ನವದೆಹಲಿ: ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಸಹಿತ 130 ರನ್‌ಗಳಿಂದ ಸೋಲಿಸಿದ ನಂತರ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಆರಂಭಿಕ ಆಟಗಾರ ಮಾಯಂಕ್ ಅಗರ್ವಾಲ್ ಹಾಗೂ ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನದಿಂದಾಗಿ ಭಾರತ ತಂಡ ಈಗ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅಷ್ಟೆಲ್ಲ ಅಲ್ಲದೆ ಈ ಪಂದ್ಯದ ಗೆಲುವಿನ ಮೂಲಕ ಭಾರತ ಈಗ ಸತತ ಆರು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
Virat Kohli on a new high as Test captain of #TeamIndia. #INDvBAN pic.twitter.com/Smb6QcdbA1
— Circle of Cricket (@circleofcricket) November 16, 2019
ಈ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಅದೇನಪ್ಪಾ ಅಂದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಇನಿಂಗ್ಸ್ ಸಹಿತ ಗೆಲುವು ಸಾಧಿಸಿದ ಭಾರತ ತಂಡದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಧೋನಿ ಹೆಸರಿನಲ್ಲಿತ್ತು, ಅದನ್ನು ಈಗ ಕೊಹ್ಲಿ ಅಳಿಸಿಹಾಕಿದ್ದಾರೆ.
ಅತಿ ಹೆಚ್ಚು ಟೆಸ್ಟ್ ಇನಿಂಗ್ಸ್ ಗೆದ್ದ ಭಾರತ ತಂಡದ ನಾಯಕರು:
10: ವಿರಾಟ್ ಕೊಹ್ಲಿ
9: ಎಂ.ಎಸ್.ಧೋನಿ
8: ಮೊಹಮ್ಮದ್ ಅಜರುದ್ದೀನ್
7: ಸೌರವ್ ಗಂಗೂಲಿ
ಒಟ್ಟಾರೆಯಾಗಿ, ಕೊಹ್ಲಿ ಅವರು ಪ್ರಸ್ತುತ ಏಳನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕ್ರಿಕೆಟಿಗ ಗ್ರೇಮ್ ಸ್ಮಿತ್ 22 ಇನಿಂಗ್ಸ್ ಗೆದ್ದ ದಾಖಲೆಗಳನ್ನು ಹೊಂದಿದ್ದರೆ, ಸ್ಟೀವ್ ವಾ ಅವರು 14 ಇನಿಂಗ್ಸ್ ಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ.