IND vs PAK: ಕೇವಲ 342 ರೂ.ಗಳಿಗೆ ವಿಶ್ವಕಪ್ ಪಂದ್ಯದ ಟಿಕೆಟ್‌; ಈ ದಿನದಂದು ಪಂದ್ಯ ನಡೆಯಲಿದೆ!

IND vs PAK: ಅಕ್ಟೋಬರ್ 3ರಿಂದ ಪ್ರಾರಂಭವಾಗುವ ICC ಮಹಿಳಾ T20 ವಿಶ್ವಕಪ್‌ಗಾಗಿ ICC ಆನ್‌ಲೈನ್ ಟಿಕೆಟ್ ಬುಕಿಂಗ್  ಪ್ರಾರಂಭಿಸಿದೆ, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ದರವನ್ನು ಸಹ ಬಿಡುಗಡೆ ಮಾಡಲಾಗಿದೆ.

Written by - Puttaraj K Alur | Last Updated : Sep 26, 2024, 08:16 AM IST
  • ಅಕ್ಟೋಬರ್ 3ರಿಂದ ಪ್ರಾರಂಭವಾಗುವ ICC ಮಹಿಳಾ T20 ವಿಶ್ವಕಪ್‌ ನಡೆಯಲಿದೆ
  • ICC ಈಗಾಗಲೇ ಮಹಿಳಾ T20 ವಿಶ್ವಕಪ್‌ನ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ರಾರಂಭಿಸಿದೆ
  • ಅತ್ಯಂತ ಕಡಿಮೆ ಬೆಲೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಲಭ್ಯ
IND vs PAK: ಕೇವಲ 342 ರೂ.ಗಳಿಗೆ ವಿಶ್ವಕಪ್ ಪಂದ್ಯದ ಟಿಕೆಟ್‌; ಈ ದಿನದಂದು ಪಂದ್ಯ ನಡೆಯಲಿದೆ! title=
ಆನ್‌ಲೈನ್ ಟಿಕೆಟ್ ಬುಕಿಂಗ್  ಪ್ರಾರಂಭ

ICC Women's T20 World Cup 2024: ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2024 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಮೆಗಾ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ಮಹಿಳಾ ತಂಡ ದುಬೈ ತಲುಪಿದೆ. ಪುರುಷರ ತಂಡದಂತೆಯೇ ಎಲ್ಲಾ ಭಾರತೀಯ ಅಭಿಮಾನಿಗಳು ಮಹಿಳಾ ತಂಡದಿಂದಲೂ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ. ಈ ಬಾರಿ ಮಹಿಳಾ ಟಿ-20 ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ತಲಾ 5ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಟೀಂ ಇಂಡಿಯಾ ʼಎʼ ಗುಂಪಿನ ಭಾಗವಾಗಿದ್ದು, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ. ಐಸಿಸಿ ಸೆಪ್ಟೆಂಬರ್ 25ರಂದು ಮಹಿಳಾ ಟಿ-20 ವಿಶ್ವಕಪ್ ಪಂದ್ಯಗಳ ಟಿಕೆಟ್ ದರವನ್ನು ಬಿಡುಗಡೆ ಮಾಡುವುದರೊಂದಿಗೆ ಆನ್‌ಲೈನ್ ಬುಕಿಂಗ್ ಸಹ ಪ್ರಾರಂಭಿಸಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡದ ನಡುವಿನ ಶ್ರೇಷ್ಠ ಪಂದ್ಯದ ಟಿಕೆಟ್ ದರವನ್ನು ಬಹಿರಂಗಪಡಿಸಲಾಗಿದೆ.

ಇದನ್ನೂ ಓದಿ: "ಈ ಆಟಗಾರ ನಮಗೆ ಬೇಕೇ ಬೇಕು"..! ಟೀಂ ಇಂಡಿಯಾದ ಸ್ಟಾರ್‌ ಆಟಗಾರನಿಗಾಗಿ ಪಟ್ಟು ಹಿಡಿದು ಕೂತ ಅಫ್ಘಾನಿಸ್ತಾನ ತಂಡ?

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಕೇವಲ 342 ರೂ.!

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಕ್ಟೋಬರ್ 6ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಅದೇ ದಿನ ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ನಡುವೆ ಸಂಜೆ ಇಲ್ಲಿ ಪಂದ್ಯ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಐಸಿಸಿ ಎರಡೂ ಪಂದ್ಯಗಳನ್ನು ಸೇರಿಸಿ ಒಂದೇ ಟಿಕೆಟ್ ನೀಡಿದೆ. ಕಡಿಮೆ ದರದ ಟಿಕೆಟ್ ಕೇವಲ 15 ದಿರ್ಹಮ್‌ಗಳು ಅಂದರೆ ಸರಿಸುಮಾರು 342 ಭಾರತೀಯ ರೂಪಾಯಿಗಳು. ಇದಲ್ಲದೆ ವಿವಿಧ ಸ್ಟ್ಯಾಂಡ್‌ಗಳ ಟಿಕೆಟ್ ದರಗಳು ಸಹ ವಿಭಿನ್ನವಾಗಿವೆ, ಅಂದರೆ 25 ದಿರ್ಹಮ್‌ಗಳು ಅಂದರೆ ಸರಿಸುಮಾರು 570 ಭಾರತೀಯ ರೂಪಾಯಿಗಳು. t20worldcup.platinumlist.net ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕ್ರೀಡಾಂಗಣದಿಂದ ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅದೇ ರೀತಿ 18 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಲು ಐಸಿಸಿ ಉಚಿತ ಪ್ರವೇಶವನ್ನು ನೀಡುತ್ತಿದೆ.

ಪಾಕಿಸ್ತಾನ ತಂಡದ ವಿರುದ್ಧ ಭಾರತ ಮಹಿಳಾ ತಂಡದ ದಾಖಲೆ

ಟಿ-20 ಮಾದರಿಯಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನಿ ಮಹಿಳಾ ತಂಡದ ವಿರುದ್ಧ ಇದುವರೆಗೆ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಇದರಲ್ಲಿ ಪಾಕಿಸ್ತಾನಿ ತಂಡದ ವಿರುದ್ಧ 15 ಪಂದ್ಯಗಳನ್ನು ಆಡಿರುವ ಭಾರತವು 12ರಲ್ಲಿ ಗೆಲುವು ಸಾಧಿಸಿದೆ. ಕೇವಲ ಮೂರರಲ್ಲಿ ಮಾತ್ರ ಸೋಲು ಕಂಡಿದೆ. 2023ರಲ್ಲಿ ನಡೆದ ಮಹಿಳಾ ಟಿ-20 ವಿಶ್ವಕಪ್‌ನಲ್ಲಿ ಭಾರತ ಕೊನೆಯ ಬಾರಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದಿತ್ತು.

ಇದನ್ನೂ ಓದಿ: IND vs BAN: ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರಿ ಅಡೆ ತಡೆ! ರದ್ದಾಗುತ್ತಾ ಬಾಂಗ್ಲಾ vs ಭಾರತ ಪಂದ್ಯ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News