2 ಬೌಲ್ಡ್, 2 LBW, ಒಂದೇ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್! 112 ವರ್ಷಗಳಿಂದ ಯಾರೂ ಬ್ರೇಕ್‌ ಮಾಡದ ದಾಖಲೆಯ ಸೃಷ್ಟಿಕರ್ತ ಈ ದಿಗ್ಗಜ ಲೆಗ್‌ ಸ್ಪಿನ್ನರ್

Australian leg-spinner Jimmy Mathews: ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ. ಈ ದಾಖಲೆ ರಚಿಸಿದ್ದು 1912 ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್. ಜಿಮ್ಮಿ ಈ ಸಾಧನೆ ಮಾಡಿದ ಏಕೈಕ ಬೌಲರ್.  

Written by - Bhavishya Shetty | Last Updated : Aug 25, 2024, 03:07 PM IST
    • ಕ್ರಿಕೆಟ್ ಆಟದಲ್ಲಿ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತವೆ
    • 112 ವರ್ಷಗಳ ಕಾಲ ಅಜರಾಮರವಾಗಿ ಉಳಿದಿರುವ ಈ ದಾಖಲೆಯೂ ಒಂದು
    • ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ
2 ಬೌಲ್ಡ್, 2 LBW, ಒಂದೇ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್! 112 ವರ್ಷಗಳಿಂದ ಯಾರೂ ಬ್ರೇಕ್‌ ಮಾಡದ ದಾಖಲೆಯ ಸೃಷ್ಟಿಕರ್ತ ಈ ದಿಗ್ಗಜ ಲೆಗ್‌ ಸ್ಪಿನ್ನರ್ title=
File Photo

Unbreakable test Record: ಕ್ರಿಕೆಟ್ ಆಟದಲ್ಲಿ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತವೆ, ಅಷ್ಟೇ ಪ್ರಮಾಣದಲ್ಲಿ ಬ್ರೇಕ್‌ ಕೂಡ ಆಗುತ್ತವೆ. ಆದರೆ ಬ್ರೇಕ್‌ ಮಾಡಲೂ ಸಾಧ್ಯವೇ ಆಗದ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳಲ್ಲಿ 112 ವರ್ಷಗಳ ಕಾಲ ಅಜರಾಮರವಾಗಿ ಉಳಿದಿರುವ ಈ ದಾಖಲೆಯೂ ಒಂದು.

ಇದನ್ನೂ ಓದಿ: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ... ಈ ವಿದ್ಯಾರ್ಥಿಗಳು! ವಿಡಿಯೋ ನೋಡಿ

ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ. ಈ ದಾಖಲೆ ರಚಿಸಿದ್ದು 1912 ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್. ಜಿಮ್ಮಿ ಈ ಸಾಧನೆ ಮಾಡಿದ ಏಕೈಕ ಬೌಲರ್.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಿಮ್ಮಿ ಮ್ಯಾಥ್ಯೂಸ್ ತಮ್ಮ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ʼಗಳಲ್ಲಿ ಹ್ಯಾಟ್ರಿಕ್‌ ವಿಕೆಟ್‌ಗಳನ್ನು ಕಬಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಮೊದಲ ಇನ್ನಿಂಗ್ಸ್‌ʼನಲ್ಲಿ ಆರ್ ಬ್ಯೂಮಾಂಟ್, ಎಸ್‌ ಜೆ ಪೆಗ್ಲರ್ ಮತ್ತು ಟಿಎ ವಾರ್ಡ್‌ʼರನ್ನು ಔಟ್ ಮಾಡಿದ್ದರೆ, ಆದರೆ ಎರಡನೇ ಇನ್ನಿಂಗ್ಸ್‌ʼನಲ್ಲಿ ಎಚ್‌ ಡಬ್ಲ್ಯೂ ಟೇಲರ್, ಆರ್‌ ಒ ಶ್ವಾರ್ಟ್ಜ್ ಮತ್ತು ಟಿಎ ವಾರ್ಡ್‌ʼಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

ಎರಡೂ ಇನ್ನಿಂಗ್ಸ್‌ʼಗಳಲ್ಲಿ ಹ್ಯಾಟ್ರಿಕ್ ಮಾತ್ರವಲ್ಲ, ಮ್ಯಾಥ್ಯೂಸ್ ಅವರ ವಿಕೆಟ್‌ʼಗಳಲ್ಲಿ ಫೀಲ್ಡರ್ ಕೊಡುಗೆ ಇರಲಿಲ್ಲ ಎಂಬ ಅಂಶವೂ ಗಮನಿಸಿಬೇಕಾದ್ದು. ಅಂದರೆ ಈ ಎರಡೂ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದು 2 ಕ್ಲೀನ್‌ ಬೌಲ್ಡ್‌ ಮಾಡಿ, ಮತ್ತೆರಡು ಸ್ವತಃ ಕ್ಯಾಚ್‌ ಪಡೆದು.

ಇದನ್ನೂ ಓದಿ: ರಾತ್ರಿ ವೇಳೆ ತಪ್ಪಿಯೂ ಸಹ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ: ಮನೆ ಹಿರಿಯನ ಆಯಸ್ಸಿಗೆ ಬರುತ್ತೆ ಆಪತ್ತು; ಬಡತನ ಹೆಚ್ಚುತ್ತೆ!

ಮ್ಯಾಥ್ಯೂಸ್ ಅವರ ಕ್ರಿಕೆಟ್ ಜೀವನವು ಸುದೀರ್ಘವೇನಾಗಿರಲಿಲ್ಲ. ಆಸ್ಟ್ರೇಲಿಯಾ ಪರ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, 16 ವಿಕೆಟ್ʼಗಳನ್ನು ಪಡೆದಿದ್ದರು. 1912 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇನ್ನು ಜಿಮ್ಮಿ ಮ್ಯಾಥ್ಯೂಸ್ 1943ರಲ್ಲಿ ನಿಧನರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News