ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು !

Renukaswami murder case : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಈಗಾಗಲೇ ತನಿಖೆ ನಡೆದಿದ್ದು, ಹೊಸ ಹೊಸ ಸುಳಿವುಗಳು ವಿಚಾರಗಳು ಹೊರ ಬರುತ್ತಲೇ ಇವೆ. ಈ ನಡುವೆ ಸ್ಥಳಗಳ ಮಹಾಜಾರನ್ನು ಮಾಡಲಾಗುತ್ತದೆ. 

Written by - Zee Kannada News Desk | Last Updated : Jun 18, 2024, 08:56 PM IST
  • ಆರೋಗ್ಯದಲ್ಲಿ ಏರುಪೇರು ಆಗಿರುವ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
  • ಈ ವಿಚಾರದಿಂದ ಧೃತಿಗೆಟ್ಟ ದರ್ಶನ ರೇಣುಕಾಸ್ವಾಮೀ ಪ್ರಾಣವನ್ನ ತೆಗೆದಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದ್ದಾರೆ
ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು !  title=

Pavitra Gowda's health deteriorated admitted to hospital : ಇದೆಲ್ಲದರ ಮಧ್ಯೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಆಗಿರುವ ಪವಿತ್ರ ಗೌಡ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. 

ರೇಣುಕಾ ಸ್ವಾಮಿ ಕೊಲೆಯಾದದ್ದು ಯಾಕೆ? ಆರೋಪಿ ಪವಿತ್ರ ಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗದ ಅಭಿಮಾನಿ ರೇಣುಕಾ ಸ್ವಾಮಿ ಪವಿತ್ರ ಗೌಡ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಅಶ್ಲೀಲ ಫೋಟೋ ಕಳುಹಿಸಿದ್ದರ ಹಿನ್ನೆಲೆ ಈ ಕುರಿತಂತೆ ವಿಚಾರವನ್ನು ಪವಿತ್ರ ಗೌಡ ದರ್ಶನವರಿಗೆ ತಿಳಿಸಿದರು. 

ಇದನ್ನು ಓದಿ :ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್

ಈ ವಿಚಾರದಿಂದ ಧೃತಿಗೆಟ್ಟ ದರ್ಶನ ರೇಣುಕಾಸ್ವಾಮೀ ಪ್ರಾಣವನ್ನ ತೆಗೆದಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದ್ದಾರೆ ಮತ್ತು ಪಟ್ಟಣಗೆರೆ ಶೆಡ್‌ನಲ್ಲಿ ನಟ ದರ್ಶನ್ ಹಾಗೂ ಪವಿತ್ರ ಸೇರಿದಂತೆ ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಮತ್ತು ದರ್ಶನ್ ಹೆಸರು ಬಾರದಂತೆ ಈ ವಿಷಯವನ್ನು ಮುಚ್ಚಿ ಹಾಕಲು ವಿವಿಧ ಸಂಚನ್ನು ರೂಪಿಸಿದ್ದರು ಎಂಬ ಆರೋಪ ಪವಿತ್ರ ಗೌಡ ಅವರ ಮೇಲಿದೆ.

ಸದ್ಯಕ್ಕೆ ಎ1 ಆರೋಪಿಯಾಗಿರುವ ಪವಿತ್ರ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇವರನ್ನ ದಾಖಲು ಮಾಡಲಾಗಿದೆ. 

ಕಾಮಾಕ್ಷಿಪಾಳ್ಯ ಪೊಲೀಸರ ಕಸ್ತಡಿಯಲ್ಲಿದ್ದ ಪವಿತ್ರ ಗೌಡ ಇಂದು ಮಧ್ಯಾಹ್ನ ಅಸ್ವಸ್ಥರಾಗಿದ್ದ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರದ ಠಾಣೆಗೆ ವೈದ್ಯರನ್ನ ಕರೆ ತರಲಾಗಿತ್ತು ಹೀಗಾಗಿ ಹೆಚ್ಚಿನ ಚಿಕಿತ್ಸೆಗಳಿಗಾಗಿ ಮಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News