Narendra Modi: ಶನಿವಾರ ರಾತ್ರಿ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಅಭಿನಂದಿಸಿದ್ದಾರೆ. ರೋಹಿತ್ ಶರ್ಮಾ ಅವರ ಅತ್ಯುತ್ತಮ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಟಿ 20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಆಟವನ್ನು ಶ್ಲಾಘಿಸಿದ್ದಾರೆ.
ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಬೌಂಡರಿ ಲೈನ್‌ನಲ್ಲಿ ಅಮೋಘ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಅವರ ಕುರಿತು ಕೂಡ ಪ್ರಧಾನಿ ಮೋದಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಕೊಡುಗೆಯ ಬಗ್ಗೆಯೂ ಪ್ರಧಾನಿ ಈ ಸಮಯದಲ್ಲಿ ನೆನೆದಿದ್ದಾರೆ. ಅಷ್ಟೇ ಅಲ್ಲದೆ ದೂರವಾಣಿ ಕರೆಯಲ್ಲಿ ಮಾತನಾಡಿದ ಮೋದಿ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳಿಗಾಗಿ ಕೋಚ್ ರಾಹುಲ್ ದ್ರಾವಿಡ್‌ಗೆ ಧನ್ಯವಾದ ತಿಳಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದೆ. ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ತ್ರಿಕೋನ ಡೆತ್ ಬೌಲಿಂಗ್‌ನ ಉತ್ತಮ ಪ್ರದರ್ಶನ ಮತ್ತು ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಅದ್ಭುತ ಪ್ರದರ್ಶನಗಳು ಭಾರತಕ್ಕೆ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಲು ನೆರವಾದವು. ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ದಾಖಲೆಯ ಐಸಿಸಿ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
ಗೆಲುವಿನ ನಂತರ ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ, “ಈ ಅದ್ಭುತ ಗೆಲುವಿಗಾಗಿ ಇಡೀ ರಾಷ್ಟ್ರದ ಪರವಾಗಿ ಭಾರತ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂದು, 1.40 ಕೋಟಿ ಭಾರತೀಯರು ನಿಮ್ಮ ಅದ್ಭುತ ಕಾರ್ಯದ ಬಗ್ಗೆ ಹೆಮ್ಮೆಪಡುತಿದ್ದಾರೆ.ವಿಶ್ವಕಪ್ ಅಷ್ಟೇ ಅಲ್ಲ ನೀವು ಭಾರತದ ಎಲ್ಲಾ ಹಳ್ಳಿಗಳು, ಬೀದಿಗಳು ಮತ್ತು ಸಮುದಾಯಗಳ ಜನರ ಹೃದಯವನ್ನು ಗೆದ್ದಿದ್ದೀರಿ, ಈ ಗೆಲುವು ವಿಶೇಷ ಕಾರಣಕ್ಕಾಗಿ ನೆನಪಿನಲ್ಲಿ ಉಳಿಯುತ್ತದೆ. ಹೆಚ್ಚು ಪೈಪೋಟಿ ಇದ್ದರೂ ಭಾರತ ಅಜೇಯವಾಗಿದೆ, ಇದೇನು ಸಣ್ಣ ಸಾಧನೆಯಲ್ಲ. ನನ್ನ ಕಡೆಯಿಂದ ನಿಮಗೆ ಅಭಿನಂದನೆಗಳು ” ಎಂದು ಮೋದಿ ಟೀಂ ಇಂಡಿಯಾ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
Dear @ImRo45,
You are excellence personified. Your aggressive mindset, batting and captaincy has given a new dimension to the Indian team. Your T20 career will be remembered fondly. Delighted to have spoken to you earlier today. pic.twitter.com/D5Ue9jHaad
— Narendra Modi (@narendramodi) June 30, 2024
CHAMPIONS!
Our team brings the T20 World Cup home in STYLE!
We are proud of the Indian Cricket Team.
This match was HISTORIC. 🇮🇳 🏏 🏆 pic.twitter.com/HhaKGwwEDt
— Narendra Modi (@narendramodi) June 29, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.