Bigg Boss Kannada 11ಕ್ಕೆ ಮುಹೂರ್ತ ಫಿಕ್ಸ್: ಇವರೇ ಆ್ಯಂಕರ್, ಕುತೂಹಲ ಹೆಚ್ಚಿಸಿದ ಕಿಚ್ಚ ಸುದೀಪ್ ಡೈಲಾಗ್..!

Bigg Boss Kannada 11 Starting Date 2024: 'ಬಿಗ್ ಬಾಸ್‌ ಕನ್ನಡ ಸೀಸನ್ 11' ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜೊತೆಗೆ ಈ ಬಾರಿ ಯಾರು ಆ್ಯಂಕರ್ ಆಗಲಿದ್ದಾರೆ ಎಂಬ ಕುತೂಹಲಕ್ಕೂ ತೆರೆಬಿದ್ದಿದೆ. 

Bigg Boss Kannada Season 11: ಬಿಗ್ ಬಾಸ್ ಕನ್ನಡ ಸೀಸನ್ 11 ಸಂಬಂಧಿತ ಹೊಸ ಪ್ರೋಮೊ ರಿಲೀಸ್ ಆಗಿದ್ದು, ಇದರಲ್ಲಿ ಆ್ಯಂಕರ್ ಫೇಸ್ ಕೂಡ ರಿವೀಲ್ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ವೀಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಯಾವಾಗ ಆರಂಭವಾಗಲಿದೆ, ಈ ಬಾರಿ ಶೋ ನಡೆಸಿಕೊಡುವವರ್ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಬಿಗ್ ಬಾಸ್ ಹೊಸ ಪ್ರೋಮೊದಿಂದ ಉತ್ತರ ಸಿಕ್ಕಿದೆ. 

2 /8

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ಅಪ್ಡೇಟ್ ಹೊರ ಬೀಳಲಿದೆ ಎನ್ನಲಾಗುತ್ತಿತ್ತು. ಅದರಂತೆ ಇದೀಗ ಬಿ‌ಬಿ‌ಕೆ 11ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. 

3 /8

ನೂತನವಾಗಿ ಬಿಡುಗಡೆಯಾಗಿರುವ ಈ ಪ್ರೋಮೋದಲ್ಲಿ ಶೋ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿಯ ಜೊತೆಗೆ  ಆ್ಯಂಕರ್ ಫೇಸ್ ಕೂಡ ರಿವೀಲ್ ಆಗಿದೆ. ಇದರಲ್ಲಿ, ಕಿಚ್ಚ ಸುದೀಪ್ ಹೇಳುವ ಡೈಲಾಗ್ ವೀಕ್ಷಕರ ಕುತೂಹಲ ಹೆಚ್ಚಿಸಿದೆ. 

4 /8

'ಬಿಗ್ ಬಾಸ್ ಕನ್ನಡ ಸೀಸನ್ 11'ಕಾರ್ಯಕ್ರಮವನ್ನು ಕಿಚ್ಚನ ಬದಲಿಗೆ ಬೇರೆಯವರು ನಡೆಸಿಕೊಡಲಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದರೀಗ ಆದ್ರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಎಂದಿರುವ ಕಲರ್ಸ್ ವಾಹಿನಿ ಕಿಚ್ಚ ಸುದೀಪ್ ಅವರನ್ನೇ ಆ್ಯಂಕರ್ ಆಗಿ ಆಯ್ಕೆ ಮಾಡಿದೆ. 

5 /8

ಈ ಪ್ರೋಮೋದಲ್ಲಿ 'ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗ್ತಾರೆ. ಆದ್ರೆ ಎಲ್ರನ್ನೂ ನಿಯಂತ್ರಿಸುವ ಸೂತ್ರಧಾರ...' ಎಂಬ ಡೈಲಾಗ್ ನಿಲ್ಲುತ್ತಿದ್ದಂತೆ ಕಿಚ್ಚ ಸುದೀಪ್ ಎಂಟ್ರಿ ಕೊಡ್ತಾರೆ. 

6 /8

ರಾಜನ ಕಾಸ್ಟ್ಯೂಮ್​ನಲ್ಲಿ  ಕಿಚ್ಚ ಎಂಟ್ರಿ ಆಗ್ತಿದ್ದಂತೆ "10 ವರ್ಷದಿಂದ ಒಂದು ಲೆಕ್ಕ, ಈಗಿಂದ  ಬೇರೆನೇ ಲೆಕ್ಕ, ಇದು ಹೊಸ ಅಧ್ಯಾಯ" ಎಂಬ ಖಡಕ್ ಡೈಲಾಗ್ ಹೊಡೆದಿದ್ದಾರೆ. 

7 /8

ಈ ಪ್ರೋಮೊದಲ್ಲಿ ಹಿಂದೆಂದಿಗಿಂತ ಬಿಗ್ ಬಾಸ್ ಸೆಟ್ ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು  ಇದರಲ್ಲಿ ರಾಜನ ಕಾಸ್ಟ್ಯೂಮ್​ನಲ್ಲಿ ಬರುವ ಕಿಚ್ಚ, ಈಗಿಂದ ಬೇರೆದೇ ಲೆಕ್ಕ ಎಂದು ಹೇಳಿರುವುದು ವೀಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.  

8 /8

ರಿಲೀಸ್ ಆಗಿರುವ ಪ್ರೋಮೋ ಪ್ರಕಾರ, ಇದೇ ಸೆಪ್ಟೆಂಬರ್ 29ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 11' ಕಾರ್ಯಕ್ರಮ ಆರಂಭವಾಗಲಿದೆ.