ಮನೆಯಲ್ಲಿರುವ ಹಲ್ಲಿಗಳನ್ನು ಕ್ಷಣಾರ್ಧಲ್ಲಿ ಓಡಿಸುತ್ತೆ ಅಡುಗೆ ಮನೆಯಲ್ಲಿರುವ ʼಈʼ ಪದಾರ್ಥ! ಮತ್ತೆಂದೂ ಒಳಕ್ಕೆ ಬರಲ್ಲ!!

Ways To Get Rid Of Lizards From Home: ಮನೆಯ ಸುತ್ತಮುತ್ತ ಕಾಣುವ ಹಲ್ಲಿಗಳು ನಮ್ಮನ್ನು ಹೆದರಿಸುತ್ತವೆ. ಗೋಡೆಯ ಮೇಲಿರುವ ಹಲ್ಲಿಯ ಭಯದಿಂದ ಅನೇಕರು ಕಣ್ಣು ಹಾಯಿಸುವುದಿಲ್ಲ. ಅಂತಹವರಿಗೆ ಕೆಲವು ಸರಳ ಮನೆ ಸಲಹೆಗಳು ಈ ಟ್ರಿಕ್ಸ್ ಅನ್ನು ಅನುಸರಿಸಿ ಸುಲಭವಾಗಿ ಹಲ್ಲಿಗಳನ್ನು ಮನೆಯಿಂದ ಹೊರಹಾಕಬಹುದು.

Written by - Savita M B | Last Updated : Sep 20, 2024, 10:27 PM IST
  • ಅನೇಕ ಜನರು ಹಲ್ಲಿಗಳಿಗೆ ಹೆದರುತ್ತಾರೆ.
  • ನಿಮ್ಮ ಮನೆಯಿಂದ ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಕೆಲವು ಸರಳ ಮನೆಮದ್ದುಗಳು ಇಲ್ಲಿವೆ.
ಮನೆಯಲ್ಲಿರುವ ಹಲ್ಲಿಗಳನ್ನು ಕ್ಷಣಾರ್ಧಲ್ಲಿ ಓಡಿಸುತ್ತೆ ಅಡುಗೆ ಮನೆಯಲ್ಲಿರುವ ʼಈʼ ಪದಾರ್ಥ! ಮತ್ತೆಂದೂ ಒಳಕ್ಕೆ ಬರಲ್ಲ!!  title=

lizards: ಅನೇಕ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಹಲ್ಲಿಗಳ ಭಯವನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ನಿಮ್ಮ ಮನೆಯಿಂದ ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಕೆಲವು ಸರಳ ಮನೆಮದ್ದುಗಳು ಇಲ್ಲಿವೆ.  

ಈರುಳ್ಳಿ:
ಈರುಳ್ಳಿ ಕೇವಲ ಅಡುಗೆಗೆ ಅಲ್ಲ. ಇದರಿಂದ ಅಡುಗೆಮನೆಯಿಂದ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು.. ಈರುಳ್ಳಿಯಿಂದ ಹೊರಹೊಮ್ಮುವ ಕಟುವಾದ ವಾಸನೆಯು ಹಲ್ಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಈರುಳ್ಳಿಯನ್ನು ಕತ್ತರಿಸಿ, ಹಲ್ಲಿ ಎಲ್ಲಿಂದ ಬರುತ್ತದೆಯೋ ಅಲ್ಲಿಡಿ. ಅದರಿಂದ ಬರುವ ವಾಸನೆ ಹಲ್ಲಿ ಮನೆಗೆ ಬರದಂತೆ ನೋಡಿಕೊಳ್ಳುತ್ತದೆ. ಅಲ್ಲದೆ, ಹಲ್ಲಿಗಳನ್ನು ಗೋಡೆಯಿಂದ ಓಡಿಸಲು, ಈರುಳ್ಳಿಯನ್ನು ಕತ್ತರಿಸಿ ಅದನ್ನು ದಾರದಿಂದ ಕಟ್ಟಿ ಗೋಡೆಗೆ ನೇತುಹಾಕಿ.

ಇದನ್ನೂ ಓದಿ-ನಾಗಚೈತನ್ಯ ಎಂಗೇಜ್‌ಮೆಂಟ್‌ ಬೆನ್ನಲ್ಲೇ ಗುಡ್‌ ನ್ಯೂಸ್ ನೀಡಿದ ಸಮಂತಾ! ಫ್ಯಾನ್ಸ್‌ ಫುಲ್‌ ಖುಷ್!!‌   

ಬೆಳ್ಳುಳ್ಳಿ:
ಮನೆಯಲ್ಲಿ ಹಲ್ಲಿಗಳನ್ನು ಓಡಿಸಲು ಬೆಳ್ಳುಳ್ಳಿಯನ್ನು ಬಳಸಬಹುದು. ಬೆಳ್ಳುಳ್ಳಿಯನ್ನು ಕತ್ತರಿಸಿ ಮನೆಯ ಸುತ್ತಲೂ ಹಲ್ಲಿಗಳು ಓಡಾಡುವ ಕಿಟಕಿ ಬಾಗಿಲುಗಳಂತಹ ಸ್ಥಳಗಳಲ್ಲಿ ಇರಿಸಿ. ಬೆಳ್ಳುಳ್ಳಿಯ ಬಲವಾದ ವಾಸನೆಯು ಹಲ್ಲಿಗಳನ್ನು ಓಡಿಸುತ್ತದೆ.. ಅದೂ ಅಲ್ಲದೆ ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿ.. ನೀರಿನಲ್ಲಿ ಕಲಸಿ.. ಟೇಬಲ್ಲುಗಳು ಹೀಗೆ ಹಲ್ಲಿ ಇರುವ ಜಾಗದಲ್ಲಿ ಚಿಮುಕಿಸಿ.. . 

ಪೆಪ್ಪರ್ ಸ್ಪ್ರೇ:
ಪೆಪ್ಪರ್ ಸ್ಪ್ರೇ ಬಳಸಿ ಹಲ್ಲಿಗಳು ಮನೆಗೆ ಬರದಂತೆ ತಡೆಯಬಹುದು. ಸ್ಪ್ರೇನಿಂದ ಬರುವ ಬಲವಾದ ವಾಸನೆಯು ಹಲ್ಲಿಗಳನ್ನು ಮನೆಯೊಳಕ್ಕೆ ಬರದಂತೆ ತಡೆಯುತ್ತವೆ.. ನೀವು ಮನೆಯಲ್ಲಿಯೇ ಪೆಪ್ಪರ್ ಸ್ಪ್ರೇ ತಯಾರಿಸಬಹುದು. ಮೊದಲು ಸ್ವಲ್ಪ ಮೆಣಸು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಪೇಸ್ಟ್ ಅನ್ನು ನೀರಿನಿಂದ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.. ಹಲ್ಲಿ ಇರುವ ಜಾಗಗಳಲ್ಲಿ ಸ್ಪ್ರೇ ಮಾಡಿದರೆ ಅವುಗಳಿಂದ ತೊಂದರೆ ಆಗುವುದಿಲ್ಲ.

ಇದನ್ನೂ ಓದಿ-Anchor Anushree: ಅಬ್ಬಬ್ಬಾ.. ಯಾವ ಸ್ಟಾರ್ ನಟಿಗೂ ಕಮ್ಮಿಯಿಲ್ಲ ಅನುಶ್ರೀ.. ಖ್ಯಾತ ನಿರೂಪಕಿ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News