ಪ್ರಜಾಪ್ರಭುತ್ವದ ಪ್ರಥಮ ರೂವಾರಿ ಬಸವಣ್ಣ; ಸಭಾಪತಿ ಬಸವರಾಜ ಹೊರಟ್ಟಿ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಿ, ಜಗತ್ತಿಗೆ ಜಾತ್ಯಾತೀತ ಸಮಸಮಾಜ, ಶೋಷಣೆರಹಿತ ಹಾಗೂ ಕಾಯಕ ದಾಸೋಹದ ಕ್ರಾಂತಿಕಾರಿ ತತ್ವ ಆದರ್ಶವನ್ನು ಸಾರಿದ ಬಸವಣ್ಣನವರು ಭಾರತದ ಪ್ರಥಮ ಸ್ವತಂತ್ರ ವಿಚಾರವಾದಿ ಎಂದು ವಿಧಾನ ಪರಿಷತ್ತ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

Written by - Manjunath N | Last Updated : Feb 17, 2024, 07:45 PM IST
  • ಬಸವಣ್ಣ ಈ ಜಗತ್ತು ಕಂಡ ಮೊದಲ ಸ್ವತಂತ್ರ ಧಾರ್ಮಿಕ ಮಹಾಮಾನವತಾವಾದಿ.
  • ಅವರ ಕ್ರಾಂತಿ ಆರಂಭಗೊಂಡಿದ್ದು ಅವರ ಮನೆಯಲ್ಲಿ ಮಹಿಳಾ ಸಮಾನತೆಯ ವೈಚಾರಿಕತೆಯಿಂದ ಆರಂಭಗೊಂಡಿತ್ತು.
ಪ್ರಜಾಪ್ರಭುತ್ವದ ಪ್ರಥಮ ರೂವಾರಿ ಬಸವಣ್ಣ; ಸಭಾಪತಿ ಬಸವರಾಜ ಹೊರಟ್ಟಿ title=

ಧಾರವಾಡ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಿ, ಜಗತ್ತಿಗೆ ಜಾತ್ಯಾತೀತ ಸಮಸಮಾಜ, ಶೋಷಣೆರಹಿತ ಹಾಗೂ ಕಾಯಕ ದಾಸೋಹದ ಕ್ರಾಂತಿಕಾರಿ ತತ್ವ ಆದರ್ಶವನ್ನು ಸಾರಿದ ಬಸವಣ್ಣನವರು ಭಾರತದ ಪ್ರಥಮ ಸ್ವತಂತ್ರ ವಿಚಾರವಾದಿ ಎಂದು ವಿಧಾನ ಪರಿಷತ್ತ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಇಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆ ಆಶ್ರಯದಲ್ಲಿ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕ್ರತಿಕ ನಾಯಕ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು, ಶೋಷಣೆರಹಿತ ಸಮಸಮಾಜ, ಜಾತ್ಯಾತೀತ ಮಹಿಳಾ ಸ್ವಾತಂತ್ರತೆಯಂಥ ಕ್ರಾಂತಿಕಾರಿ ಬದಲಾವಣೆಯನ್ನು ತಂದು ಇಡಿ ಜಗತ್ತಿಗೆ ಬಸವಣ್ಣ ಮಾದರಿಯಾದರು ಎಂದು ಹೊರಟ್ಟಿ ಹೇಳಿದರು.

ಇಂಥ ಮಹಾನ್ ವ್ಯಕ್ತಿ ಕರ್ನಾಟಕದಲ್ಲಿದ್ದದು ನಮ್ಮ ನಾಡಿಗೆ ದೊಡ್ಡ ಗೌರವ, ಬಸವಣ್ಣರ ಆಚಾರ, ವಿಚಾರ, ತತ್ವ, ಆದರ್ಶಗಳನ್ನು ದೇಶಕ್ಕೆ ಹಾಗೂ ಜಗತ್ತಿಗೆ ಪ್ರಚಾರವಾಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರವು ಎಲ್ಲಾ ಸರಕಾರಿ ಮತ್ತು ಅರೆಸರಕಾರಿ, ಸಂಘ ಸಂಸ್ಥೆಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕ್ರತಿಕ ನಾಯಕರೆಂದು ಭಾವಚಿತ್ರ ಹಾಕಿರಿವುದು ಶ್ಲಾಘನಿಯ, ಇದರಿಂದ ಜನಸಾಮಾನ್ಯರಿಗು ಬಸವಣ್ಣರ ತತ್ವಗಳು ತಲುಪಲಿವೆ ಎಂದರು. ಮನೆಯೆ ಮೊದಲ ಪಾಠಶಾಲೆ, ಗೃಹಣಿಯರು ಈ ನಿಟ್ಟಿನಲ್ಲಿ ಬಸವಣ್ಣರ ಅಚಾರ, ವಿಚಾರ, ಸಂಸ್ಕಾರ ಮಕ್ಕಳಿಗೆ ನೀಡಲು ಮುಂದಾಗಬೇಕೆಂದರು.

ಇದನ್ನೂ ಓದಿ: ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ: ನೋಂದಣಿಗೆ ಆಹ್ವಾನ

ವಿಶೇಷ ಉಪನ್ಯಾಸ ನೀಡಿದ ಡಾ.ಎಂ.ಎಂ.ಕಲ್ಬುರ್ಗಿ ರಾಷ್ಟ್ರಿಯ ಪ್ರತಿಷ್ಟಾನದ ಅಧ್ಯಕ್ಷರಾದ ಡಾ.ವೀರಣ್ಣ ರಾಜೂರ ಅವರು ಮಾತನಾಡಿ ಬಸವಣ್ಣನವರನ್ನು ಈ ಜಗತ್ತು ಕಂಡ ಮೊದಲ ಸ್ವತಂತ್ರ ಧಾರ್ಮಿಕ ಮಹಾಮಾನವತಾವಾದಿ. ಅವರ ಕ್ರಾಂತಿ ಆರಂಭಗೊಂಡಿದ್ದು ಅವರ ಮನೆಯಲ್ಲಿ ಮಹಿಳಾ ಸಮಾನತೆಯ ವೈಚಾರಿಕತೆಯಿಂದ ಆರಂಭಗೊಂಡಿತ್ತು ಎಂದರು.

ಸಿದ್ದರಾಮಯ್ಯನವರು ನಿನ್ನೆ ಮಂಡಿಸಿದ ಬಜೆಟ್‍ಗೆ ಕಾಯಕ ದಾಸೋಹ ಸೂತ್ರದ ಬಜೆಟ್ ಎಂದು ಹೆಸರಿಟ್ಟಿದ್ದು ಅಭಿನಂದನೆಯ, ಗಳಿಕೆ ಹಾಗೂ ಬಳಕೆಯ ಸಮಾನತೆಯನು ಹೇಗೆ ಸರಿದೂಗಿಸಬೇಕೆಂದು ಅವರು ಬಸವಣ್ಣನ ತತ್ವದ ಮೂಲಕ ಈಗ ತೋರಿಸಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರಕಾರದ ಈ ಕಾರ್ಯಕ್ರಮವು ಶ್ಲಾಘನಿಯ ಎಂದು ಹೆಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಪ್ರಾಸ್ತಾವಿಕ ಮಾತನಾಡಿ ಉಳ್ಳವರು ಶಿವಾಲಯ ಕಟ್ಟುವರಯ್ಯ ಎಂದು ಬಸವಣ್ಣನವರ ವಚನ ವಿವರಿಸಿದ್ದನ್ನು ಸಭಿಕರಲ್ಲಿ ಚಪ್ಪಾಳೆ ಹಾಗೂ ಸಂತಸ ಮೂಡಿಸಿ ಶ್ಲಾಘನೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಂ.ಹೀರೆಮಠ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರ ಹಾಗೂ ಸಮಾಜದ ಮುಖಂಡರು ಉಪಸ್ತಿತರಿದ್ದರು.

ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆ ಸಹಾಯಕ ನಿರ್ದೆಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು, ನ್ಯಾ. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News