ಕೆಜಿಎಫ್, ಕಾಟೇರ, ಕಾಂತಾರ ಬಾಕ್ಸ್ ಆಫೀಸ್ ದಾಖಲೆಗಳನ್ನು ಧ್ವಂಸ ಮಾಡಿ ಕಲ್ಕಿ ಗಳಿಸಿದ್ದೇಷ್ಟು..? 

Kalki 2898 AD first day collection : ನಿನ್ನೆ ತೆರೆ ಕಂಡ ಕಲ್ಕಿ 2898 ಎಡಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ರಿಲೀಸ್‌ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ.. ಎರಡನೇ ದಿನವಾದ ಇಂದು ಕಲ್ಕಿ ಕಮಾಲ್‌ ಮಾಡುತ್ತಿದೆ.. ಹಾಗಿದ್ರೆ ನಾಗ್‌ ಅಶ್ವೀನ್‌ ನಿರ್ದೇಶನದ ಈ ಸಿನಿಮಾ ಮೊದಲ ದಿನ ಗಳಿಸಿದ್ದೇಷ್ಟು..? ಬನ್ನಿ ನೋಡೋಣ..

Written by - Krishna N K | Last Updated : Jun 28, 2024, 01:12 PM IST
    • ಕಲ್ಕಿ 2898 ಎಡಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.
    • ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ.
    • ಈ ಸಿನಿಮಾ ಮೊದಲ ದಿನ ಗಳಿಸಿದ್ದೇಷ್ಟು..? ಬನ್ನಿ ನೋಡೋಣ..
ಕೆಜಿಎಫ್, ಕಾಟೇರ, ಕಾಂತಾರ ಬಾಕ್ಸ್ ಆಫೀಸ್ ದಾಖಲೆಗಳನ್ನು ಧ್ವಂಸ ಮಾಡಿ ಕಲ್ಕಿ ಗಳಿಸಿದ್ದೇಷ್ಟು..?  title=
Prabhas

Prabhas Kalki 2898 AD : ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಹುಬಲಿಯ ದೊಡ್ಡ ಯಶಸ್ಸಿನ ನಂತರ, ನಟ ಪ್ರಭಾಸ್ ಸಾಹೋ, ರಾಧೆ ಶ್ಯಾಮ್ ಮತ್ತು ಆದಿಪುರುಷನೊಂದಿಗೆ ಫ್ಲಾಪ್ಗಳನ್ನು ಅನುಭವಿಸಿದ್ದರು. ಡಾರ್ಲಿಂಗ್‌ ಪುನರಾಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕಲ್ಕಿ 2898 AD ಅವರ ಆಸೆಯನ್ನು ಈಡೇರಿಸಿದೆ... 

ಕಲ್ಕಿ ನಾಗ್ ಅಶ್ವಿನ್ ನಿರ್ದೇಶನದ ಫ್ಯಾಂಟಸಿ ಚಿತ್ರ. ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ. ಸುಮಾರು 600 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ದೊಡ್ಡ ತಾರಾಬಳಗ ಇದೆ. ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ತಯಾರಾಗುತ್ತಿರುವ ಕಲ್ಕಿ 2898AD, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಇದನ್ನೂ ಓದಿ: ವಿಭಿನ್ನ ಆಕರ್ಷಣೀಯ ಲುಕ್ ನಲ್ಲಿ ಕಣ್ಮನ ಸೆಳೆದ ರಣಬೀರ್ - ಆಲಿಯಾ ಜೋಡಿ

ಚಿತ್ರದ ಮೊದಲರ್ಧ ನಿಧಾನಗತಿಯಲ್ಲಿ ಸಾಗಿದೆ ಎಂಬ ಟೀಕೆಗಳು ಕೇಳಿಬಂದರೂ ವಿಮರ್ಶಕರು ಚಿತ್ರದ ದ್ವಿತೀಯಾರ್ಧವನ್ನು ಹೊಗಳಿದ್ದಾರೆ. ಸಕಾರಾತ್ಮಕ ವಿಮರ್ಶೆಗಳಿಂದಾಗಿ ಕಲ್ಕಿ 2898AD ಗಲ್ಲಾಪೆಟ್ಟಿಗೆಯಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಮೊದಲ ದಿನವೇ ವಿಶ್ವದಾದ್ಯಂತ 180 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಭಾರತದಲ್ಲೇ ಈ ಚಿತ್ರ ರೂ.95 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಈ ಮೂಲಕ ಕಲ್ಕಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ 3ನೇ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಈ ಹಿಂದೆ ರಾಜಮೌಳಿ ನಿರ್ದೇಶನದ ರಾಮ್ ಚರಣ್ ಅಭಿನಯದ RRR ಚಿತ್ರ 223 ಕೋಟಿ ಕಲೆಕ್ಷನ್ ಮಾಡಿತ್ತು. 217 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಹುಬಲಿ 2 ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರಭಾಸ್ ಅಭಿನಯದ ಸಲಾರ್ 158 ಕೋಟಿ ಹಾಗೂ ವಿಜಯ್ ಅಭಿನಯದ ಲಿಯೋ ಮೊದಲ ದಿನ 142.75 ಕೋಟಿ ಕಲೆಕ್ಷನ್ ಮಾಡಿತ್ತು. ಕನ್ನಡದ ಕೆಜೆಎಫ್‌ 2 ಮೊದಲ ದಿನ 134 ಕೋಟಿ ರೂ. ಗಳಿಕೆ ಕಂಡಿತ್ತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News