿಗೆ ಒಳ್ಳೆಯ ನೈತಿಕತೆ ಸಹ ಇದೆ. ಆದ್ದರಿಂದ ಆ ನೈತಿಕತೆ ಇದ್ದರೆ ಕೂಡಲೇ ಅವರು  ಮೈಸೂರು ನಗರಾಭಿವೃದ್ಧಿ ಇಲಾಖೆ( ಮುಡಾ) ದಲ್ಲಿ ಸೈಟ್ ಹಂಚಿಕೆಯಲ್ಲಿ ಆದ ಹಗರಣದಲ್ಲಿ ರಾಜೀನಾಮೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. 

ಇದನ್ನೂ ಓದಿ- ತನಿಖೆಗೆ ಹೆದರಲ್ಲ; ತನಿಖೆಯನ್ನು ಎದುರಿಸಲು ಸಿದ್ಧ, ಕಾನೂನಾತ್ಮಕ ಹೋರಾಟಕ್ಕೆ ಸಜ್ಜು: ಸಿಎಂ ಸಿದ್ದರಾಮಯ್ಯ

ಹೈಕೋರ್ಟ್ ತೀರ್ಪು ಮತ್ತು ಜನಪ್ರತಿನಿಧಿ ವಿಶೇಷ ನ್ಯಾಯಾಲಯದ ಆದೇಶವನ್ನು ಒಪ್ಪಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯನವರು ಸರಿಯಾದ ರೀತಿ ತನಿಖೆಗೆ ಸಹಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. 

ಯಾರಾಗ್ತಾರೆ ಮುಂದಿನ ಸಿಎಂ: 
ರಾಜ್ಯದಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯ ಒಂದೆಡೆಯಾದರೆ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಬಗ್ಗೆಯೂ ಕೂಡ ಚರ್ಚೆಗಳು ಆರಂಭವಾಗಿವೆ. ಗೃಹ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜಿ. ಪರಮೇಶ್ವರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬಹುದು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಸಿಎಂ ರೇಸ್ ನಲ್ಲಿ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಅವರಂತಹ ಘಟಾನುಘಟಿ ನಾಯಕರ ಹೆಸರುಗಳು ಕೂಡ ಕೇಳಿಬರುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News