/kannada/photo-gallery/smartphones-selling-for-just-8k-in-amazon-great-indian-festival-bumper-sale-249412 ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು! ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು! 249412

ತೀಸ್ ಹಜಾರಿ ಘಟನೆಯ 2 ದಿನಗಳ ಬಳಿಕ ಕಾರ್ಕಾರ್ಡೂಮಾ ಕೋರ್ಟ್‌ನಲ್ಲಿ ಘರ್ಷಣೆ

ಮಹಿಳಾ ಪತ್ರಕರ್ತೆಯೊಂದಿಗೆ ವಕೀಲರು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

Last Updated : Nov 4, 2019, 01:10 PM IST
ತೀಸ್ ಹಜಾರಿ ಘಟನೆಯ 2 ದಿನಗಳ ಬಳಿಕ ಕಾರ್ಕಾರ್ಡೂಮಾ ಕೋರ್ಟ್‌ನಲ್ಲಿ ಘರ್ಷಣೆ title=

ನವದೆಹಲಿ: ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಯ ಎರಡು ದಿನಗಳ ಬಳಿಕ ಕಾರ್ಕಾರ್ಡೂಮಾ ಜಿಲ್ಲಾ ನ್ಯಾಯಾಲಯದಲ್ಲಿ( Karkardooma court) ಪೊಲೀಸರು ಮತ್ತು ವಕೀಲರ ನಡುವೆ ಮತ್ತೊಂದು ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ.. ಮಾಹಿತಿಯ ಪ್ರಕಾರ, ದೆಹಲಿಯ ಆನಂದ್ ವಿಹಾರ್ ಪ್ರದೇಶದ ಕಾರ್ಕಾರ್ಡೂಮಾ ನ್ಯಾಯಾಲಯದಲ್ಲಿ ಸೋಮವಾರ ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ ಸಂಭವಿಸಿದೆ. 

ಕೆಲವು ವಕೀಲರು ಕಾರ್ಕಾರ್ಡೂಮಾ ನ್ಯಾಯಾಲಯದಲ್ಲಿ ಪೊಲೀಸರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಪತ್ರಕರ್ತೆಯೊಂದಿಗೆ ವಕೀಲರು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಎರಡು ದಿನಗಳ ಹಿಂದೆ ಉತ್ತರ ದೆಹಲಿಯಲ್ಲಿ ಜಿಲ್ಲೆಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಮಧ್ಯಾಹ್ನ ತೀವ್ರ ಜಗಳ ನಡೆದಿತ್ತು. ಇಬ್ಬರ ನಡುವೆ ಮಾತಿನ ಮೂಲಕ ಪ್ರಾರಂಭವಾದ ಜಗಳ ಕೈ-ಕೈ ಮಿಲಾಸುವ ಹಂತಕ್ಕೆ ತಲುಪಿತ್ತು. ನ್ಯಾಯಾಲಯದ ಕಟ್ಟಡದ ಒಳಗೆ ವಾಹನ ನಿಲುಗಡೆ ಮಾಡುವ ಬಗ್ಗೆ ವಕೀಲರು ಮತ್ತು ಕೆಲವು ಪೊಲೀಸರ ನಡುವೆ ಸಣ್ಣಪುಟ್ಟ ವಾಗ್ವಾದ ನಡೆದ ನಂತರ ಶನಿವಾರ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು. ಈ ಘಟನೆಯ ಕೋಪಗೊಂಡ ವಕೀಲರು ದೆಹಲಿಯ ಎಲ್ಲಾ ನ್ಯಾಯಾಲಯಗಳಲ್ಲಿ ಸೋಮವಾರದವರೆಗೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ದೆಹಲಿ ಹೈಕೋರ್ಟ್ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ದೆಹಲಿ ಹೈಕೋರ್ಟ್ ಹೆಚ್ಚುವರಿ ಡಿಸಿಪಿ ಹರೇಂದ್ರ ಸಿಂಗ್ ಮತ್ತು ವಿಶೇಷ ಸಿಪಿ ಸಂಜಯ್ ಸಿಂಗ್ ಅವರನ್ನು ವರ್ಗಾಯಿಸಿದೆ, 2 ಎಎಸ್ಐಗಳನ್ನು ಅಮಾನತುಗೊಳಿಸಲಾಗಿದೆ.

ತೀಸ್ ಹಜಾರಿ ನ್ಯಾಯಾಲಯದ ಹಿಂಸಾಚಾರ ಪ್ರಕರಣದ ನ್ಯಾಯಾಂಗ ತನಿಖೆ 6 ವಾರಗಳಲ್ಲಿ ನಡೆಯಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ನಿವೃತ್ತ ನ್ಯಾಯಾಧೀಶ ಎಸ್‌ಪಿ ಗರ್ಗ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಗಾಯಗೊಂಡ ವಕೀಲರ ಹೇಳಿಕೆಗಳನ್ನು ದಾಖಲಿಸುವಂತೆ ನ್ಯಾಯಾಲಯ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದು, ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ.