INDvsWI: ವೆಸ್ಟ್ಇಂಡೀಸ್ ವಿರುದ್ಧ 257 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಭಾರತ

ಭಾರತವು ವೆಸ್ಟ್ ಇಂಡೀಸ್ ತಂಡವನ್ನು 257 ರನ್‌ಗಳ ಅಂತರದಿಂದ ಸೋಲಿಸಿ ಸರಣಿಯನ್ನು 2–0ರಿಂದ ಗೆದ್ದುಕೊಂಡಿತು.

Last Updated : Sep 3, 2019, 07:41 AM IST
INDvsWI: ವೆಸ್ಟ್ಇಂಡೀಸ್ ವಿರುದ್ಧ 257 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಭಾರತ title=

ನವದೆಹಲಿ: ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ಆತಿಥೇಯ ವೆಸ್ಟ್ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ 257 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು 2–0ರಿಂದ ಗೆದ್ದುಕೊಂಡಿತು. 

ಈ ಪಂದ್ಯದಲ್ಲಿ ಟೀಮ್ ಇಂಡಿಯಾ 416 ರನ್ ಗಳಿಸಿತು. ಹನುಮಾ ವಿಹಾರಿ ಅಜೇಯ 111 ಮತ್ತು ನಾಯಕ ವಿರಾಟ್ ಕೊಹ್ಲಿ 76 ಮತ್ತು ಇಶಾಂತ್ ಶರ್ಮಾ ಅವರ 57 ರನ್ ಗಳಿಸಿದರು. ಇದರ ನಂತರ, ಬುಮ್ರಾ ಅವರ ಬೌಲಿಂಗ್ ಗೆ ತತ್ತರಿಸಿದ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್ ಗಳಿಸಿತು ಮಾತ್ರ ಶಕ್ತವಾಯಿತು.

299 ರನ್‌ಗಳ ಮುನ್ನಡೆ ಗಳಿಸಿದ ನಂತರ ಭಾರತ ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತ ತಂಡವು 4 ವಿಕೆಟ್‌ಗಳಿಗೆ 168 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಘೋಷಿಸಿತು ಮತ್ತು ಆತಿಥೇಯರಿಗೆ 468 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿಡ ಕೆರಿಬಿಯನ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಸೋತಿತು. ಇದರೊಂದಿಗೆ, ವಿಂಡೀಸ್ ನಾಲ್ಕನೇ ದಿನದಾಟದಲ್ಲಿ 59.5 ಓವರ್‌ಗಳಲ್ಲಿ 210 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡು ಪರಾಜಯಗೊಂಡಿದೆ.

ಇದು ಭಾರತ-ವಿಂಡೀಸ್ ಸರಣಿಯ ಕೊನೆಯ ಪಂದ್ಯವೂ ಆಗಿತ್ತು. ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿದಿರುವ ವಿರಾಟ್ ಕೊಹ್ಲಿ ಅತ್ಯಧಿಕ 28 ಟೆಸ್ಟ್ ಗೆಲುವಿನೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದರು. ಇದರೊಂದಿಗೆ ಅವರು ದೇಶದ ನಂಬರ್ -1 ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಇದುವರೆಗೆ 48 ಟೆಸ್ಟ್ ಪಂದ್ಯಗಳನ್ನು ಆಡಿದೆ. ಭಾರತದಿಂದ ಹೆಚ್ಚಿನ ಟೆಸ್ಟ್ ಪಂದ್ಯಗಳಿಗೆ ನಾಯಕತ್ವ ವಹಿಸುವ ವಿಷಯದಲ್ಲಿ ಅವರು ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಅವರಲ್ಲದೆ, ಮೊಹಮ್ಮದ್ ಅಜರುದ್ದೀನ್ ಮತ್ತು ಸುನಿಲ್ ಗವಾಸ್ಕರ್ ಸಹ 47–47 ಟೆಸ್ಟ್ ಪಂದ್ಯಗಳ ನಾಯಕತ್ವ ವಹಿಸಿದ್ದಾರೆ. 60 ಟೆಸ್ಟ್‌ಗಳಲ್ಲಿ ಆಡಿರುವ ಎಂಎಸ್ ಧೋನಿ (ಎಂಎಸ್ ಧೋನಿ) ಮೊದಲ ಸ್ಥಾನದಲ್ಲಿದ್ದರೆ, 49 ಟೆಸ್ಟ್ ಪಂದ್ಯಗಳಲ್ಲಿ ಸೌರವ್ ಗಂಗೂಲಿ ನಾಯಕತ್ವ ವಹಿಸಿದ್ದಾರೆ.

ವಿರಾಟ್ ಕೊಹ್ಲಿ ಹೆಚ್ಚಿನ ಪಂದ್ಯಗಳ ನಾಯಕತ್ವದಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿರಬಹುದು. ಆದರೆ ಹೆಚ್ಚಿನ ಟೆಸ್ಟ್‌ಗಳನ್ನು ಗೆಲ್ಲುವ ದೃಷ್ಟಿಯಿಂದ ಅವರು ಜಂಟಿಯಾಗಿ ಪ್ರಥಮ ಸ್ಥಾನದಲ್ಲಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಭಾರತ 28 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ 27 ಪಂದ್ಯಗಳನ್ನು ಗೆದ್ದಿದ್ದಾರೆ.

Trending News