Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
ಕುಸಿತ ಕಂಡ HDFC ಮಾರುಕಟ್ಟೆ ಮೌಲ್ಯ: ಕಳೆದ ವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಳಿತದ ವಾತಾವರಣ ಕಂಡುಬಂದಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಗುರುವಾರ ಸೆನ್ಸೆಕ್ಸ್ 71,000ಕ್ಕಿಂತ ಕಡಿಮೆ ಮತ್ತು ನಿಫ್ಟಿ 21,352 ಅಂಕಗಳಲ್ಲಿ ಕೊನೆಗೊಂಡಿತು. ಇಡೀ ವಾರದ 3 ದಿನಗಳ ವಹಿವಾಟಿನಲ್ಲಿ ಟಾಪ್ 10 ಕಂಪನಿಗಳ ಪೈಕಿ 7 ಕಂಪನಿಗಳ ಮಾರುಕಟ್ಟೆ ಮೌಲ್ಯ 1.16 ಲಕ್ಷ ಕೋಟಿ ರೂ.ಗಳಷ್ಟು ಇಳಿಕೆ ಕಂಡಿದೆ. ಈ ಪೈಕಿ ಎಚ್ಡಿಎಫ್ಸಿ ಬ್ಯಾಂಕ್ ಹೆಚ್ಚು ನಷ್ಟ ಅನುಭವಿಸಿದೆ. ಇನ್ನುಳಿದ ಕಂಪನಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಳೆದ 3 ದಿನಗಳಲ್ಲಿ ಬಿಎಸ್ಇಯ 30-ಷೇರುಗಳ ಸೆನ್ಸೆಕ್ಸ್ 982.56 ಅಂಕಗಳ ನಷ್ಟವನ್ನು ಅನುಭವಿಸಿತು. ಟಾಪ್ 10 ಕಂಪನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಎಚ್ಡಿಎಫ್ಸಿ ಬ್ಯಾಂಕ್, ಎಲ್ಐಸಿ, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಮತ್ತು ಎಸ್ಬಿಐ ಮಾರುಕಟ್ಟೆ ಮೌಲ್ಯ ಕುಸಿತ ಕಂಡಿದೆ. ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮತ್ತು ಭಾರ್ತಿ ಏರ್ಟೆಲ್ ಸ್ಥಾನ ಏರಿಕೆಯಾಗಿದೆ.
ಈ ಅವಧಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ಮಾರುಕಟ್ಟೆ ಮೌಲ್ಯವು 32,661.45 ಕೋಟಿ ರೂ.ಗಳಿಂದ 10,90,001.31 ಕೋಟಿ ರೂ.ಗೆ ಇಳಿಕೆಯಾಗಿದೆ. ಎಲ್ಐಸಿಯ ಮಾರುಕಟ್ಟೆ ಮೌಲ್ಯವು 20,682.74 ಕೋಟಿ ರೂ. ಇಳಿಕೆಯಾಗಿ 5,71,337.04 ಕೋಟಿ ರೂ.ಗೆ ತಲುಪಿದೆ. ಟಿಸಿಎಸ್ 19,173.43 ಕೋಟಿ ಇಳಿಕೆ ಕಂಡು 13,93,439.94 ಕೋಟಿ ರೂ. ತಲುಪಿದೆ.
ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 18,33,737.60 ಕೋಟಿ ರೂ. ತಲುಪಿದರೆ, ಭಾರ್ತಿ ಏರ್ಟೆಲ್ನ ಮಾರುಕಟ್ಟೆ ಮೌಲ್ಯ 6,52,407.83 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ಫೋಸಿಸ್ 9,151.75 ಕೋಟಿ ರೂ. ಹೆಚ್ಚಳವಾಗಿದ್ದು, ಅದರ ಮಾರುಕಟ್ಟೆ ಮೌಲ್ಯವು 6,93,457.65 ಕೋಟಿ ರೂ.ಗಳಿಗೆ ತಲುಪಿದೆ.
ಐಸಿಐಸಿಐ ಬ್ಯಾಂಕ್ನ ಮಾರುಕಟ್ಟೆ ಬಂಡವಾಳೀಕರಣವು 1,137.37 ಕೋಟಿ ರೂ.ಗಳಿಂದ 7,08,511.16 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಟಾಪ್ 10 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದೆ. ಅದರ ನಂತರ ಟಿಸಿಎಸ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಭಾರ್ತಿ ಏರ್ಟೆಲ್, ಎಲ್ಐಸಿ, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಮತ್ತು ಎಸ್ಬಿಐಗಳಿವೆ.