ಬೆಂಗಳೂರು : ಇಂದು ಅಂದರೆ ಮಾರ್ಚ್ 4 ರಂದು Samsung Galaxy F15 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಂಪನಿಯ ಹೊಸ F ಸರಣಿಯ ಸ್ಮಾರ್ಟ್ಫೋನ್ ಆಗಿದೆ. ಈ ಫೋನ್ 90Hz AMOLED ಸ್ಕ್ರೀನ್ ಅನ್ನು ಹೊಂದಿದ್ದು, ಇದು MediaTek ಡೈಮೆನ್ಸಿಟಿ 6100+ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. Galaxy F15 5G ಮೂರು ಬಣ್ಣಗಳಲ್ಲಿ ಲಭ್ಯವಿದೆ. ಅದರ ಬ್ಯಾಟರಿ ಎರಡು ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತದಲ್ಲಿ Samsung Galaxy F15 5G ಬೆಲೆ :
Ash Black, Groovy Violet ಮತ್ತು Jazzy Green ಹೀಗೆ ಈ ಫೋನ್ ಮೂರು ಬಣ್ಣಗಳಲ್ಲಿ ಬರುತ್ತಿದೆ. Samsung Galaxy F15 5G ಎರಡು ಮಾದರಿಗಳಲ್ಲಿ ಲಭ್ಯವಿದೆ. 4GB RAM + 128GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್ ಗಳಲ್ಲಿ ಈ ಫೋನ್ ಲಭ್ಯವಿದೆ. ಈ ಫೋನ್ ಮಾರ್ಚ್ 11 ರಿಂದ Flipkart, Samsung.com ಮತ್ತು ಕೆಲವು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ವಿಶೇಷವೆಂದರೆ Galaxy F15 5G ನ ಆರಂಭಿಕ ಮಾರಾಟವು ಇಂದು ಫ್ಲಿಪ್ಕಾರ್ಟ್ನಲ್ಲಿ ಸಂಜೆ 7 ರಿಂದ ಪ್ರಾರಂಭವಾಗುತ್ತಿದೆ.ಈ ಆರಂಭಿಕ ಮಾರಾಟದಲ್ಲಿ ಫೋನ್ ಖರೀದಿಸುವವರಿಗೆ 1299 ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಟ್ರಾವೆಲ್ ಅಡಾಪ್ಟರ್ ಅನ್ನು ಕೇವಲ 299 ರೂಪಾಯಿಗೆ ನೀಡಲಾಗುತ್ತದೆ.
ಇದನ್ನೂ ಓದಿ : Internet: ಮನೆಯಲ್ಲಿ ವೈಫೈ ರೂಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಹಾಗಾದರೆ ಈ ಟ್ರೀಕ್ ಟ್ರೈ ಮಾಡಿ..
Samsung Galaxy F15 5G ವಿಶೇಷಣಗಳು :
Samsung Galaxy F15 5G 6.5-ಇಂಚಿನ FHD+ sAMOLED ಸ್ಕ್ರೀನ್ ಅನ್ನು ಹೊಂದಿದ್ದು, ಅದರ ರಿಫ್ರೆಶ್ ರೇಟ್ 90Hz ಆಗಿದೆ. ಈ ಫೋನ್ MediaTek ಡೈಮೆನ್ಸಿಟಿ 6100+ ಪ್ರೊಸೆಸರ್ ಅನ್ನು ಹೊಂದಿದ್ದು, 4GB RAM + 128GB, 6GB RAM + 128GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಮೆಮೊರಿ ಕಾರ್ಡ್ ಅನ್ನು ಸೇರಿಸುವ ಮೂಲಕ 1TB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.
Samsung Galaxy F15 5G ಕ್ಯಾಮೆರಾ :
ಈ ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಹಿಂಭಾಗದಲ್ಲಿ 50MP ಮೇನ್ ಕ್ಯಾಮೆರಾ, ಜೊತೆಗೆ ಇನ್ನೂ ಎರಡು ಕ್ಯಾಮೆರಾಗಳು ಲಭ್ಯವಿದೆ. ಅದರಲ್ಲಿ ಒಂದು 5MP ಮತ್ತು ಇನ್ನೊಂದು 2MP ಆಗಿದೆ. ಈ ಫೋನ್ ನಲ್ಲಿ ಸೆಲ್ಫಿಗಾಗಿ 13MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಪ್ರಮುಖ ವಿಷಯವೆಂದರೆ ಈ ಫೋನ್ 6,000mAh ನ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳವರೆಗೆ ಬಳಸಬಹುದು ಎನುತ್ತದೆ ಕಂಪನಿ.
ಇದನ್ನೂ ಓದಿ : Google Chrome Features: ಗೂಗಲ್ ಕ್ರೋಮ್ನಲ್ಲಿ ಒಮ್ಮೆಗೆ ಮೂರು ವೈಶಿಷ್ಟ್ಯಗಳನ್ನು ಪರಿಚಯಿಸಿದ ಗೂಗಲ್
ಇದಲ್ಲದೇ ವಾಯ್ಸ್ ಫೋಕಸ್ ಆನ್ ಫೀಚರ್ ಕೂಡಾ ಫೋನ್ನಲ್ಲಿ ಲಭ್ಯವಿದೆ. ನೀವು ಥಿಯೇಟರ್ನಲ್ಲಿ ಅಥವಾ ಸದ್ದು ಗದ್ದಲವಿರುವ ಜಾಗಲ್ಲಿದ್ದು ಕರೆ ಸ್ವೀಕರಿಸಲೇ ಬೇಕಾದಾಗ, ಈ ವೈಶಿಷ್ಟ್ಯವನ್ನು ಆನ್ ಮಾಡಿದರೆ ಸಾಕು. ನಿಮ್ಮ ಧ್ವನಿ ಮಾತ್ರ ರವಾನೆಯಾಗುತ್ತದೆ. ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮುಂತಾದ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.