Delusionship ಅಂದ್ರೆ ಏನು?ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?

Delusionship Effect On Mental Health: ಡೇಲ್ಯೂಷನ್ಷಿಪ್ ಬಗ್ಗೆ ನೀವು ಕಡಿಮೆ ಅಥವಾ ಕೇಳದೆ ಇರಬಹುದು. ಆದರೆ ಇಂದು ಸಂಬಂಧಗಳಿಗೆ ಇದು ಹೊಸ ಪದವಾಗಿ ಹೊರಹೊಮ್ಮುತ್ತಿದೆ. ಇದು ಏನು ಮತ್ತು ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ತಿಳಿದುಕೊಳ್ಳೋಣ ಬನ್ನಿ, 

Written by - Nitin Tabib | Last Updated : May 5, 2024, 01:20 PM IST
  • ಡೇಲ್ಯೂಷನ್ಷಿಪ್ ನಲ್ಲಿ ನೀವು ಇಷ್ಟಪಡುವ ವ್ಯಕ್ತಿ ಬೇರೊಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದಾಗ ಅಥವಾ
  • ಅವನ/ಳ ಮದುವೆ ನಿಶ್ಚಯವಾದಾಗ, ನಂತರ ಭ್ರಮೆಯ ಸ್ಥಿತಿಯಲ್ಲಿ ನೀವು ಆ ವ್ಯಕ್ತಿಯ ಬಗ್ಗೆ ಅಸೂಯೆ ಪಡಲು ಪ್ರಾರಂಭಿಸುತ್ತೀರಿ
  • ಮತ್ತು ನಂತರ ನೀವು ಅವನಿಗೆ ಹಾನಿ ಮಾಡಲು ಪ್ರಯತ್ನಿಸಬಹುದು.
Delusionship ಅಂದ್ರೆ ಏನು?ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? title=

What Is Delusionship: ಡೇಲ್ಯೂಷನ್ಷಿಪ್ ಅಥವಾ ಕನ್ನಡದಲ್ಲಿ ಈ ಪದದ ಸಮಾನಾರ್ಥಕ ಪದ ಭ್ರಮೆ ಒಂದು ಮಾನಸಿಕ ಸ್ಥಿತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ನಿಜ ಜೀವನದ ಬಗ್ಗೆ ಭ್ರಮೆ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇದು ಸಂಬಂಧದಲ್ಲಿ ಸಂಭವಿಸಿದಲ್ಲಿ, ವ್ಯಕ್ತಿಯು ಯಾರನ್ನು ಬೇಕಾದರೂ ಪ್ರೀತಿಸುತ್ತಾನೆ ಮತ್ತು ತನ್ನ ಪ್ರೀತಿಯ ವ್ಯಕ್ತಿ ತನ್ನನ್ನು ಕೂಡ ಪ್ರೀತಿಸುತ್ತಾನೆ/ಳೆ ಅಂತ ಭಾವಿಸುತ್ತಾನೆ. ಇದರರ್ಥ ಪ್ರೀತಿಯು ಪರಸ್ಪರ ಸಂಬಂಧ ಹೊಂದಿರಬಹುದು, ಆದರೆ ವಾಸ್ತವದಲ್ಲಿ ಇದು ಹಾಗಿರುವುದಿಲ್ಲ.

ಡೇಲ್ಯೂಷನ್ಷಿಪ್ ಕಾರಣವೇನು?
ಓರ್ವ ಸಂವೇದನಾಶೀಲ ವ್ಯಕ್ತಿ ಅಥವಾ ತರ್ಕ ಹೊಂದಿರುವ ವ್ಯಕ್ತಿ ಎಂದಿಗೂ ಕೂಡ ಡೇಲ್ಯೂಷನ್ಷಿಪ್ ನಲ್ಲಿ ಬೀಳುವುದಿಲ್ಲ.  ಏಕೆಂದರೆ ಯಾವುದೇ ಓರ್ವ ವ್ಯಕ್ತಿಯ ಕಡೆಗೆ ತನ್ನ ಆಕರ್ಷಣೆ ಅಥವಾ ಪ್ರೀತಿ ಏಕಪಕ್ಷೀಯವಾಗಿದೆ ಎಂದು ಆತ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾನೆ, ಅಂದರೆ, ತಾನು ಪ್ರೀತಿಸುವ ವ್ಯಕ್ತಿಯಿಂದ ಅದೇ ಪ್ರತಿಕ್ರಿಯೆ ಸಿಗುತ್ತದೆ ಎಂಬ ಯಾವುದೇ ಗ್ಯಾರಂಟಿ ಆತ ಹೊಂದಿರುವುದಿಲ್ಲ. ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದ ಮತ್ತು ಅನಗತ್ಯವಾಗಿ ಕನಸು ಕಾಣುವ ಜನರಿಗೆ ಮಾತ್ರ ಡೇಲ್ಯೂಷನ್ಷಿಪ್ ಉಂಟಾಗುತ್ತದೆ.

ಡೇಲ್ಯೂಷನ್ಷಿಪ್ಅನಾನುಕೂಲಗಳು
1. ಸತ್ಯವನ್ನು ಒಪ್ಪಿಕೊಳ್ಳುವಲ್ಲಿ ತೊಂದರೆ

ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಡೇಲ್ಯೂಷನ್ಷಿಪ್ ನಲ್ಲಿ ವಾಸಿಸುತ್ತಿದ್ದರೆ, ಆತ ಕನಸಿನ ಜಗತ್ತಿನಲ್ಲಿ ವಾಸಿಸುತ್ತಿದ್ದಾನೆ ಎಂಬುದನ್ನೂ ನಂಬಲು ಆತನಿಗೆ ಕಷ್ಟವಾಗುತ್ತದೆ, ಆತನ ಕನಸುಗಳೆಲ್ಲವೂ ಆತನಿಗೆ ನಿಮ ಎಂಬಂತೆ ತೋರುತ್ತವೇ. ಆದರೆ ನಿಜ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಲು ಆತನಿಂದ ಸಾಧ್ಯವಾಗುವುದಿಲ್ಲ. ಇದರಿಂದ ಆತ ಸಾಕಷ್ಟು ನಷ್ಟ ಅನುಭವಿಸುತ್ತಾನೆ. 

2. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಭ್ರಮೆಯ ಪರಿಣಾಮಗಳು ಕೆಟ್ಟದಾಗಿರಬಹುದು, ಏಕೆಂದರೆ ನಿಮ್ಮ ಮೋಹದಿಂದ ನೀವು ಮಾಡುವಷ್ಟು ಪ್ರೀತಿಯನ್ನು ನೀವು ಮರಳಿ ಪಡೆಯದಿದ್ದರೆ, ಈ ಪರಿಸ್ಥಿತಿಯು ಒತ್ತಡಕ್ಕೆ ತಿರುಗುತ್ತದೆ. ಉದ್ವೇಗವು ಅನೇಕ ರೋಗಗಳು ಮತ್ತು ಸಮಸ್ಯೆಗಳಿಗೆ ಮೂಲ ಕಾರಣವಾಗಿ ಬಿಡುತ್ತದೆ

3. ನಿಮಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ
ಒಬ್ಬ ವ್ಯಕ್ತಿಯು ಡೇಲ್ಯೂಷನ್ಷಿಪ್ ಅನ್ನು ಸ್ವೀಕರಿಸಲು ಸಾಧ್ಯವಾಗದಿದ್ದಾಗ ಮತ್ತು ಸ್ವಲ್ಪ ಕಾಲಾಂತರದಲ್ಲಿ ಆತ ಸತ್ಯವನ್ನು ಎದುರಿಸಿದಾಗ, ಅವನು ಅನೇಕ ಸಂದರ್ಭಗಳಲ್ಲಿ ಏಕಪಕ್ಷೀಯ ಪ್ರೀತಿಯಲ್ಲಿ ಸಿಲುಕಿದ ನಂತರ ಆತ್ಮಹತ್ಯೆ ಮಾಡಿಕೊಳ್ಳಬಹುದು. ಇದು ಒಂದು ಅಪಾಯಕಾರಿ ಪರಿಸ್ಥಿತಿಯಾಗಿದೆ.

ಇದನ್ನೂ ಓದಿ-ಆರೋಗ್ಯ ವಿಮಾ ಪಾಲಸಿ ಹೊಂದಿದವರಿಗೊಂದು ಬ್ಯಾಡ್ ನ್ಯೂಸ್!

4. ಅಸೂಯೆ ಭಾವನೆ
ಡೇಲ್ಯೂಷನ್ಷಿಪ್ ನಲ್ಲಿ ನೀವು ಇಷ್ಟಪಡುವ ವ್ಯಕ್ತಿ ಬೇರೊಬ್ಬರನ್ನು ಪ್ರೀತಿಸಲು ಪ್ರಾರಂಭಿಸಿದಾಗ ಅಥವಾ ಅವನ/ಳ ಮದುವೆ ನಿಶ್ಚಯವಾದಾಗ, ನಂತರ ಭ್ರಮೆಯ ಸ್ಥಿತಿಯಲ್ಲಿ ನೀವು ಆ ವ್ಯಕ್ತಿಯ ಬಗ್ಗೆ ಅಸೂಯೆ ಪಡಲು ಪ್ರಾರಂಭಿಸುತ್ತೀರಿ ಮತ್ತು ನಂತರ ನೀವು ಅವನಿಗೆ ಹಾನಿ ಮಾಡಲು ಪ್ರಯತ್ನಿಸಬಹುದು.

ಇದನ್ನೂ ಓದಿ-"ಧೋನಿ ನನ್ನ ಪಾಲಿಗೆ ಚಿಕ್ಕಪ್ಪನಿದ್ದಂತೆ", ಹೀಗಂತ Anushka MSD ಕುರಿತು ಹೇಳಿದ್ಯಾಕೆ?

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು  ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News