Valentine's Day: ವ್ಯಾಲೆಂಟೈನ್ಸ್ ಡೇಗೆ ಬೆಳ್ಳುಳ್ಳಿ ಕಬಾಬ್ ರಾಹುಲನಿಗೆ ಪ್ರಪೋಸ್ ಮಾಡಿದ ನಂದಿನಿ

Bellulli kebab Rahul Loves Nandini: ನಂದಿನಿ ಬೆಂಗಳೂರಿಗೆ ಬಂದು ಫೇಮಸ್ ಆಗೋದೇ ತಡಾ ಕರ್ನಾಟಕದ ಮಂದಿ ಎಲ್ಲಾ ನಂದಿನಿಗೆ ಪ್ರಪೋಸ್ ಮಾಡೋಕೆ ಸ್ಟಾರ್ಟ್ ಮಾಡಿದ್ರು. ಆದ್ರೂ ಯಾರಿಗೂ ಕ್ಯಾರೇ ಬುಲ್ ಬುಲ್ ಅನ್ನದ ನಮ್ಮ ನಂದಿನಿ ಕೊನೆಗೂ ಯಾರ ಹಳ್ಳಕ್ಕೆ ಬಿದ್ಲು ಅಂತಾ ಗೊತ್ತಾ..? 

Written by - Zee Kannada News Desk | Last Updated : Feb 13, 2024, 05:14 PM IST
  • ಅಂತೂ ಇಂತೂ ನಮ್ಮ ನಂದಿನಿಗೂ ಬಾಯ್‌ಫ್ರೆಂಡ್ ಇದ್ದಾನೆ ಅಂತಾ ಗೊತ್ತಾಯಿತು
  • ಐಟಿ ಕೆಲಸಕ್ಕೆ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದಿದ್ದ ನಂದಿನಿಗೂ ಲವ್‌ ಆಗಿದೆ
  • ಬೆಳ್ಳುಳ್ಳಿ ಕಬಾಬ್‌ ರಾಹುಲನಿಗೆ ಲವ್‌ ಪ್ರಪೋಸ್‌ ಮಾಡಿದ ನಂದಿನಿ
Valentine's Day: ವ್ಯಾಲೆಂಟೈನ್ಸ್ ಡೇಗೆ ಬೆಳ್ಳುಳ್ಳಿ ಕಬಾಬ್ ರಾಹುಲನಿಗೆ ಪ್ರಪೋಸ್ ಮಾಡಿದ ನಂದಿನಿ title=
ಬೆಳ್ಳುಳ್ಳಿ ಕಬಾಬ್‌ ರಾಹುಲ Loves ನಂದಿನಿ

Valentine's Day: ಅಂತೂ ಇಂತೂ ನಮ್ಮ ನಂದಿನಿಗೂ ಬಾಯ್‌ಫ್ರೆಂಡ್ ಇದ್ದಾನೆ ಅಂತಾ ಗೊತ್ತಾಯಿತು. ಅಯ್ಯೋ..! ಅದ್ಯಾವ ನಂದಿನಿ ಬಗ್ಗೆ ಹೇಳ್ತಿದ್ದಾರೆ ಅಂತೀರಾ..? ಅದೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ನಂದಿನಿ... IT ಕೆಲ್ಸಕ್ಕೆ ಅಂತಾ ಬೆಂಗಳೂರಿಗೆ ಬಂದು PGಯಲ್ಲಿ ಉಳಿದುಕೊಂಡಿದ್ಲು. ಆದ್ರೆ, ನಮ್ಮ ನಂದಿನಿಗೆ ಪಾಪ PG ಊಟ ಸೇರ್ತಿಲ್ಲಾ ಅಂತಾ ಹೇಳಿ, ಫಸ್ಟ್ರೇಷನ್‌ನಲ್ಲಿ ಒಂದು ಕಾವ್ಯಾನೆ ಬರ್ದು ಇಡೀ ಕರ್ನಾಟಕಕ್ಕೆ ಮನೆ ಮಗಳಾದ್ಲು.

ಯಾರು ಅಂತಾ ಗೊತ್ತಾಗಿರಬೇಕಲ್ಲ.. OK ಸಿದಾ ವಿಷಯಕ್ಕೆ ಬರ್ತೀನಿ, "ನಾನು ನಂದಿನಿ ಬೆಂಗಳೂರಿಗೆ ಬಂದಿನಿ" ಅನ್ನೋ ಹಾಡು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಬೆಳಗ್ಗೆ ಎದ್ರೆ ನಾನು ನಂದಿನಿ... ರಾತ್ರಿ ಮಲಗಿದ್ರೆ ನಂದಿನಿ... ಊಟ ಮಾಡುವಾಗ ನಂದಿನಿ... ನೀರು ಕುಡಿಯುವಾಗಲೂ ನಂದಿನಿ. ಎಲ್ಲಿ ಕೇಳಿದ್ರೂ ಬರೀ ನಂದಿನಿ... ನಂದಿನಿ... ಅಷ್ಟೊಂದು ಹವಾ ಮಾಡಿದ್ಲು ನಮ್ಮ ನಂದಿನಿ. ಚಿಕ್ಕವರಿಂದ ಹಿಡಿದು ಹಲ್ಲು ಇಲ್ಲದ ಮುದಕರ ಮನದಲ್ಲೂ ನದಿನಿ ಆ ರೀತಿ ಇದ್ದೊಳು ಮೊನ್ನೆ ಮೊನ್ನೆ ಇಡೀ ಕರ್ನಾಟಕನೇ ಖುಷಿಪಡುವ ಸುದ್ದಿಯೊಂದನ್ನು ನೀಡಿದ್ರು ನೋಡಿ, ಎಲ್ಲರೂ ಶಾಕ್..!

ಇದನ್ನೂ ಓದಿ: ಇಂದು ಅಬುಧಾಬಿಯಲ್ಲಿ 'ಅಹ್ಲಾನ್ ಮೋದಿ' ಕಾರ್ಯಕ್ರಮ: 65,000ಕ್ಕೂ ಹೆಚ್ಚು ಜನರ ನೋಂದಣಿ

ತೂ ಜಾಸ್ತಿ ತಲೆ ಕೆಡ್ಕೊಸ್ಕೊಬೇಡಿ! ನಂದಿನಿ ಬೆಂಗಳೂರಿಗೆ ಬಂದು ಫೇಮಸ್ ಆಗೋದೇ ತಡಾ ಕರ್ನಾಟಕದ ಮಂದಿ ಎಲ್ಲಾ ನಂದಿನಿಗೆ ಪ್ರಪೋಸ್ ಮಾಡೋಕೆ ಸ್ಟಾರ್ಟ್ ಮಾಡಿದ್ರು. ಆದ್ರೂ ಯಾರಿಗೂ ಕ್ಯಾರೇ ಬುಲ್ ಬುಲ್ ಅನ್ನದ ನಮ್ಮ ನಂದಿನಿ ಕೊನೆಗೂ ಯಾರ ಹಳ್ಳಕ್ಕೆ ಬಿದ್ಲು ಅಂತಾ ಹೇಳ್ತೀನಿ ನೋಡಿ. ಇತ್ತೀಚಿಗೆ ಫೇಮಸ್ ಆಗಿರೋ ನಮ್ಮ ಬೆಳ್ಳುಳ್ಳಿ ಕಬಾಬ್ ರಾಹುಲ್ಲ,  ಓಹೋ..! ಈ ಬೆಳ್ಳುಳ್ಳಿ ಕಬಾಬ್ ರಾಹುಲ್ಲನ ಬಗ್ಗೆ ನಾನ್ ಏನು ಹೇಳೋದಿಲ್ಲ, ಯಾಕೆ ಅಂದ್ರೆ ನನಗಿಂತಲೂ ಹೆಚ್ಚಾಗಿ ನಿಮಗೆ ಗೋತ್ತಿರಬೇಕಲ್ಲ. ಯಾಕೆ ಅಂದ್ರೆ ನಾನು ಪಕ್ಕಾ ವೆಜಿಟೇರಿಯನ್ ಆದ್ರೆ ಅವಾಗ ಅವಾಗ ಫ್ರೆಂಡ್ಸ್ ನಾನ್‌ವೆಜ್ ತಂದ ಕೊಟ್ಟಾಗ ಹೊಟ್ಟೆ ತುಂಬಾ ತಿಂತೀನಿ ಆದ್ರೂ ನಾನ್‌ವೆಜ್ ಬಗ್ಗೆ ಜಾಸ್ತಿ ಗೊತ್ತಿಲ್ಲ. ಹೋಗ್ಲಿ ಬಿಡಿ ಇವಾಗ ನನ್ನ ವಿಚಾರ ನಿಮಗೆ ಯಾಕೆ ನಮ್ಮ ನಂದಿನಿ ಬಗ್ಗೆ ಹೇಳ್ತೀನಿ ಕೇಳಿ.. 

ನಮ್ಮ ನಂದಿನಿ ಮೊನ್ನೆ ತಾನೆ ಸೋಷಿಯಲ್ ಮೀಡಿಯಾದಲ್ಲಿ ಬಂದು ಎಲ್ಲರೂ ʼಯಾರು ನಿನ್ನ ಕರಿ ಮಣಿ ಮಾಲೀಕʼ ಎಂದು ಪ್ರಶ್ನೆ ಮಾಡಿದಾಗ, ಎಲ್ಲರಿಗೂ ಹಾಡಿನ ಮೂಲಕ "ಓ ನಲ್ಲ... ನೀನಲ್ಲ... ಕರಿಮಣಿ ಮಾಲೀಕ ನಿನಲ್ಲ... ʼಕೊನೆಗೆ ಒಂದು ಮಾತು ಹೇಳಿದ್ಲು ಮಗ" ಏನ್ ಪಾ..! ಅಂದ್ರೆ ʼಕರಿಮಣಿ ಮಾಲೀಕ ರಾಹುಲಾʼ ಅಂತಾ ಇಡೀ ಕರ್ನಾಟಕ ಮಂದಿಗೆಲ್ಲ ಬೆಳ್ಳುಳ್ಳಿ ಕಬಾಬ್ ರಾಹುಲ್ ಬಗ್ಗೆ ನಂದಿನಿ ತನ್ನ ಮನಸಿನ ಮಾತು ಹೇಳಿದ್ಲು.   ಹಾಗೆ ನಾನು ಒಂದ್ ಮಾತು ಹೇಳ್ತೀನಿ ಕೇಳಿ, ನಮ್ಮ ಮನಸ್ಸು ನಮ್ಗೆ ಒಳ್ಳೆದ್ ಮಾಡಿದ್ರೆ ದೇವ್ರು..! ಅಷ್ಟೇ ಏನಂತೀರಾ..?

ಇದನ್ನೂ ಓದಿ: Farmers Protest: ದೇಶಾದ್ಯಂತ 200ಕ್ಕೂ ಹೆಚ್ಚು ರೈತ ಸಂಘಗಳಿಂದ 'ದಿಲ್ಲಿ ಚಲೋ'- ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News