ಶ್ರೀನಗರ: ಹೀಗೆ ವಿನಂತಿಸಿಕೊಂಡಿರುವುದು ಬೇರಾರು ಅಲ್ಲ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ.
ಹೌದು, ಜಮ್ಮು ಕಾಶ್ಮೀರದಲ್ಲಿನ ಜನರಿಗಾಗಿ ಮತ್ತು ಗಡಿಯಲ್ಲಿ ದಿನಪ್ರತಿ ಸಾಯುತ್ತಿರುವ ಸೈನಿಕರಿಗಾಗಿ ಪಾಕಿಸ್ತಾನ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರು ಸಹಿತ ಸ್ನೇಹಿತರಾಗಿ ಎಂದು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮನವಿ ಮಾಡಿಕೊಂಡಿದ್ದಾರೆ.
ಅವರ ಈ ಹೇಳಿಕೆಯು ಪ್ರಮುಖವಾಗಿ ಬಾರಾಮುಲ್ಲಾ ಜಿಲ್ಲೆಯ ಸೀಪೋರೆ ಪಟ್ಟಣದಲ್ಲಿ ಉಗ್ರರ ಬಾಂಬ್ ಸ್ಪೋಟದಿಂದಾಗಿ ನಾಲ್ವರು ಪೊಲೀಸರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.ಈ ಘಟನೆಯ ನಂತರ ದಾಳಿಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅವ್ಯವಸ್ಥೆಯಿಂದ ಹೊರಬರಲು ಅದಕ್ಕೆ ಪರಿಹಾರಗಳನ್ನು ಹುಡುಕುಬೇಕಾಗಿದೆ. ಆ ಮೂಲಕ ನಮ್ಮ ಸೈನಿಕರನ್ನು ಮತ್ತು ಜನರನ್ನು ಸಂರಕ್ಷಿಸಲು, ಉಭಯ ದೇಶಗಳು ಮತ್ತೆ ಸ್ನೇಹವನ್ನು ಬೆಳೆಸಬೇಕೆಂದು ಪಾಕಿಸ್ತಾನ ಮತ್ತು ನನ್ನ ದೇಶದ ಪ್ರಧಾನಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.