How To Increase Internet Speed :ಜುಲೈ ತಿಂಗಳಿನಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಏರುಪೇರು ಕಂಡುಬಂದಿದೆ.ಇತರ ಟೆಲಿಕಾಂ ಕಂಪನಿಗಳು (Jio, Airtel ಮತ್ತು Vi) ಗ್ರಾಹಕರನ್ನು ಕಳೆದುಕೊಳ್ಳುತ್ತಿರುವಾಗ, BSNL ಹೊಸ ಗ್ರಾಹಕರನ್ನು ಸೇರಿಸುವ ಮೂಲಕ ದೊಡ್ಡ ಸಾಧನೆಯನ್ನು ಸಾಧಿಸಿದೆ.TRAI ವರದಿ ಪ್ರಕಾರ, ಸುಮಾರು 29 ಲಕ್ಷ ಹೊಸ ಗ್ರಾಹಕರು BSNL ಸೇರಿದ್ದಾರೆ.ಕಂಪನಿಯು ತನ್ನ ಸೇವೆಗಳನ್ನು ಸುಧಾರಿಸಿದ್ದು, ಗ್ರಾಹಕರ ಅಗತ್ಯಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ.
ಫಾಸ್ಟ್ ಇಂಟರ್ನೆಟ್ ಪಡೆಯುವುದು ಹೇಗೆ? :
BSNL ತನ್ನ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ನೀಡಿದೆ.ಕಂಪನಿಯು 2025ರ ಮಧ್ಯಭಾಗದಲ್ಲಿ ತನ್ನ 4G ನೆಟ್ವರ್ಕ್ ಅನ್ನು ಬಲಪಡಿಸಲು 1 ಲಕ್ಷ ಹೊಸ ಟವರ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.ಈ ಹಂತದಿಂದ BSNL ಗ್ರಾಹಕರು ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. BSNL ಗ್ರಾಹಕರು ಎದುರಿಸುವ ಬಹು ದೊಡ್ಡ ಸಮಸ್ಯೆ ಎಂದರೆ ಸ್ಲೋ ಇಂಟರ್ನೆಟ್ . ಆದರೆ ಈಗ ಕಂಪನಿಯ ಈ ಹೊಸ ಪ್ರಯತ್ನದಿಂದ ಗ್ರಾಹಕರು ಉತ್ತಮ ನೆಟ್ವರ್ಕ್ ಅನುಭವವನ್ನು ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ : Diwali saleನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಸಿಗಲಿದೆ OnePlus 12!ಜೊತೆಗೆ ಉಚಿತವಾಗಿ ಸಿಗಲಿದೆ Buds Pro 2 !
ನಿಮ್ಮ BSNL ಸಿಮ್ನಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಇಂಟರ್ನೆಟ್ ಸ್ಪೀಡ್ ಅನ್ನು ಹಲವು ಪಟ್ಟು ವೇಗಗೊಳಿಸಬಹುದು ಎನ್ನುವ ಸತ್ಯ ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ಫೋನ್ನ ಸೆಟ್ಟಿಂಗ್ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಪೂರ್ಣ ನೆಟ್ವರ್ಕ್ನೊಂದಿಗೆ ಫಾಸ್ಟ್ ಇಂಟರ್ನೆಟ್ ಅನ್ನು ಆನಂದಿಸಬಹುದು.
BSNLನಲ್ಲಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ? :
- ಮೊದಲು ನಿಮ್ಮ ಫೋನ್ನ ಸೆಟ್ಟಿಂಗ್ಗಳನ್ನು ತೆರೆಯಿರಿ.
- ನಂತರ 'ನೆಟ್ವರ್ಕ್' ಅಥವಾ 'ಕನೆಕ್ಷನ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಅದರ ನಂತರ 'ಮೊಬೈಲ್ ನೆಟ್ವರ್ಕ್' ಗೆ ಹೋಗಿ.
- ಇಲ್ಲಿ ನೀವು '5G/LTE/3G/2G' ಆಯ್ಕೆಯನ್ನು ನೋಡುತ್ತೀರಿ.
- ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು '5G' ಅಥವಾ 'LTE' (ನಿಮ್ಮ ಪ್ರದೇಶದಲ್ಲಿ ಯಾವುದು ಲಭ್ಯವಿದೆಯೋ ಅದನ್ನು) ಆಯ್ಕೆಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಇಂಟರ್ನೆಟ್ ಸ್ಪೀಡ್ ಹೆಚ್ಚುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.