Irfan Pathan: ಟಿ20 ವಿಶ್ವಕಪ್ ಪ್ರಾರಂಭಕ್ಕೆ ಉಳಿದಿರೋದು ಕೇವಲ 15 ದಿನಗಳಷ್ಟೇ. ಒಂದೆಡೆ, ಎಲ್ಲಾ ತಂಡಗಳು ತಯಾರಿಯಲ್ಲಿ ನಿರತವಾಗಿದ್ದರೆ, ಮತ್ತೊಂದೆಡೆ ಐಪಿಎಲ್ 2024ರಲ್ಲಿ ಭಾರತೀಯ ಆಟಗಾರರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ಏಪ್ರಿಲ್ 30 ರಂದು ಟಿ20 ವಿಶ್ವಕಪ್’ಗೆ ಭಾರತ ತಂಡವನ್ನು ಪ್ರಕಟಿಸಿತ್ತು. ಇದರಲ್ಲಿರುವ ಪ್ರತಿಯೊಬ್ಬ ಆಟಗಾರನೂ ಐಪಿಎಲ್ ಆಡುತ್ತಿರುತ್ತಾನೆ. ಆದರೆ ಅಷ್ಟರಲ್ಲಿ ಕೆಲ ಆಟಗಾರರು ಟೀಂ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿ: ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿ ಹೊರ ಹೋಗುವುದು!
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅವರಂತಹ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಮಾಜಿ ಆಲ್’ರೌಂಡರ್ ಇರ್ಫಾನ್ ಪಠಾಣ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜೂನ್ 2 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಮತ್ತೊಂದೆಡೆ IPL 2024 ಪ್ಲೇಆಫ್’ನ ಹೊಸ್ತಿಲನ್ನು ತಲುಪಿದೆ. ಈ ಟೂರ್ನಿಯ ಅಂತಿಮ ಪಂದ್ಯ ಮೇ 26ರಂದು ನಡೆಯಲಿದೆ. ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್’ನಲ್ಲಿ ಅಭಿಯಾನ ಆರಂಭಿಸಲಿದೆ. ಅನೇಕ ಆಟಗಾರರಿಗೆ ಕೆಲಸದ ಹೊರೆ ನಿರ್ವಹಿಸುವುದು ಬಿಸಿಸಿಐಗೆ ದೊಡ್ಡ ಸಮಸ್ಯೆಯಾಗಿದೆ.
ಇನ್ನು ಯಶಸ್ವಿ ಮತ್ತು ರೋಹಿತ್ ಅವರ ಬ್ಯಾಟಿಂಗ್ ಬಗ್ಗೆ ಇರ್ಫಾನ್ ಪಠಾಣ್ ಕಳವಳ ವ್ಯಕ್ತಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಎಡಗೈ ಬ್ಯಾಟ್ಸ್‌ಮನ್ ಮತ್ತು ವಿಶ್ವಕಪ್’ನಲ್ಲಿ ಮೊದಲ ಬಾರಿಗೆ ಆಟವಾಡಬೇಕು ಎಂದು ನಾನು ನಂಬಿರುವ ಕಾರಣ ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಅವರು ಹೇಳಿದರು.
ಎದುರಾಳಿ ತಂಡವು ಎಡಗೈ ಸ್ಪಿನ್ನರ್’ನಿಂದ ಪ್ರಾರಂಭಿಸುವುದಿಲ್ಲ. ಇನ್ ಫಾರ್ಮ್ ವಿರಾಟ್ ಕೊಹ್ಲಿಯನ್ನು ರೋಹಿತ್ ಶರ್ಮಾ ಜೊತೆ ಓಪನಿಂಗ್ ಮಾಡಬೇಕೋ ಅಥವಾ ಅನುಭವವಿಲ್ಲದ ಯಶಸ್ವಿ ಜೊತೆ ಹೋಗಬೇಕೋ ಎಂದು ತಂಡ ಯೋಚಿಸಲಿ. ಇಂತಹ ಪರಿಸ್ಥಿತಿಯಲ್ಲಿ ಜೈಸ್ವಾಲ್ ಫಾರ್ಮ್’ಗೆ ಬರುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿ ಮುಂದೆ ಮುಖ ನೋಡಿಕೊಂಡು ನಾಚಿನೀರಾದ ಮಂಗ! ಕಪಿರಾಯನ ಮಂಗನಾಟದ ವೈರಲ್ ವಿಡಿಯೋ
ಯಶಸ್ವಿ ಜೈಸ್ವಾಲ್ ಫಾರ್ಮ್’ಗೆ ಮರಳಲು ಸಾಕಷ್ಟು ಅವಕಾಶಗಳನ್ನು ಹೊಂದಿರುವುದು ಒಳ್ಳೆಯದು ಎಂದು ಇರ್ಫಾನ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.