Chandan Shetty In Vidhyarthi Vidhyarthiniyare: ಕನ್ನಡ ರಾಪರ್, ಸಿಂಗರ್ ಹಾಗೂ ಮ್ಯೂಸಿಕ್ ಕಂಪೋಸರ್ ಚಂದನ್ ಶೆಟ್ಟಿ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಸಿನಿಮಾ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಅರುಣ್ ಅಮುಕ್ತ ಆಕ್ಷನ್ ಕಟ್ ಹೇಳುತ್ತಿದ್ದು, ಈತ ನಿನ್ನೆ ಮಹಾಶಿವರಾತ್ರಿಯ ಹಿನ್ನೆಲೆ ಉತ್ಸಾಹದಲ್ಲಿ ಒಂದು ಕೆಲಸ ಮಾಡಿದ್ದಾರೆ.
ಡೈರೆಕ್ಟರ್ ಅರುಣ್ ಅಮುಕ್ತ ನಿನ್ನೆ ಚಂದನ್ ಶೆಟ್ಟಿ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಸಿನಿಮಾದ ಪಾತ್ರದ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಚಂದನ್ ಶೆಟ್ಟಿಯನ್ನು ಹೊಸ ರೂಪವನ್ನು ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಚಿತ್ರದ ಪೋಸ್ಟರ್ ನೋಡುತ್ತಾಯಿದ್ದರೇ ಇದು ಸೈಬರ್ ಫಂಕ್ ಕಥೆಯೆಂದು ಅನಿಸುತ್ತಿದೆ.
ಇದನ್ನೂ ಓದಿ: Dhanush: ಧನುಷ್-ರಶ್ಮಿಕಾ ಹೊಸ ಚಿತ್ರಕ್ಕೆ ಜಗ್ಗೇಶ್ ಸಿನಿಮಾ ಟೈಟಲ್: ಶೀರ್ಷಿಕೆಯೇನು ಗೊತ್ತೇ?
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ನಿರ್ದೇಶಕರು ಈಗೀನ ಕಾಲದ ಹುಡುಗರಿಗೆ ಕನೆಕ್ಟ್ ಆಗೋ ರೀತಿಯಲ್ಲಿಯೇ ಪ್ರೋಮೋಟ್ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉದಾಹರಣೆಯೆಂದರೇ ವಿ.ಆರ್.ಅಂದ್ರೆ ವರ್ಚುವಲ್ ರಿಯಾಲಿಟಿ ಪೋಸ್ಟರ್ ಅಂತಾನೇ ಹೇಳಬಹುದು. ಈ ಸಿನಿಮಾದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹೊಸಬರು ಆಗಿದ್ದು, ಇನ್ನೂ ಸುನಿಲ್ ಪುರಾಣಿಕ್, ಭವ್ಯ, ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಕೂಡ ನಟಿಸಿದ್ದಾರೆ. ಈ ತಾರಾನಟರ ಜೊತೆಗೆ ಮಾನಸಿ, ವಿವಾನ್,ಅಮರ್, ಭಾವನಾ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ಹಾಡಗಳನ್ನು ಮೂರು ಸಂಗೀತ ಸಂಯೋಜಕರು ನಿರ್ದೇಶನ ಮಾಡಿದ್ದಾರೆ ಅನ್ನೋದು ಕೂಡ ವಿಶೇಷವಾಗಿದೆ. ಈ ಸಿನಿಮಾದ ಸಾಂಗ್‌ಗಳನ್ನು ವಾಸು ದೀಕ್ಷಿತ್, ಶಶಾಂಕ್ ಶೇಷಗಿರಿ ಮತ್ತು ವಿಜೇತ್ ಕೃಷ್ಣ ಕಂಪೋಸ್ ಮಾಡಿದ್ದಾರೆ. ಸದ್ಯ ಚಿತ್ರದ ಕೆಲಸ ತ್ವರಿತಗತಿಯಲ್ಲಿಯೇ ಸಾಗುತ್ತಿದ್ದು, ಚಿತ್ರತಂಡ ಶೂಟಿಂಗ್‌ನ ಕೊನೆಯ ಹಂತಕ್ಕೆ ತಲುಪಿದೆ ಅಂತನೇ ಹೇಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.