/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಬಿಸಿಸಿಐ 125 ಕೋಟಿ ಬಹುಮಾನ ಮೊತ್ತವನ್ನು ಆಟಗಾರರಿಗೆ ಹಂಚಿದ್ದು ಹೇಗೆ ಗೊತ್ತಾ? ಹೆಚ್ಚು ಪಡೆದವರು ಯಾರು..?

125 crore prize money for team india: ವಿಶ್ವಕಪ್ ಗೆದ್ದ ಟೀಂ ಇಂಡಿಯಾಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಿದೆ. 

Written by - Savita M B | Last Updated : Jul 8, 2024, 01:24 PM IST
  • 17 ವರ್ಷಗಳ ಬಳಿಕ ಭಾರತ ತಂಡ ಮತ್ತೊಮ್ಮೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ
  • ಈ ಬಹುಮಾನದ ಹಣವನ್ನು ಹೇಗೆ ವಿತರಿಸಲಾಯಿತು? ಯಾರು ಎಷ್ಟು ಪಡೆದಿದ್ದಾರೆ ಎಂಬ ವಿವರಗಳನ್ನು ನೋಡೋಣ.
ಬಿಸಿಸಿಐ 125 ಕೋಟಿ ಬಹುಮಾನ ಮೊತ್ತವನ್ನು ಆಟಗಾರರಿಗೆ ಹಂಚಿದ್ದು ಹೇಗೆ ಗೊತ್ತಾ? ಹೆಚ್ಚು ಪಡೆದವರು ಯಾರು..? title=

team india: 17 ವರ್ಷಗಳ ಬಳಿಕ ಭಾರತ ತಂಡ ಮತ್ತೊಮ್ಮೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇದು ದೇಶದಾದ್ಯಂತ ಸಂಭ್ರಮಾಚರಣೆಗೆ ಕಾರಣವಾಯಿತು. ವಿಶ್ವ ಚಾಂಪಿಯನ್ ಆಗಿ ವೆಸ್ಟ್ ಇಂಡೀಸ್ ನಿಂದ ತವರಿಗೆ ಮರಳಿದ ಭಾರತ ತಂಡಕ್ಕೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.. ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬಿಸಿಸಿಐ ಭಾರತ ತಂಡದ ಆಟಗಾರರನ್ನು ಸನ್ಮಾನಿಸಿತು. ಅಲ್ಲದೇ ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ 125 ಕೋಟಿ   ಮೊತ್ತವನ್ನು ಘೋಷಿಸಿದ್ದು ಗೊತ್ತೇ ಇದೆ.. ಈ ಬಹುಮಾನದ ಹಣವನ್ನು ಹೇಗೆ ವಿತರಿಸಲಾಯಿತು? ಯಾರು ಎಷ್ಟು ಪಡೆದಿದ್ದಾರೆ ಎಂಬ ವಿವರಗಳನ್ನು ನೋಡೋಣ.

ಟೀಂ ಇಂಡಿಯಾ ವಿಶ್ವಕಪ್‌ಗೆ 42 ಸದಸ್ಯರ ತಂಡ ತೆರಳಿತ್ತು. ಇದು 15 ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಮೀಸಲು ಆಟಗಾರರನ್ನು ಒಳಗೊಂಡಿದೆ.. ವರದಿಯ ಪ್ರಕಾರ, ಭಾರತ ತಂಡದ 15 ಸದಸ್ಯರು ಪ್ರತಿ ಆಟಗಾರನಿಗೆ 5 ಕೋಟಿ ರೂಪಾಯಿಯಂತೆ.. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ 5 ಕೋಟಿ ರೂ. ಹಂಚಲಾಗಿದೆ.. 

ಇದನ್ನೂ ಓದಿ-ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ..?ಅಚ್ಚರಿ ಹೇಳಿಕೆ ಕೊಟ್ಟ ಸುನೀಲ್‌ ಗವಾಸ್ಕರ್‌..!

ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರಿಗೆ 2.5 ಕೋಟಿ ರೂ. ಹಿಂಬದಿಯ ಸಿಬ್ಬಂದಿ, ಮೂವರು ಫಿಸಿಯೋಥೆರಪಿಸ್ಟ್‌ಗಳು, ಮೂವರು ಥ್ರೋಡೌನ್ ತಜ್ಞರು, ಇಬ್ಬರು ಮಸಾಜ್‌ರ್‌, ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್‌ಗಳಿಗೆ ತಲಾ 2 ಕೋಟಿ ರೂ. ನೀಡಲಾಗಿದೆ.. 

ಅಲ್ಲದೆ, ಆಯ್ಕೆ ಸಮಿತಿ ಸದಸ್ಯರು ಮತ್ತು ಮೀಸಲು ಆಟಗಾರರಾದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ಅವರಿಗೂ ಹಣ ನೀಡಲಾಗಿದೆ..

ಇದನ್ನೂ ಓದಿ-ವಿಸ್ವಕಪ್‌ ಗೆದ್ದು ಮನೆಗೆ ಮರಳಿದ ಪಾಂಡ್ಯ..! ಮಗನನ್ನು ಬಿಗಿದಪ್ಪಿ ಭಾವುರಾದ ಹಾರ್ದಿಕ್‌..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ