IRCTC ticket booking: ಈಗ ಒಂದೇ IRCTC ಐಡಿಯಲ್ಲಿ 24 ಟಿಕೆಟ್‌ ಬುಕ್ ಮಾಡಬಹುದು!

IRCTC ticket booking: IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ.

Written by - Puttaraj K Alur | Last Updated : Jun 27, 2024, 04:17 PM IST
  • ನೀವು ಒಂದೇ IRCTC ಐಡಿಯಲ್ಲಿ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು
  • ಬಳಕೆದಾರರ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ರೆ ಹೆಚ್ಚಿನ ಟಿಕೆಟ್‌ ಬುಕ್
  • IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಟಿಕೆಟ್‌ ಬುಕ್ ಮಾಡಿ
IRCTC ticket booking: ಈಗ ಒಂದೇ IRCTC ಐಡಿಯಲ್ಲಿ 24 ಟಿಕೆಟ್‌ ಬುಕ್ ಮಾಡಬಹುದು! title=
24 ಟಿಕೆಟ್‌ ಬುಕ್ ಮಾಡಿ

IRCTC ticket booking: ನೀವು ಇದೀಗ ಒಂದೇ IRCTC ಐಡಿಯಲ್ಲಿ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಬಳಕೆದಾರರ ಐಡಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ನೀವು 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. 

IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಈ ಮೊದಲು ಬಳಕೆದಾರರು IDಯೊಂದಿಗೆ ೧ ತಿಂಗಳಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿತ್ತು. ಆದರೆ ಈಗ ನಿಮ್ಮ ಐಡಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದಿದ್ದರೆ ನೀವು 12 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ನೀವು ಬುಕ್‌ ಮಾಡಬಹುದು. ಆಧಾರ್ ಲಿಂಕ್ ಇಲ್ಲದೆಯೇ ನೀವು 12 ಟಿಕೆಟ್‌ಗಳನ್ನು ಖರೀದಿಸಬಹುದು.

ಇದನ್ನೂ ಓದಿ: Bajaj Pulsar: ಹೊಸ ಲುಕ್‌ನಲ್ಲಿ ಬಿಡುಗಡೆಯಾದ ಪಲ್ಸರ್‌ನ ಹಳೆಯ ಮಾಡೆಲ್‌ಗಳು!

IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ.

IRCTC ಖಾತೆಯನ್ನು ಆಧಾರ್‌ಗೆ ಲಿಂಗ್‌ ಮಾಡಬಹುದು ಹೇಗೆ?

  • ಮೊದಲು IRCTCಯ ಅಧಿಕೃತ ವೆಬ್‌ಸೈಟ್ http://irctc.co.in ಗೆ ಭೇಟಿ ನೀಡಿ
  • ಖಾತೆಗೆ ಲಾಗಿನ್ ಮಾಡಿ
  • ಮುಖಪುಟದಲ್ಲಿರುವ 'MY Account' ಆಯ್ಕೆಯಲ್ಲಿ 'Link Your Aadhar' ಕ್ಲಿಕ್ ಮಾಡಿ
  • ನಂತರ ಆಧಾರ್ ಸಂಬಂಧಿತ ಮಾಹಿತಿ ಭರ್ತಿ ಮಾಡಿ ಚೆಕ್ ಬಾಕ್ಸ್‌ನಲ್ಲಿ 'Send OTP' ಆಯ್ಕೆ ಕ್ಲಿಕ್‌ ಮಾಡಿ
  • ಈಗ OTP ನಮೂದಿಸುವಾಗ ನೀವು ʼOTP ಪರಿಶೀಲಿಸಿʼ ಆಯ್ಕೆ ಮಾಡಬೇಕಾಗುತ್ತದೆ
  • KYC ಪೂರ್ಣಗೊಂಡ ನಂತರ ನಿಮ್ಮ ಆಧಾರ್ ಅನ್ನು IRCTC ಖಾತೆಗೆ ಲಿಂಕ್ ಮಾಡಲಾಗುತ್ತದೆ

ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ?

  • ನಿಮ್ಮ ಮೊಬೈಲ್ ಫೋನ್‌ನಲ್ಲಿ IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ. IRCTC ID ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗಿನ್ ಮಾಡಿ.
  • ಇ-ಟಿಕೆಟ್ ಬುಕ್ ಮಾಡಲು ರೈಲಿನ ಮೇಲೆ ಕ್ಲಿಕ್ ಮಾಡಿ. ನಂತರ ʼBook Ticket' ಕ್ಲಿಕ್‌ ಮಾಡಿ, ನಂತರ ಹತ್ತಿರದ ರೈಲು ನಿಲ್ದಾಣದ ಹೆಸರು, ಪ್ರಯಾಣದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ ಮತ್ತು ರೈಲಿನ ಮೇಲೆ ಕ್ಲಿಕ್ ಮಾಡಿ.
  • ನೀವು ವಿವಿಧ ದಿನಾಂಕಗಳ ಆಯ್ಕೆಯನ್ನು ಸಹ ನೋಡಬಹುದು.
  • ನಿಮ್ಮ ಸಾಧನದಲ್ಲಿ ರೈಲು ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ. ಅನುಕೂಲಕ್ಕೆ ಅನುಗುಣವಾಗಿ ರೈಲನ್ನು ಆಯ್ಕೆಮಾಡಿ ಮತ್ತು ಈಗ ಬುಕ್ ಮಾಡಿ ಕ್ಲಿಕ್ ಮಾಡಿ.
  • ಈಗ ನಿಮ್ಮ ಹೆಸರು, ವಯಸ್ಸು, ಲಿಂಗ ಇತ್ಯಾದಿಗಳನ್ನು ಭರ್ತಿ ಮಾಡಿ ಮತ್ತು Continue Booking ಕ್ಲಿಕ್ ಮಾಡಿ.
  • ನಂತರ ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್ ಬಳಸಿ ಟಿಕೆಟ್ ದರವನ್ನು ಪಾವತಿಸಬಹುದು.

ಇದನ್ನೂ ಓದಿ: GruhaLakshmi Scheme: ಈ ದಿನ ಬಿಡುಗಡೆಯಾಗಲಿದೆ ʼಗೃಹಲಕ್ಷ್ಮಿʼಯ 11ನೇ ಕಂತಿನ ಹಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News