ನ್ಯೂಯಾರ್ಕ್: ಖ್ಯಾತ ಹಾಲಿವುಡ್ ನಟ ಲಿಯೋನಾರ್ಡೋ ಡಿಕಾಪ್ರಿಯೋ ತಮಗಿಂತ ವರ್ಷದಲ್ಲಿ 23ವರ್ಷ ಕಿರಿಯ ತಮ್ಮ ಗರ್ಲ್ ಫ್ರೆಂಡ್ ಕೆಮಿಲಾ ಮೊರೆನ್ ಜೊತೆ ಎಸ್ಪೇನ್ ನಲ್ಲಿ ಕದ್ದುಮುಚ್ಚಿ ಡೇಟಿಂಗ್ ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಜನರಿಂದ ಹಾಗೂ ತಮ್ಮ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಅವರು ಹರಸಾಹಸಪಟ್ಟಿದ್ದಾರೆ. ಡೆಲಿ ಮೇಲ್ ಡಾಟ್ ಕೋ ಡಾಟ್ ಯುಕೆಯಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ, ಕೊಲರಾಡೋನ ಎಸ್ಪೇನ್ ನಲ್ಲಿರುವ ಮಾತ್ಸ್ಯುಹಿಸಾ ರೆಸ್ಟಾರೆಂಟ್ ನಿಂದ ಬೇಸ್ ಬಾಲ್ ಕ್ಯಾಪ್ ಹಾಗೂ ಬ್ಲಾಕ್ ಕೊಟ್ ಧರಿಸಿದ್ದ ಲಿಯೋನಾರ್ಡೋ ತಮ್ಮ 22 ವರ್ಷ ಹರೆಯದ ಗರ್ಲ್ ಫ್ರೆಂಡ್ ಜೊತೆ ಡಿನ್ನರ್ ಮುಗಿಸಿ ಹೊರಬೀಳುತ್ತಿದ್ದ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆದರೆ, ಈ ವೇಳೆ ಅವರು ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಹರಸಾಹಸವೇ ಪಟ್ಟಿದ್ದಾರೆ.
ಅದೇ ದಿನ ಈ ಸೆಲೆಬ್ರಿಟಿ ಜೋಡಿಯನ್ನು ಡಿಕಾಪ್ರಿಯೋ ಅವರ ಹತ್ತಿರದ ಸ್ನೇಹಿತ ಹಾಗೂ ನಟ ತುಕಾಸ್ ಹಾಸ(43) ಅವರ ಜೊತೆಗೂ ಕೂಡ ಇರುವುದನ್ನೂ ಕೂಡ ಗಮನಿಸಲಾಗಿದೆ.
ಅಂದು ತಲೆಗೆ ಕರ್ಚಿಫ್ ಕಟ್ಟಿಕೊಂಡು ಟೋಪಿ ಧರಿಸಿದ್ದ ಲಿಯೋನಾರ್ಡೋ ಡಿಕಾಪ್ರಿಯೋ, ಕಣ್ಣಿಗೆ ಡಿಸೈನರ್ ಕನ್ನಡಕ ಧರಿಸಿದ್ದರು, ಅಷ್ಟೇ ಅಲ್ಲ ಬ್ಲ್ಯಾಕ್ ಲೆದರ್ ಜಾಕೆಟ್, ಟ್ರೌಸರ್ ಹಾಗೂ ಕಾಲಲ್ಲಿ ಷೂ ಧರಿಸಿದ್ದ ಅವರು, ಕ್ಯಾಮರಾ ಕಣ್ಣಿಂದ ಬಚಾವಾಗಲು ಹರಸಾಹಸವನ್ನೇ ಪಟ್ಟಿದ್ದಾರೆ.