ಭಾರತದಲ್ಲಿ ಬಿಡುಗಡೆಯಾಯ್ತು iQOO 3 5G ಸ್ಮಾರ್ಟ್ ಫೋನ್, ಬೆಲೆ ಎಷ್ಟು?

iQOO 3 5G ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 36, 990 ರೂ. ನಿಗದಿಪಡಿಸಲಾಗಿದೆ. ಈ ಫೋನ್ Realme X50 Pro 5G ಫೋನ್ ಗೆ ನೆರೆ ಪೈಪೋಟಿ ನೀಡಲಿದೆ.

Last Updated : Feb 26, 2020, 10:19 AM IST
ಭಾರತದಲ್ಲಿ ಬಿಡುಗಡೆಯಾಯ್ತು iQOO 3 5G ಸ್ಮಾರ್ಟ್ ಫೋನ್, ಬೆಲೆ ಎಷ್ಟು? title=

ನವದೆಹಲಿ: ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ iQOO ತನ್ನ ಮೊದಲ 5G ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. 5G ಜೊತೆಗೆ 4G ಆವೃತ್ತಿಯಲ್ಲೂ ಈ ಫೋನ್ ದೊರೆಯಲಿದೆ. ಬಲಿಷ್ಠ ಪ್ರೋಸೆಸರ್ ಹಾಗೂ ಕ್ಯಾಮರಾ ಸೆಟಪ್ ಈ ಫೋನ್ ನ ವಿಶೇಷತೆಗಳಾಗಿವೆ. ಬನ್ನಿ ಹಾಗಾದ್ರೆ ನೋಡೋಣ ಈ ಫೋನ್ ನ ವೈಶಿಷ್ಟ್ಯಗಳೇನು ಒಮ್ಮೆ ತಿಳಿಯೋಣ.

iQOO 3ನ ಬೆಲೆ ಹಾಗೂ ಕೊಡುಗೆಗಳು
iQOO 3ನ ಒಟ್ಟು ಮೂರು ಆವೃತ್ತಿಗಳನ್ನು ಬಿಡುಗಡೆಗೊಳಿಸಲಾಗಿದೆ. ಇವುಗಳಲ್ಲಿ  8GB+128GB 4G ವರ್ಶನ್, 8GB+256GB 4G ವರ್ಶನ್ ಹಾಗೂ 12GB+256GB 5G ವರ್ಶನ್ ಶಾಮೀಲಾಗಿವೆ.

8GB+128GB 4G: 36,990 ರೂ.
8GB+256GB 4G: 39,990 ರೂ.
12GB+256GB 5G: 44,990 ರೂ.

ಕ್ವಾಂಟಮ್ ಸಿಲ್ವರ್, ವಾಲ್ಕೆನೋ ಆರೆಂಜ್ ಹಾಗೂ ಟಾರ್ನೆಡೊ ಬ್ಲಾಕ್ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮಾರ್ಚ್ 4 ರಿಂದ ಫ್ಲಿಪ್ ಕಾರ್ಟ್ ಹಾಗೂ ಕಂಪನಿಯ ಅಧಿಕೃತ ವೆಬ್ಸೈಟ್ ನಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯವಿರಲಿದೆ. ಈ ಫೋನ್ ಖರೀದಿಗಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಹ ಘೋಷಿಸಲಾಗಿದೆ. ICICI ಬ್ಯಾಂಕ್ ಕಾರ್ಡ್ ಬಳಸಿ ನೀವು ರೂ.3000 ಕ್ಯಾಶ್ ಬ್ಯಾಕ್ ಪಡೆಯಬಹುದು. ಜಿಯೋ ಗ್ರಾಹಕರು ಈ ಫೋನ್ ಖರೀದಿಯ ಮೇಲೆ ರೂ.12,000 ಬೆನಿಫಿಟ್ ಘೋಷಿಸಿದೆ.

iQOO 3 ಫೋನ್ ನ ವೈಶಿಷ್ಟ್ಯಗಳು
ನೂತನ iQOO 3ನಲ್ಲಿ 6.44 ಇಂಚಿನ E3 ಸೂಪರ್ AMOLED ಡಿಸ್ಪ್ಲೇ ಪರದೆ ನೀಡಲಾಗಿದೆ. ಇದು HDR 10+ ಸ್ಟ್ಯಾಂಡರ್ಡ್ ಸರ್ಟಿಫಿಕೇಶನ್ ನೊಂದಿಗೆ ಸಿಗಲಿದೆ. ಉತ್ತಮ ಕಾರ್ಯನಿರ್ವಹಣೆಗೆ ಇದರಲ್ಲಿ ಕ್ವಾಲಕಾಮ್ ಸ್ಯಾಪ್ ಡ್ರ್ಯಾಗನ್ 865 ಪವರ್ ಫುಲ್ ಪ್ರೊಸೆಸರ್ ನೀಡಲಾಗಿದೆ ಹಾಗೂ ಇದು ಅಂಡ್ರಾಯಿಡ್ 10 ಆಧಾರಿತ iQOO UI 1.0 ಆಪರೇಟಿಂಗ್ ಸಿಸ್ಟಮ್ ಮೇಲೆ ಕಾರ್ಯನಿರ್ವಹಿಸಲಿದೆ. ಗ್ರಾಫಿಕ್ಸ್ ಗಾಗಿ ಇದರಲ್ಲಿ ADRENO 650 CPU ಅಳವಡಿಸಲಾಗಿದೆ.

iQOO 3 ಕ್ಯಾಮೆರ ಸೆಟಪ್ ಹೇಗಿರಲಿದೆ?
ಫೋಟೋಗ್ರಾಫಿ ನಡೆಸಲು ಈ ಫೋನ್ ನ ರೆಯರ್ ಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರಲ್ಲಿ 48 MP ಪ್ರೈಮರಿ ಕ್ಯಾಮೆರಾ + 13 MP ಟೆಲಿಫೋಟೋ ಲೆನ್ಸ್ +13 MP ವೈಡ್ ಆಂಗಲ್ ಲೆನ್ಸ್ +2 MP ಡೆಪ್ತ್ ಸೆನ್ಸರ್ ಶಾಮೀಲಾಗಿವೆ. ಇನ್ನೊಂದೆಡೆ ಸೇಲ್ಫಿ ಪ್ರೀಯರಿಗಾಗಿ ಫೋನ್ ನ ಮುಂಭಾಗದಲ್ಲಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ವಿಡಿಯೋ ಮೇಕಿಂಗ್ ಗಾಗಿ ಈ ಫೋನ್ ಒಂದು ಉತ್ತಮ ಆಯ್ಕೆಯಾಗಿ ಪರಿಣಮಿಸಲಿದೆ.

iQOO 3 ನಲ್ಲಿ 55W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ
ಈ ಫೋನ್ ನಲ್ಲಿ 4440 mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ಇದು 55W ಫಾಸ್ಟ್ ಸೂಪರ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಇದು ಈ ಫೋನ್ ನ ಮತ್ತೊಂದು ಬಲಿಷ್ಠ ವೈಶಿಷ್ಯವಾಗಿದೆ. ಕನೆಕ್ಟಿವಿಟಿಗಾಗಿ 4G, 5G, ಬ್ಲೂಟೂಥ್ 5.0, Wi-Fi, GPS ಹಾಗೂ USB ಪೋರ್ಟ್ ಟೈಪ್ C ಗಳಂತಹ ವೈಶಿಷ್ಟ್ಯಗಳಿಗೆ ಈ ಫೋನ್ ಸಪೋರ್ಟ್ ಮಾಡಲಿದೆ.

Trending News