RCB ಸೇರಿದ್ರಾ ಜೋಫ್ರಾ ಆರ್ಚರ್! ಹರಾಜಿನಲ್ಲಿ ಖರೀದಿಯಾಗದಿದ್ದರೂ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದೇಕೆ ಇಂಗ್ಲೆಂಡ್ ವೇಗಿ?

England pacer Jofra Archer: ಜೋಫ್ರಾ ಆರ್ಚರ್ ಅವರನ್ನು ಹರಾಜಿನಲ್ಲಿ ಯಾವ ತಂಡವೂ ಖರೀದಿಸಿಲ್ಲ. ಇದೀಗ ಕೌಂಟಿ ಕ್ರಿಕೆಟ್’ನಲ್ಲಿ ಆಡಲು ಬೆಂಗಳೂರಿನಲ್ಲಿ ಅಭ್ಯಾಸ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ; ಬೆಂಗಳೂರಿನಲ್ಲಿ ಸ್ನೇಹಪರ ಹವಾಮಾನ ಪರಿಸ್ಥಿತಿ ಇದ್ದು, ತಂಡದೊಂದಿಗೆ ಅಭ್ಯಾಸ ಮಾಡಲು ಇದು ಸೂಕ್ತ ಸ್ಥಳ.

Written by - Bhavishya Shetty | Last Updated : Mar 14, 2024, 04:11 PM IST
    • ಕೌಂಟಿ ಕ್ರಿಕೆಟ್’ಗಾಗಿ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಜೋಫ್ರಾ ಆರ್ಚರ್
    • ಈ ಸಂದರ್ಭದಲ್ಲಿ ಪೋಸ್ಟ್ ಶೇರ್ ಮಾಡಿರುವ ಆರ್ಚರ್
    • ಮುಂಬೈ ಇಂಡಿಯನ್ಸ್‌ ಪರ 2023ರಲ್ಲಿ ಜೋಫ್ರಾ ಆರ್ಚರ್ ಆಡಿದ್ದರು
RCB ಸೇರಿದ್ರಾ ಜೋಫ್ರಾ ಆರ್ಚರ್! ಹರಾಜಿನಲ್ಲಿ ಖರೀದಿಯಾಗದಿದ್ದರೂ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದೇಕೆ ಇಂಗ್ಲೆಂಡ್ ವೇಗಿ? title=
jofra archer

England pacer Jofra Archer: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೌಂಟಿ ಕ್ರಿಕೆಟ್’ಗಾಗಿ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆರ್ಚರ್ ಶೇರ್ ಮಾಡಿರುವ ಪೋಸ್ಟ್ ಒಂದನ್ನು ಕಂಡ ಫ್ಯಾನ್ಸ್, ಐಪಿಎಲ್‌’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಆರ್ಚರ್ ಅಭ್ಯಾಸ ಮಾಡುತ್ತಿದ್ದಾರೆ! ಎಂದು ಭಾವಿಸಿದ್ದಾರೆ.

ಇದನ್ನೂ ಓದಿ: ಗೃಹಮಂಡಳಿಯಿಂದ 500 ಎಕರೆಯಲ್ಲಿ ನೂತನ ಬಡಾವಣೆ: ಮಿನಿ ಟೌನ್ಶಿಪ್ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ

ಅಂದಹಾಗೆ ಜೋಫ್ರಾ ಆರ್ಚರ್ ಅವರನ್ನು ಹರಾಜಿನಲ್ಲಿ ಯಾವ ತಂಡವೂ ಖರೀದಿಸಿಲ್ಲ. ಇದೀಗ ಕೌಂಟಿ ಕ್ರಿಕೆಟ್’ನಲ್ಲಿ ಆಡಲು ಬೆಂಗಳೂರಿನಲ್ಲಿ ಅಭ್ಯಾಸ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ; ಬೆಂಗಳೂರಿನಲ್ಲಿ ಸ್ನೇಹಪರ ಹವಾಮಾನ ಪರಿಸ್ಥಿತಿ ಇದ್ದು, ತಂಡದೊಂದಿಗೆ ಅಭ್ಯಾಸ ಮಾಡಲು ಇದು ಸೂಕ್ತ ಸ್ಥಳ.

ಮುಂಬೈ ಇಂಡಿಯನ್ಸ್‌ ಪರ 2023ರಲ್ಲಿ ಜೋಫ್ರಾ ಆರ್ಚರ್ ಆಡಿದ್ದರು. ಆದರೆ ಆಡಿದ 5 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಕಬಳಿಸಲಷ್ಟೇ ಅವರು ಶಕ್ತರಾಗಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಸಸೆಕ್ಸ್ ಹೊರತುಪಡಿಸಿ ಲಂಕಾಶೈರ್ ಪುರುಷರ ಮತ್ತು ಮಹಿಳಾ ತಂಡಗಳು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿವೆ.

ಇದನ್ನೂ ಓದಿ: ಈತನಿದ್ದರೆ ಮಾತ್ರ RCB ಪ್ಲೇಆಫ್ ಪ್ರವೇಶಿಸಲು ಸಾಧ್ಯ! ಭವಿಷ್ಯ ನುಡಿದ ಸ್ಟಾರ್ ಕ್ರಿಕೆಟಿಗ

ಅಂದಹಾಗೆ ಆರ್ಚರ್ ಬಗ್ಗೆ ಮಾತನಾಡುವುದಾದರೆ, ಮೊಣಕೈಗೆ ಶಸ್ತ್ರಚಿಕಿತ್ಸೆ ಒಳಗಾದ ಕಾರಣ ಕಳೆದ ವರ್ಷ ಅವರನ್ನು ತಂಡದಿಂದ ಹೊರಗಿಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಜೂನ್‌’ನಲ್ಲಿ ನಡೆಯಲಿರುವ T20 ವಿಶ್ವಕಪ್‌’ಗೆ ಮುಂಚಿತವಾಗಿ ಫಿಟ್ ಆಗಲು ಶ್ರಮಪಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News