Big Offer: ಎಸ್‌ಬಿಐನಿಂದ ಅಗ್ಗದ ದರದಲ್ಲಿ ಖರೀದಿಸಿ ಚಿನ್ನ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಬಿಗ್ ಆಫರ್ ಒಂದನ್ನು ತಂದಿದೆ. ಈ ಪ್ರಸ್ತಾಪದಡಿಯಲ್ಲಿ, ನೀವು ತನೀಶ್ ಅವರ ಚಿನ್ನಾಭರಣವನ್ನು ಖರೀದಿಸಿದರೆ, ನೀವು ಶೇಕಡಾ 10 ರಷ್ಟು ಫ್ಲಾಟ್ ರಿಯಾಯಿತಿಯನ್ನು ಪಡೆಯುತ್ತೀರಿ.

Last Updated : Dec 11, 2019, 03:13 PM IST
Big Offer: ಎಸ್‌ಬಿಐನಿಂದ ಅಗ್ಗದ ದರದಲ್ಲಿ ಖರೀದಿಸಿ ಚಿನ್ನ! title=

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಬಿಗ್ ಆಫರ್ ಒಂದನ್ನು ತಂದಿದೆ. ಈ ಪ್ರಸ್ತಾಪದಡಿಯಲ್ಲಿ, ನೀವು ಚಿನ್ನಾಭರಣವನ್ನು ಖರೀದಿಸಿದರೆ, ನೀವು ಶೇಕಡಾ 10 ರಷ್ಟು ಫ್ಲಾಟ್ ರಿಯಾಯಿತಿಯನ್ನು ಪಡೆಯುತ್ತೀರಿ. ಬ್ಯಾಂಕಿನಿಂದ ಡಿಸೆಂಬರ್ 10 ರಿಂದ 14 ರವರೆಗೆ, ಬ್ಯಾಂಕಿನ ಆ್ಯಪ್ YONOSBI ಮೂಲಕ ಖರೀದಿಯಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಪ್ರಸ್ತಾಪದಡಿಯಲ್ಲಿ, ನೀವು ತನೀಶ್ ಅವರ ಚಿನ್ನಾಭರಣವನ್ನು ಖರೀದಿಸಿದರೆ, ನೀವು ಶೇಕಡಾ 10 ರಷ್ಟು ಫ್ಲಾಟ್ ರಿಯಾಯಿತಿಯನ್ನು ಪಡೆಯುತ್ತೀರಿ.
 
ಶಾಪಿಂಗ್‌ಗೆ 50 ಪ್ರತಿಶತ ರಿಯಾಯಿತಿ: 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಯೋನೊ ಅಪ್ಲಿಕೇಶನ್‌ನ ಈ ಪ್ರಸ್ತಾಪದಡಿಯಲ್ಲಿ, ಎಸ್‌ಬಿಐನ 17 ವ್ಯಾಪಾರಿ ಪಾಲುದಾರರು ಈ ಉತ್ಸವದಲ್ಲಿ ಖರೀದಿ ಮಾಡುವವರಿಗೆ 50% ವರೆಗೆ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಎಸ್‌ಬಿಐ ವ್ಯಾಪಾರಿ ಪಾಲುದಾರರಲ್ಲಿAmazon, Lifestyle stores, Thomas Cook, EasemyTrip, OYO, Pepperfry ಮತ್ತು ಇತರ 17 ಇ-ಕಾಮರ್ಸ್ ವ್ಯಾಪಾರಿಗಳು ಸೇರಿದ್ದಾರೆ. ನೀವು ಎಸ್‌ಬಿಐನ ವ್ಯಾಪಾರಿ ಪಾಲುದಾರರ ಮೂಲಕ ಶಾಪಿಂಗ್ ಮಾಡಿದರೆ ಮತ್ತು ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ, ನಿಮಗೆ 10 ಶೇಕಡಾ ಹೆಚ್ಚಿನ ಕ್ಯಾಶ್‌ಬ್ಯಾಕ್ ಸಿಗುತ್ತದೆ.

ಸುಲಭ ಸಾಲ:
ಎಸ್‌ಬಿಐ ಯೋನೊ ಶಾಪಿಂಗ್ ಫೆಸ್ಟಿವಲ್(SBI YONO Shopping Festival) ಸಮಯದಲ್ಲಿ ನೀವು ಎಸ್‌ಬಿಐನಿಂದ auto loan ತೆಗೆದುಕೊಂಡರೆ, ಗ್ರಾಹಕರು 2019 ರ ಡಿಸೆಂಬರ್ 31 ರವರೆಗೆ ತೆಗೆದುಕೊಂಡ ಸಾಲಕ್ಕೆ ಯಾವುದೇ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅದೇ ಸಮಯದಲ್ಲಿ, ಈ ಅವಧಿಯಲ್ಲಿ ಗ್ರಾಹಕರು ವಸತಿ ಸಾಲ ಅಥವಾ ಗೃಹ ಸಾಲವನ್ನು ತೆಗೆದುಕೊಂಡರೆ, ಸಂಸ್ಕರಣಾ ಶುಲ್ಕದ ಮೇಲೆ 50 ಪ್ರತಿಶತ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

Trending News