IND vs SA Final India vs South Africa: T20 ವಿಶ್ವಕಪ್’ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕಾಗಿ ಇಡೀ ದೇಶವು ಕುತೂಹಲದಿಂದ ಕಾಯುತ್ತಿದೆ. ಭಾರತವು ತಮ್ಮ 13 ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿಸಲು ಎದುರು ನೋಡುತ್ತಿದ್ದು, ಮತ್ತೊಂದೆಡೆ ಪ್ರೋಟೀಸ್ ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ಫೈನಲ್ ತಲುಪಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ವಿಜೇತ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ? ತಿಳಿದರೆ ಹುಬ್ಬೇರುವುದು ಗ್ಯಾರಂಟಿ
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರು ಫೈನಲ್’ನಲ್ಲಿ ಭಾರತದ ಆಟದ ಯೋಜನೆ ಹೇಗಿರಬೇಕು ಎಂದು ಹೇಳಿದ್ದಾರೆ. "ದಕ್ಷಿಣ ಆಫ್ರಿಕಾದ ಬಗ್ಗೆ ಮಾತನಾಡುವುದು ತುಂಬಾ ಕಷ್ಟ. ಏಕೆಂದರೆ ಅವರು ಮೊದಲ ಬಾರಿಗೆ ಐಸಿಸಿ ಪಂದ್ಯಾವಳಿಯ ಫೈನಲ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೈನಲ್’ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಊಹಿಸಲು ಕಷ್ಟವಾಗುತ್ತದೆ. ಟ್ರೋಫಿ ಗೆಲ್ಲಲು ಅತ್ಯುತ್ತಮ ಪ್ರದರ್ಶನ ನೀಡುವುದು ಮಾತ್ರ ಸುಳ್ಳಲ್ಲ. ಭಾರತವು ಅತಿಯಾದ ಆತ್ಮವಿಶ್ವಾಸವನ್ನು ಹೊಂದದಂತೆ ಎಚ್ಚರಿಕೆ ವಹಿಸಬೇಕು” ಎಂದಿದ್ದಾರೆ.
“ನಾವು ಜಾಗರೂಕರಾಗಿ ಆಡುವುದು ಮಾತ್ರವಲ್ಲ, ಎದುರಾಳಿಗೆ ಉತ್ತಮ ಗುರಿಯನ್ನು ನೀಡಬೇಕು. ದ.ಆಫ್ರಿಕಾವನ್ನು ಗೊಂದಲಕ್ಕೀಡು ಮಾಡುವಂತೆ ಆಡಬೇಕು” ಎಂದಿದ್ದಾರೆ.
ಟೂರ್ನಿಯ ಮೊದಲ ಪಂದ್ಯದಿಂದಲೂ ಭಾರತದ ಬೌಲಿಂಗ್ ದಾಳಿ ಅತ್ಯುತ್ತಮವಾಗಿದ್ದು, ಅಕ್ಸರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ಟೂರ್ನಿಯ ಕೇಂದ್ರಬಿಂದುಗಳು. ಸೆಮಿಫೈನಲ್ನಲ್ಲಿ ಅವರ ಅದ್ಭುತ ಪ್ರದರ್ಶನವು ಸುದ್ದಿ ಮಾಡಿತು. ಇನ್ನೊಂದೆಡೆ ರೋಹಿತ್ ಶರ್ಮಾ ಕೂಡ ತಂಡದ ಪ್ರಮುಖ ಆಟಗಾರ. ಇಡೀ ಟೂರ್ನಿಯಲ್ಲಿ ಭಾರತ ತಂಡದ ನಾಯಕ 248 ರನ್ ಗಳಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಇವು ಭಗವಾನ್ ಶ್ರೀಕೃಷ್ಣನ ಅತ್ಯಂತ ಮೆಚ್ಚಿನ ರಾಶಿಗಳು: ಬೇಡಿದ ತಕ್ಷಣ ಅನಂತ ಸಿರಿ ಸಂಪತ್ತಿನ್ನೇ ಧಾರೆ ಎರೆಯುತ್ತಾನೆ ದೇವಕಿಸುತ
ಕೀರ್ತಿ ಆಜಾದ್ “ನಾವು ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ. ಎಲ್ಲಾ ಆಟಗಾರರ ಪ್ರದರ್ಶನವು ಅತ್ಯುತ್ತಮವಾಗಿದೆ, ವಿಶೇಷವಾಗಿ ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಬೌಲರ್’ಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಭಾರತದ ಬೌಲಿಂಗ್ ದಾಳಿ ಅತ್ಯುತ್ತಮವಾಗಿದೆ. ನಮ್ಮ ತಂಡದ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ರೋಹಿತ್ ಬ್ಯಾಟಿಂಗ್” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್