ಸೀಲಿಂಗ್‌ ಫ್ಯಾನ್ ತುಂಬಾ ಸ್ಲೋ ಆಗಿದ್ಯಾ? ಜಸ್ಟ್‌ 5 ರೂ. ಬೆಲೆಯ ಈ ವಸ್ತುವಿನಿಂದ ಕ್ಲೀನ್​ ಮಾಡಿ... ರಾಕೆಟ್​ ಸ್ಪೀಡ್​ʼನಂತೆ ತಿರುಗುತ್ತೆ

Tips And Tricks: ಮೃದುವಾದ ಮತ್ತು ಒಣ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸುವುದು ಸಾಮಾನ್ಯ. ಆದರೆ ಆ ನೀರಿಗೆ ಸ್ವಲ್ಪ ಡಿಟರ್ಜೆಂಟ್‌ ಸೇರಿಸಿ ಕ್ಲೀನ್‌ ಮಾಡಿ. ಇದರಿಂದ ಸೀಲಿಂಗ್‌ ಫ್ಯಾನ್‌ ಫಳಫಳ ಅಂತ ಹೊಳೆಯುತ್ತೆ.  

Written by - Bhavishya Shetty | Last Updated : Aug 22, 2024, 06:18 PM IST
    • ಕೊಳೆ ನಿಂತರೆ ಫ್ಯಾನ್‌ ಸ್ಪೀಡ್‌ ಕೂಡ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
    • ಸ್ಟೂಲ್ ಮೇಲೆ ಹತ್ತಿ ಕೈಯಿಂದ ಕ್ಲೀನ್ ಮಾಡುವಲ್ಲಿ ಸುಸ್ತಾಗುತ್ತಾರೆ
    • ಇದರ ಹೊರತಾಗಿ ನೀವು ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸಬಹುದು
ಸೀಲಿಂಗ್‌ ಫ್ಯಾನ್ ತುಂಬಾ ಸ್ಲೋ ಆಗಿದ್ಯಾ? ಜಸ್ಟ್‌ 5 ರೂ. ಬೆಲೆಯ ಈ ವಸ್ತುವಿನಿಂದ ಕ್ಲೀನ್​ ಮಾಡಿ... ರಾಕೆಟ್​ ಸ್ಪೀಡ್​ʼನಂತೆ ತಿರುಗುತ್ತೆ title=
File Photo

Tips And Tricks: ಫ್ಯಾನ್‌ʼಗಳಲ್ಲಿ ಕೊಳೆ ನಿಲ್ಲುವುದು ಸಾಮಾನ್ಯ. ಆದರೆ ಅದನ್ನು ಕ್ಲೀನ್‌ ಮಾಡಲು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ಇನ್ನು ಕೊಳೆ ನಿಂತರೆ ಫ್ಯಾನ್‌ ಸ್ಪೀಡ್‌ ಕೂಡ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಹೀಗಾಗಿ ಸಿಂಪಲ್‌ ಟಿಪ್ಸ್‌ ಮೂಲಕ ಫ್ಯಾನ್‌ ಕೊಳೆ ತೊಡೆದು ಹಾಕುವುದಲ್ಲದೆ, ಫ್ಯಾನ್‌ ವೇಗವಾಗಿ ತಿರುಗುವಂತೆ ಮಾಡಬಹುದು.

ಮೃದುವಾದ ಮತ್ತು ಒಣ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸುವುದು ಸಾಮಾನ್ಯ. ಆದರೆ ಆ ನೀರಿಗೆ ಸ್ವಲ್ಪ ಡಿಟರ್ಜೆಂಟ್‌ ಸೇರಿಸಿ ಕ್ಲೀನ್‌ ಮಾಡಿ. ಇದರಿಂದ ಸೀಲಿಂಗ್‌ ಫ್ಯಾನ್‌ ಫಳಫಳ ಅಂತ ಹೊಳೆಯುತ್ತೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ

ಕೆಲವರು ಸ್ಟೂಲ್ ಮೇಲೆ ಹತ್ತಿ ಕೈಯಿಂದ ಕ್ಲೀನ್ ಮಾಡುವಲ್ಲಿ ಸುಸ್ತಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸೀಲಿಂಗ್ ಫ್ಯಾನ್ ಡಸ್ಟರ್ ಅನ್ನು ಬಳಸಬಹುದು.  ಮಾರುಕಟ್ಟೆಯಲ್ಲಿ ಇದು ಲಭ್ಯವಿದೆ.  ಸ್ಟೂಲ್ ಮೇಲೆ ನಿಂತು ಕ್ಲೀನ್‌ ಮಾಡುವ ಅವಶ್ಯಕತೆ ಇಲ್ಲ.

ಇದರ ಹೊರತಾಗಿ ನೀವು ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸಬಹುದು. ಇದು ಸುಲಭವಾಗಿ ಫ್ಯಾನ್ ಅನ್ನು ಸ್ವಚ್ಛಗೊಳಿಸುತ್ತದೆ. ಡಸ್ಟ್ ಕ್ಲೀನರ್ ಅನ್ನು ಸಹ ಬಳಸಬಹುದು, ಮನೆಯ ಗೋಡೆಗಳಿಂದ ಜೇಡರ ಬಲೆಗಳನ್ನು ತೆಗೆದುಹಾಕುವಲ್ಲಿ ಕೂಡ ಇದು ಉಪಯುಕ್ತವಾಗಿದೆ.

ವಿನೆಗರ್ ನೀರಿನ ಬಳಕೆ
ಫ್ಯಾನ್ ಮೇಲೆ ಗಟ್ಟಿಯಾದ ಕೊಳಕು ಅಂಟಿಕೊಂಡಿದ್ದರೆ, ವಿನೆಗರ್ ನೀರನ್ನು ಬಳಸಬಹುದು. ಹೀಗೆ ಮಾಡುವುದರಿಂದ ಕೊಳೆ ಬೇಗ ನಿವಾರಣೆಯಾಗುತ್ತದೆ. ಪ್ರತಿ 8-10 ದಿನಗಳಿಗೊಮ್ಮೆ ಫ್ಯಾನ್ ಅನ್ನು ಸ್ವಚ್ಛಗೊಳಿಸುವುದರಿಂದ ಹೆಚ್ಚು ಕೊಳಕು ಸಂಗ್ರಹವಾಗುವುದನ್ನು ತಡೆಯಬಹುದು. ಅಷ್ಟೇ ಅಲ್ಲದೆ, ಈ ವಿಧಾನವನ್ನು ಅನುಸರಿಸಿದರೆ, ಫ್ಯಾನ್‌ ಸ್ಪೀಡ್‌ ಆಗಿ ತಿರುಗುತ್ತದೆ.

ಇದನ್ನೂ ಓದಿ: BSNLನ ಈ  ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯ  

ಈ ವಿಷಯಗಳನ್ನು ನೆನಪಿನಲ್ಲಿಡಿ
ಫ್ಯಾನ್ ಅನ್ನು ಸ್ವಚ್ಛಗೊಳಿಸುವಾಗ ಯಾವಾಗಲೂ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಲ್ಯಾಡರ್ ಅಥವಾ ಸ್ಟೂಲ್ ಅನ್ನು ಬಳಸುವಾಗ ಕಾಳಜಿ ವಹಿಸಿ. ಫ್ಯಾನ್ ಅನ್ನು ಸ್ವಚ್ಛಗೊಳಿಸುವ ಮೊದಲು, ಫ್ಯಾನ್ ಸ್ವಿಚ್ ಅನ್ನು ಆಫ್ ಮಾಡಿ, ಇಲ್ಲದಿದ್ದರೆ ನೀವು ವಿದ್ಯುದಾಘಾತಕ್ಕೆ ಒಳಗಾಗಬಹುದು. ಫ್ಯಾನ್ ಅನ್ನು ಸ್ವಚ್ಛಗೊಳಿಸುವಾಗ, ಅದರ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ. ಒದ್ದೆಯಾದ ನೀರಿನಿಂದ ಫ್ಯಾನ್ ಮೋಟರ್ ಅನ್ನು ಸ್ವಚ್ಛಗೊಳಿಸಬೇಡಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

 

Trending News