Shruthi Hassan: ಹಾಲಿವುಡ್‌ ಸಿನಿಮಾದಿಂದ ಹೊರ ನಡೆದ ಶೃತಿ ಹಾಸನ್‌: ಒಪ್ಪಿಕೊಂಡ ಚಿತ್ರವನ್ನು ಕೈಬಿಟ್ಟಿದ್ದೇಕೆ?

Shruthi Hassan Hollywood Film: ಸೌತ್‌ ಸಿನಿಮಾರಂಗದ ಹಬು ಬೇಡಿಕೆಯ ನಟಿ ಶೃತಿ ಹಾಸನ್‌ ತಾವು ಒಪ್ಪಿಕೊಂಡಿದ್ದ ‘ಚೆನ್ನೈ ಸ್ಟೋರಿ’ ಹಾಲಿವುಡ್‌ ಸಿನಿಮಾದಿಂದ ಹೊರ ನಡೆದಿದ್ದಾರೆ. ಹಾಗಿದ್ರೇ ಈ ನಟಿ ಸಹಿ ಹಾಕಿದ್ದ ಚಿತ್ರವನ್ನು ಕೈಬಿಟ್ಟಿದ್ದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Apr 10, 2024, 04:58 PM IST
  • ಬಾಲಿವುಡ್‌ನ ಹಲವಾರು ತಾರೆಯರಾದ ಐಶ್ವರ್ಯಾ ರೈ ಬಚ್ಚನ್, ಇರ್ಫಾನ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಇನ್ನೂ ಮುಂತಾದವರು ಹಾಲಿವುಡ್‌ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.
  • ಇದೀಗ ಶೃತಿ ಹಾಸನ್‌ ಹಾಲಿವುಡ್‌ ಡೈರೆಕ್ಟರ್‌ ಫಿಲಿಪ್ ಜಾನ್ 'ಚೆನ್ನೈ ಸ್ಟೋರಿ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಈ ನಟಿ ನಟಿಸುತ್ತಿದ್ದಾರೆ.
  • ಹಾಲಿವುಡ್‌ನ ಈ ಸಿನಿಮಾಗೆ ಮೊದಲು ನಾಯಕಿಯಾಗಿ ಸಮಂತಾ ರುತ್ ಪ್ರಭು ಆಯ್ಕೆಯಾಗಿದ್ದರು. ಸಮಂತಾ ನಿರ್ದೇಶಕರ ಜೊತೆಗಿರುವ ಫೋಟೋ ಕೂಡ ವೈರಲ್‌ ಆಗಿತ್ತು.
Shruthi Hassan: ಹಾಲಿವುಡ್‌ ಸಿನಿಮಾದಿಂದ ಹೊರ ನಡೆದ ಶೃತಿ ಹಾಸನ್‌: ಒಪ್ಪಿಕೊಂಡ ಚಿತ್ರವನ್ನು ಕೈಬಿಟ್ಟಿದ್ದೇಕೆ? title=

Shruthi Hassan Out From Hollwood Movie: ಬಹುಭಾಷಾ ನಟಿ ಶೃತಿ ಹಾಸನ್‌ ತಾವು ಒಪ್ಪಿಕೊಂಡಿದ್ದ ಹಾಲಿವುಡ್‌ ಸಿನಿಮಾದಿಂದ ಹೊರ ನಡೆದಿದ್ದಾರೆ. ಬಾಲಿವುಡ್‌ನ  ಹಲವಾರು ತಾರೆಯರಾದ ಐಶ್ವರ್ಯಾ ರೈ ಬಚ್ಚನ್, ಇರ್ಫಾನ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ  ಇನ್ನೂ ಮುಂತಾದವರು ಹಾಳಿವುಡ್‌ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇತೀಚೆಗೆ ಸೌತ್‌ ಚಿತ್ರರಂಗದ ನಟಿ ಶೃತಿ ಹಾಸನ್‌ ಕೂಡ ಹಾಲಿವುಡ್‌ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆಮಬ ಸುದ್ದಿ ಕೇಳಿ ಬಂದಿತ್ತು. 

ಹೌದು.. ನಟಿ ಶೃತಿ ಹಾಸನ್‌ ಸದ್ಯ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ ಪ್ಯಾನ್‌ ಇಂಡಿಯಾ ಸಿನಿಮಾ ಸಲಾರ್‌ ಮೂಲಕ ಯಶಸ್ವಿಯಾದರು. ಇದೀಗ ಈ ಬೆಡಗಿ ಹಾಲಿವುಡ್‌ ಡೈರೆಕ್ಟರ್‌ ಫಿಲಿಪ್ ಜಾನ್ 'ಚೆನ್ನೈ ಸ್ಟೋರಿ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಈ ನಟಿ ನಟಿಸುತ್ತಿದ್ದಾರೆ. ಈ ಸಿನಿಮಾ ‘ಅರೇಂಜ್‌ಮೆಂಟ್ಸ್‌ ಆಫ್‌ ಲವ್‌’ ಎಂಬ ಕಾದಂಬರಿಯನ್ನು ಆಧರಿಸಿದ ಎನ್ನಲಾಗಿದೆ.

ಇದನ್ನೂ ಓದಿ: Ramayana: ʻರಾಮಾಯಣʼದಲ್ಲಿ ರಣಬೀರ್‌ ರಾಮನ ಪ್ರಾತ್ರಕ್ಕೆ ಹಾಗೂ ಸಾಯಿ ಪಲ್ಲವಿ ಸೀತಾ ರೋಲ್‌ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

ಆದರೆ ಸದ್ಯ ದಕ್ಷಿಣ ಚಿತ್ರರಂಗದ ನಟಿ ಶೃತಿ ಹಾಸನ್‌ 'ಚೆನ್ನೈ ಸ್ಟೋರಿ' ಚಿತ್ರವನ್ನು ಕೈ ಬಿಟ್ಟಿದ್ದಾರೆ. ಹಾಲಿವುಡ್‌ನ ಈ ಸಿನಿಮಾಗೆ ಮೊದಲು ನಾಯಕಿಯಾಗಿ ಸಮಂತಾ ರುತ್ ಪ್ರಭು ಆಯ್ಕೆಯಾಗಿದ್ದರು. ಸಮಂತಾ ನಿರ್ದೇಶಕರ ಜೊತೆಗಿರುವ ಫೋಟೋ ಕೂಡ ವೈರಲ್‌ ಆಗಿತ್ತು. ಆದರೆ ನಟಿ ಸಮಂತಾ ಆರೋಗ್ಯ ಸಮಸ್ಯೆಗಳ ಕಾರಣ ಪ್ರಾಜೆಕ್ಟ್‌ನಿಂದ ಹೊರಬಂದರು. ತದನಂತರ ಶೃತಿ ಹಾಸನ್‌ ಆಯ್ಕೆ ಮಾಡಿದ್ದರು. ಆದರೆ ಇದೀಗ ಶೃತಿ ಹಾಸನ್‌ ಕೂಡ ಸಿನಿಮಾದಿಂದ ಹೊರ ಬಂದಿದ್ದಾರೆ.

ನಟಿ ಶೃತಿ ಹಾಸನ್‌ ‘ಚೆನ್ನೈ ಸ್ಟೋರಿ’ ಚಿತ್ರದ ಶೂಟಿಂಗ್‌ನಲ್ಲಿ ಕೂಡ ಪಾಲುಗೊಂಡಿದ್ದರು. ಆದರೆ ಈ ನಟಿ ಸಿನಿಮಾದಿಂದ ಹೊರಬಿದ್ದಿದ್ದು, ಇದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯಕ್ಕೆ ಈ ಹಾಲಿವುಡ್‌ ಈ ಪ್ರಾಜೆಕ್ಟ್ ನಿಂದ ಇಬ್ಬರು ಸ್ಟಾರ್ ಹೀರೋಯಿನ್ ಗಳು ಹಿಂದೆ ಸರಿದಿರುವುದು ಹಾಟ್ ಟಾಪಿಕ್ ಆಗಿದೆ. ಶೃತಿ ಹಾಸನ್‌ ಈ ಸಿನಿಮಾಗೆ ಸೈನ್‌ ಹಾಕಿ, ಬಳಿಕ ಈ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರೆ. ಇದರ ಬಗ್ಗೆ ನಟಿ ಶೃತಿ ಹಾಸನ್‌ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News