Tamannaah Bhatia: ʻಅಘೋರಿʼ ಪಾತ್ರದಲ್ಲಿ ತಮನ್ನಾ ಭಾಟಿಯಾ... ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ!

Tamannaah Bhatia in Aghori Look: ಸಿನಿ ಪ್ರೇಕ್ಷಕರಿಗೆ ತಮನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ಈ ನಾಯಕಿ ಕೊಂಚ ವಿಭಿನ್ನ ಹಾಗೂ ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ.

Written by - Chetana Devarmani | Last Updated : Mar 8, 2024, 01:10 PM IST
  • ಅಘೋರಿ ಪಾತ್ರದಲ್ಲಿ ನಟಿ ತಮನ್ನಾ ಭಾಟಿಯಾ
  • ನಟಿ ತಮನ್ನಾ ಭಾಟಿಯಾ ಮುಂದಿನ ಸಿನಿಮಾ
  • ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ!
Tamannaah Bhatia: ʻಅಘೋರಿʼ ಪಾತ್ರದಲ್ಲಿ ತಮನ್ನಾ ಭಾಟಿಯಾ... ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ! title=

Actress Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ.. ಮಂಚು ಮನೋಜ್ ಅಭಿನಯದ ಶ್ರೀ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗಿ ಹ್ಯಾಪಿ ಡೇಸ್ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಅಂದಿನಿಂದ ಈ ನಟಿ ಸಣ್ಣ ಹೀರೋ, ದೊಡ್ಡ ಹೀರೋ ಎಂಬ ಭೇದವಿಲ್ಲದೆ ಬಹುತೇಕ ಎಲ್ಲ ತೆಲುಗು ಹೀರೋಗಳ ಜೊತೆ ನಟಿಸಿದ್ದಾರೆ. ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳು ಮತ್ತು ಹಿಂದಿಯಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ವಿಜಯ್ ವರ್ಮಾ ಜೊತೆಗಿನ ಪ್ರೇಮ ಸಂಬಂಧದಿಂದ ತಮನ್ನಾ ಕೆಲ ದಿನಗಳಿಂದ ಸುದ್ದಿಯಲ್ಲಿದ್ದರು. ತನ್ನ ಗೆಳೆಯ ವಿಜಯವರ್ಮ ಜೊತೆ ಲಾಸ್ಟ್ ಸ್ಟೋರೀಸ್ 2 ನಲ್ಲಿ ಬೋಲ್ಡ್‌ ಪಾತ್ರದಲ್ಲಿ ನಟಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು. ಇತ್ತೀಚಿಗೆ ಸಿನಿಮಾಗಳಿಗಿಂತ ವೆಬ್ ಸೀರಿಸ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ'ಗೆ ಎಂಟ್ರಿ ಕೊಟ್ಟ ನಟ ಮಿತ್ರ.. ವಿಭಿನ್ನ ಪಾತ್ರದಲ್ಲಿ ಎಂಟ್ರಿ.! 

ಇತ್ತೀಚೆಗಷ್ಟೇ ಬಿಡುಗಡೆಯಾದ ಒಟಿಟಿ ಚಿತ್ರ ‘ಒಡೆಲಾ ರೈಲ್ವೇ ಸ್ಟೇಷನ್’ ಉತ್ತಮ ಯಶಸ್ಸು ಕಂಡಿತು. ಇದರ ಸೀಕ್ವೆಲ್ ಗೆ ಈ ನಾಯಕಿಯಾಗಿ ನಟಿಸಲು ತಮನ್ನಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಶೋಕ್ ತೇಜ ನಿರ್ದೇಶನದ ಈ ಸಿನಿಮಾದ ಕಥೆಯನ್ನು ಟಾಲಿವುಡ್ ಸ್ಟಾರ್ ಡೈರೆಕ್ಟರ್ ಸಂಪತ್ ನಂದಿ ಪ್ರಸ್ತುತ ಪಡಿಸಿದ್ದಾರೆ. ಈಗ ಈ ಚಿತ್ರದ ಎರಡನೇ ಭಾಗದ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ ಶುರುವಾಗಿದೆ.  

ಈ ಚಿತ್ರದಲ್ಲೂ ತಮನ್ನಾ ವಿಭಿನ್ನ ಪಾತ್ರವನ್ನು ಪ್ರಯತ್ನಿಸಿದ್ದಾರೆ. ಈ ಚಿತ್ರದ ನಿರ್ದೇಶಕರು ತಮನ್ನಾ ಅವರನ್ನು ಮಹಿಳಾ ಅಘೋರಿ ಪಾತ್ರದಲ್ಲಿ ತೋರಿಸಲಿದ್ದಾರೆ. ಅದರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಇಂದು, 'ಶಿವರಾತ್ರಿ' ಸಂದರ್ಭದಲ್ಲಿ ತಮನ್ನಾ ಅವರ ಈ ಚಿತ್ರದ ಲುಕ್‌ನ್ನು ಹಂಚಿಕೊಂಡಿದ್ದಾರೆ. ಈ ಫಸ್ಟ್ ಲುಕ್‌ನಲ್ಲಿ ಕೇಸರಿ ಡ್ರೆಸ್‌ನಲ್ಲಿ ತಮನ್ನಾ ಆಧ್ಯಾತ್ಮಿಕವಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಡೋಲು, ಹಣೆಯಲ್ಲಿ ವಿಭೂತಿ, ಇನ್ನೊಂದು ಕೈಯಲ್ಲಿ ಕೋಲು ಹಿಡಿದು ‘ಶಿವಶಕ್ತಿ’ ರೂಪದಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Aamir Khan Live Video: ಲೈವ್‌ ವಿಡಿಯೋದಲ್ಲೇ ಡ್ರಗ್ಸ್​ ತಗೊಂಡ್ರಾ ಅಮಿರ್‌ ಖಾನ್‌? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News