Viral Video: ಶಾಲೆಗೆ ಫುಲ್‌ ಟೈಟ್‌ ಆಗಿ ಬಂದ ಪ್ರಿನ್ಸಿಪಾಲ್: ನಶೆ ಏರಿದ ಶಿಕ್ಷಕನನ್ನು ಕಂಡು ಮಕ್ಕಳು ಮಾಡಿದ್ದೇನು? ಈ ವಿಡಿಯೋ ನೋಡಿ

Drunk Teacher Slept In Classroom Viral Video: ಒಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್‌ʼನ ಧೆಂಕನಲ್‌ʼನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್‌ ಕಂಠಪೂರ್ತಿ ಕುಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಂದಿದ್ದಾನೆ. ಈ ಬಗ್ಗೆ ತಿಳಿದ ಮಕ್ಕಳು ಆತನ ಮುಖಕ್ಕೆ ನೀರನ್ನು ಎರಚಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ.  

Written by - Bhavishya Shetty | Last Updated : Aug 25, 2024, 06:36 PM IST
    • ಅಂತಹ ಶಿಕ್ಷಕರೇ ನಾಚಿಗೇಡಿನ ಕೆಲಸ ಮಾಡಿದರೆ ಏನೆಲ್ಲಾ ಆಗಬಹುದು?
    • ಈ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ
    • ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದಂತೆ ಮಲಗಿರುವ ಪ್ರಾಂಶುಪಾಲ
Viral Video: ಶಾಲೆಗೆ ಫುಲ್‌ ಟೈಟ್‌ ಆಗಿ ಬಂದ ಪ್ರಿನ್ಸಿಪಾಲ್: ನಶೆ ಏರಿದ ಶಿಕ್ಷಕನನ್ನು ಕಂಡು ಮಕ್ಕಳು ಮಾಡಿದ್ದೇನು? ಈ ವಿಡಿಯೋ ನೋಡಿ title=
Viral Video

Drunk Teacher Slept In Classroom Viral Video: ಶಿಕ್ಷಕನೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಷ್ಟೇ ಅಲ್ಲ, ಸರಿಯಾದ ಮಾರ್ಗದರ್ಶನ ನೀಡಿ ಅವರಿಗೆ ಸರಿ ಯಾವುದು? ತಪ್ಪು ಯಾವುದು? ಎಂಬುದನ್ನು ತಿಳಿಹೇಬೇಕಾದವರು. ಆದರೆ ಅಂತಹ ಶಿಕ್ಷಕರೇ ನಾಚಿಗೇಡಿನ ಕೆಲಸ ಮಾಡಿದರೆ ಏನೆಲ್ಲಾ ಆಗಬಹುದು? ಅಂದಹಾಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್‌ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ!

ಒಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್‌ʼನ ಧೆಂಕನಲ್‌ʼನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್‌ ಕಂಠಪೂರ್ತಿ ಕುಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಂದಿದ್ದಾನೆ. ಈ ಬಗ್ಗೆ ತಿಳಿದ ಮಕ್ಕಳು ಆತನ ಮುಖಕ್ಕೆ ನೀರನ್ನು ಎರಚಿ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣುವಂತೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ, ಪಾನಮತ್ತನಾಗಿ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಪ್ರಜ್ಞಾಹೀನನಾಗಿ ಮಲಗಿದ್ದಾನೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆತನನ್ನು ಎಚ್ಚರಿಸಲೆಂದು ಮುಖಕ್ಕೆ ನೀರು ಚಿಮುಕಿಸುತ್ತಿದ್ದಾರೆ. ಇನ್ನು ಆ ಶಾಲೆಯ ಇತರ ಶಿಕ್ಷಕರು ತರಗತಿಯ ಹೊರಗೆ ನಿಂತಿರುವುದನ್ನ ಸಹ ನೋಡಬಹುದಾಗಿದೆ.

ಇದನ್ನೂ ಓದಿ: ಏಕದಿನ ಮತ್ತು ಟಿ20ಯಲ್ಲಿ ಒಂದೇ ಒಂದು ಸಿಕ್ಸರ್‌ ಬಾರಿಸದ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರು ಇವರೇ

ಇನ್ನು ಈ ರೀತಿ ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದಂತೆ ಮಲಗಿರುವ ಪ್ರಾಂಶುಪಾಲನ ಹೆಸರು ರವೀಂದ್ರನಾಥ್​ ಮುರ್ಮು. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದು,ಆತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News