Ramayana: ʻರಾಮಾಯಣʼದಲ್ಲಿ ರಣಬೀರ್‌ ರಾಮನ ಪ್ರಾತ್ರಕ್ಕೆ ಹಾಗೂ ಸಾಯಿ ಪಲ್ಲವಿ ಸೀತಾ ರೋಲ್‌ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

Ramayana Update: ʻರಾಮಾಯಣʼ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ನಟ ರಣಬೀರ್‌ ಕಪೂರ್‌ ಹಾಗೂ ನಟಿ ಸಾಯಿ ಪಲ್ಲವಿ ಸೀತಾ ಪಾತ್ರಕ್ಕೆ ಪಡೆಯುತ್ತಿರುವ ಬಹು ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಹಾಗಿದ್ರೇ ರಣಬೀರ್‌ ಮತ್ತು ಸಾಯಿ ಪಲ್ಲವಿ ತೆರೆದುಕೊಳ್ಳುತ್ತಿರುವ ಸಂಬಾವನೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

Written by - Zee Kannada News Desk | Last Updated : Apr 10, 2024, 09:42 AM IST
  • ʻರಾಮಾಯಣʼದಲ್ಲಿ ನಟ ರಣಬೀರ್ ಕಪೂರ್ ರಾಮನ ಪಾತ್ರ ಮಾಡುತ್ತಿದ್ದರೇ, ಸೀತೆಯ ಪಾತ್ರವನ್ನು ಸೌತ್‌ ನಟ ಸಾಯಿ ಪಲ್ಲವಿ ಮಾಡುತ್ತಿದ್ದಾರೆ.
  • ಇನ್ನೂ ರಾಮಾಯಣ ಸಿನಿಮಾದ ಚಿತ್ರೀಕರಣದ ಫೋಟೋಸ್‌ ಲೀಕ್‌ ಆಗಿರುವ ಹಿನ್ನೆಲೆ ನಿರ್ದೇಶಕ ನಿತೇಶ್ ತಿವಾರಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
  • ಡೈರೆಕ್ಟರ್‌ ನಿತೇಶ್‌ ತಿವಾರಿ ರಾಮಾಯಣ ಸಿನಿಮಾವನ್ನು ಮೂರು ಭಾಗಗಳಲ್ಲಿ ಮಾಡಲಿದ್ದಾರೆ.
Ramayana: ʻರಾಮಾಯಣʼದಲ್ಲಿ ರಣಬೀರ್‌ ರಾಮನ ಪ್ರಾತ್ರಕ್ಕೆ ಹಾಗೂ ಸಾಯಿ ಪಲ್ಲವಿ ಸೀತಾ ರೋಲ್‌ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? title=

Renumeration Of Ranbir And Sai Pallavi For Ramayana: ಬಾಲಿವುಡ್‌ ಡೈರೆಕ್ಟರ್ ನಿತೇಶ್ ತಿವಾರಿ‌ ನಿರ್ದೇಶನದಲ್ಲಿ  ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಇತ್ತೇಚೆಗಷ್ಟೇ ಶುರುವಾಗಿದೆ. ಇತ್ತೀಚೆಗಷ್ಟೇ ಶೂಟಿಂಗ್‌ ಸೆಟ್‌ನ ಫೋಟೋಸ್‌ ಹಾಘೂ ವಿಡಿಯೋಗಳು ಕೋಡ ಲೀಕ್‌ ಆಗಿತ್ತು. ಈ ಚಿತ್ರದಲ್ಲಿ ನಟ ರಣಬೀರ್ ಕಪೂರ್ ರಾಮನ ಪಾತ್ರ ಮಾಡುತ್ತಿದ್ದರೇ, ಸೀತೆಯ ಪಾತ್ರವನ್ನು ಸೌತ್‌ ನಟ ಸಾಯಿ ಪಲ್ಲವಿ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ರಣಬೀರ್‌ ಹಾಗೂ ಸಾಯಿ ಪಲ್ಲವಿ ಈ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಬಗ್ಗೆ ಮಾಹಿತಿ ಹೊರ ಬಿದ್ದಿದೆ.

ಬಿ-ಟೌನ್‌ ಸ್ಟಾರ್‌ ನಟ ರಣಬೀರ್ ಕಪೂರ್  ‘ರಾಮಾಯಣ’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಅಭಿನಯಿಸಲು 75 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ನಟನಿಗೆ ʻಅನಿಮಲ್‌ʼ ಸಿನಿಮಾಗೆ ಸಿಕ್ಕ ಸಂಭಾವನೆಗಿಂತ ಹೆಚ್ಚು ಪಡೆಯುತ್ತಿದ್ದಾರೆ. ಇನ್ನೂ ನಟಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ಸೀತಾ ಪಾತ್ರವನ್ನು ನಿರ್ವಹಿಸಲು 6 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಈ ನಟಿ ಸೌತ್‌ ಸಿನಿಮಾಗಳಲ್ಲಿ ನಟಿಸಲು 2.5-3 ಕೋಟಿಯವರೆಗೂ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದರು. 

ಇದನ್ನೂ ಓದಿ: ನಟಿ ರೇಖಾಗೆ ಮಹಿಳಾ ಮ್ಯಾನೇಜರ್ ಜೊತೆಯೇ ಸಂಬಂಧ!! ಮದುವೆಯಾಗಿ 7 ತಿಂಗಳಿಗೇ ಪತಿ ಆತ್ಮಹತ್ಯೆಗೆ ಇದೇನಾ ಕಾರಣ?

ಇನ್ನೂ ರಾಮಾಯಣ ಸಿನಿಮಾದ ಚಿತ್ರೀಕರಣದ ಫೋಟೋಸ್‌ ಲೀಕ್‌ ಆಗಿರುವ ಹಿನ್ನೆಲೆ ನಿರ್ದೇಶಕ ನಿತೇಶ್ ತಿವಾರಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಶೂಟಿಂಗ್‌ ಸೆಟ್‌ನಲ್ಲಿ ನೋ-ಫೋನ್ ರೂಲ್ಸ್​ ಜಾರಿಗೆ ತಂದಿದ್ದಾರೆ. ಚಿತ್ರೀಕರಣ ಪ್ರಾರಂಭವಾದ ನಂತರ ಅಲ್ಲಿಯ ಹೆಚ್ಚುವರಿ  ಸಿಬ್ಬಂದಿಗಳು ಸೆಟ್‌ ನಿಂದ ಹೊರಗುಳಿಯುವಂತೆ ನಿರ್ದೇಶಕರು ಆದೇಶ ನೀಡಿದ್ದಾರೆ. ಸೆಟ್‌ ನಲ್ಲಿ ಶೂಟಿಂಗ್‌ ನಡೆಯುವಾಗ ಅಗತ್ಯವಿರುವ ನಟರು ಮತ್ತು ತಂತ್ರಜ್ಞರು ಮಾತ್ರ ಇರಬೇಕಾಗಿದೆ.  

ಡೈರೆಕ್ಟರ್‌ ನಿತೇಶ್‌ ತಿವಾರಿ ರಾಮಾಯಣ ಸಿನಿಮಾವನ್ನು ಮೂರು ಭಾಗಗಳಲ್ಲಿ ಮಾಡಲಿದ್ದಾರೆ. ಮೊದಲನೆ ಭಾಗದಲ್ಲಿ ರಾಮ, ಅಯೋಧ್ಯೆಯಲ್ಲಿನ ಕುಟುಂಬ, ಸೀತೆಯೊಂದಿಗಿನ ವಿವಾಹ, 14 ವರ್ಷಗಳ ವನವಾಸವನ್ನು ಮತ್ತು ಸೀತೆಯ ಅಪಹರಣದೊಂದಿಗೆ ಈ ಭಾಗ ಮುಗಿಯುತ್ತದೆ. ಚಿತ್ರದ ಎರಡನೇ ಭಾಗದಲ್ಲಿ ಹನುಮಂತನ ಕಥೆಯಿದ್ದು, ಇದು ಸೀತೆಯ ಅಪಹರಣದೊಂದಿಗೆ ಪ್ರಾರಂಭವಾಗಿ ಹನುಮಂತ, ರಾಮ ಮತ್ತು ಲಕ್ಷ್ಮಣ ದೃಶ್ಯಗಳ ಜೊತೆ ಲಂಕಾ ದಾಳಿಯವರೆಗಿನ ಕಥೆಯನ್ನು ತೋರಿಸಲಾಗುತ್ತದೆ. ಕೊನೆಯದಾಗಿ ಮೂರನೇ ಭಾಗದಲ್ಲಿ ರಾಮ ಮತ್ತು ರಾವಣರ ನಡುವಿನ ಯುದ್ಧವನ್ನು ಚಿತ್ರಿಸಲಾಗುತ್ತದೆ. ಬಳಿಕ ರಾಮ ಮತ್ತು ಸೀತೆ ಅಯೋಧ್ಯೆಗೆ ಹಿಂದಿರುಗುವ ಬಗ್ಗೆಯೂ ತೋರಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News