ಪೌರತ್ವ ಕಾನೂನು: 60 ಪ್ಯಾಸೆಂಜರ್ ಟ್ರೈನ್ ಗಳ ಓಡಾಟ ರದ್ದು

ಪೌರತ್ವ ತಿದ್ದುಪಡಿ ಕಾನೂನನ್ನು ಪ್ರಶ್ನಿಸಿ ನಡೆಯುತ್ತಿರುವ ವಿರೋಧ ಪ್ರತಿಭಟನೆಗಳ ಹಿನ್ನೆಲೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಿಂದ ಆಸ್ಸಾಂಗೆ ಚಲಿಸುವ ಸುಮಾರು 60 ರೈಲುಗಳ ಓಡಾಟ ರದ್ದುಗೊಳಿಸಿದೆ.

Last Updated : Dec 16, 2019, 08:53 PM IST
ಪೌರತ್ವ ಕಾನೂನು: 60 ಪ್ಯಾಸೆಂಜರ್ ಟ್ರೈನ್ ಗಳ ಓಡಾಟ ರದ್ದು title=

ಕೊಲ್ಕತ್ತಾ: ಪೌರತ್ವ ತಿದ್ದುಪಡಿ ಕಾನೂನನ್ನು ಪ್ರಶ್ನಿಸಿ ನಡೆಯುತ್ತಿರುವ ವಿರೋಧ ಪ್ರತಿಭಟನೆಗಳ ಹಿನ್ನೆಲೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಿಂದ ಆಸ್ಸಾಂಗೆ ಚಲಿಸುವ ಸುಮಾರು 60 ರೈಲುಗಳ ಓಡಾಟ ರದ್ದುಗೊಳಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ರೇಲ್ವೆ ಇಲಾಖೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ರೇಲ್ವೆ ಆಸ್ತಿಪಾಸ್ತಿಗಳಿಗೆ ಹಾನಿ ಮುಟ್ಟಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಬಂಗಾಳದಿಂದ ಅಸ್ಸಾಂ ಕಡೆಗೆ ತೆರಳುವ ಸುಮಾರು 60  ಪ್ಯಾಸೆಂಜರ್ ರೈಲುಗಳ ಓಡಾಟ ರದ್ದುಗೊಳಿಸಿರುವುದಾಗಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹೊಂದಿರುವವರು ಕಳೆದ ವಾರದಿಂದ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ರೇಲ್ವೆ ಆಸ್ತಿಪಾಸ್ತಿಗಳಿಗೆ ಹಾನಿ ತಲುಪಿಸಲು ಆರಂಭಿಸಿದ್ದಾರೆ. ಹೀಗಾಗಿ ಶೀಘ್ರ ಕ್ರಮಕ್ಕೆ ಮುಂದಾಗಿರುವ ರೇಲ್ವೆ ಇಲಾಖೆ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಮಧ್ಯೆ ಚಲಿಸುವ ಪ್ಯಾಸೆಂಜರ್ ರೈಲು ಸೇವೆಯನ್ನು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ರದ್ದುಗೊಳಿಸುವ ನಿರ್ಣಯ ಕೈಗೊಂಡಿದೆ ಎಂದಿದೆ.

ಈ ಪ್ಯಾಸೆಂಜರ್ ಸೇವೆಗಳು ರದ್ದಾದ ಬಳಿಕ ಮಾಲದಾ-ಗುವಾಹಾಟಿ, ಲುಮ್ದಿಂಗ್-ಗುವಾಹಾಟಿ, ಮಾಲದಾ-ಜಲ್ಪಾಯಿಗುಡಿ, ಬಾಲೂರ್ ಘಾಟ್-ಮಾಲದಾ, ನ್ಯೂ ಬೆಂಗಾಯಿಘಾಟ್-ಗುವಾಹಾಟಿ, ಗುವಾಹಾಟಿ-ಹಲಬರ್ ಗಾವ್, ಮಾಲದಾ-ಸಿಲಿಗುಡಿ, ಜೋರ್ ಹಾಟ್-ತೀನ್ ಸುಖಿಯಾ ಮಾರ್ಗಗಳ ಮೇಲೆ ಚಲಿಸುವ ಪ್ರಯಾಣಿಕರಿಗೆ ಅಡೆತಡೆ ಉಂಟಾಗಲಿದೆ.

Trending News