Travel Insurance: 1 ರೂಪಾಯಿ ಖರ್ಚಿಲ್ಲದೆ ಪಡೆಯಿರಿ ₹ 10,00,000 ವರೆಗಿನ ವಿಮೆ

Travel Insurance: ನಿಮ್ಮ ಜೇಬಿನಿಂದ ನಯಾ ಪೈಸೆ ಖರ್ಚಿಲ್ಲದೆ 10 ಲಕ್ಷ ರೂ.ವರೆಗೂ ವಿಮಾ ಸೌಲಭ್ಯವನ್ನು ಪಡೆಯಬಹುದು. ಹೇಗೆಂದು ತಿಳಿಯಲು ಮುಂದೆ ಓದಿ. 

Written by - Yashaswini V | Last Updated : Sep 25, 2024, 02:50 PM IST
  • ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಐ‌ಆರ್‌ಸಿ‌ಟಿ‌ಸಿ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ
  • ಅದರಲ್ಲಿ ರೈಲ್ವೆಯ ಪ್ರಯಾಣ ವಿಮಾ ಸೌಲಭ್ಯವೂ ಒಂದು
  • ಇದನ್ನು ಯಾರು? ಹೇಗೆ ಪಡೆಯಬಹುದು ಎಂದು ತಿಳಿಯೋಣ...

Trending Photos

Travel Insurance: 1 ರೂಪಾಯಿ ಖರ್ಚಿಲ್ಲದೆ ಪಡೆಯಿರಿ ₹ 10,00,000 ವರೆಗಿನ ವಿಮೆ title=
IRCTC Travel Insurance Benefits

IRCTC Travel Insurance: ಭಾರತೀಯ ರೈಲ್ವೆ ಆರಾಮದಾಯಕ ಹಾಗೂ ಬಜೆಟ್ ಸ್ನೇಹಿ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ಹಾಗಾಗಿಯೇ ಹೆಚ್ಚಿನ ಜನರು ದೂರದ ಪ್ರಯಾಣಗಳಿಗೆ ರೈಲು ಪ್ರಯಾಣವನ್ನು ಆಯ್ಕೆ ಮಾಡುತ್ತದೆ. ಆದಾಗ್ಯೂ, ಕೆಲವೊಮ್ಮೆ ಪ್ರಯಾಣದ ಸಮಯದಲ್ಲಿ ಸಂಭವಿಸಬಹುದಾದ ಅಪಘಾತಗಳ ದೃಷ್ಟಿಯಿಂದ ರೈಲ್ವೆ ಇಲಾಖೆ ಹಲವು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ. ಇದರ ಭಾಗವಾಗಿ ರೈಲು ಪ್ರಯಾಣಿಕರಿಗೆ ವಿಮಾ ಸೌಲಭ್ಯವನ್ನು ಕೂಡ ನೀಡುತ್ತಿದೆ. ವಿಶೇಷವೆಂದರೆ ಈ ಸೌಲಭ್ಯವನ್ನು ಪಡೆಯಲು ನೀವು 1 ರೂಪಾಯಿಯನ್ನೂ ಖರ್ಚುಮಾಡಬೇಕಾಗಿಲ್ಲ. 

ಹೌದು, ಭಾರತೀಯ ರೈಲ್ವೇಯಲ್ಲಿ (Indian Railways)  ಪ್ರಯಾಣಿಸುವ ಪ್ರಯಾಣಿಕರಿಗಾಗಿ ಐ‌ಆರ್‌ಸಿ‌ಟಿ‌ಸಿ ವಿಮೆ ಸೌಲಭ್ಯವನ್ನು ಒದಗಿಸುತ್ತಿದೆ. ವಾಸ್ತವವಾಗಿ, ಟ್ರೈನ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ನಾವು ಕೆಲವು ಟಿಪ್ಪಣಿಗಳನ್ನು ಓದುವುದನ್ನು ನಿರ್ಲಕ್ಷಿಸುತ್ತೇವೆ. ಆದರೆ, ಇದು ಭವಿಷ್ಯದಲ್ಲಿ ನಿಮಗೆ ಅಥವಾ ನಿಮ್ಮನ್ನು ನಂಬಿರುವ ಕುಟುಂಬದವರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅದುವೇ 'ಪ್ರಯಾಣ ವಿಮೆ'. ಟ್ರೈನ್ ಟಿಕೆಟ್ ಬುಕಿಂಗ್ ಸಂದರ್ಭದಲ್ಲಿ 1 ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ವಿಮಾ ಸೌಲಭ್ಯಕ್ಕೆ ಕೇವಲ 45 ಪೈಸೆ (ಓರ್ವ ಪ್ರಯಾಣಿಕರಿಗೆ) ಖರ್ಚು ಮಾಡಿದರೆ ಸಾಕು 10,00,000 ರೂ.ವರೆಗಿನ ಪ್ರಯಾಣ ವಿಮೆಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ- IRCTC: ತತ್ಕಾಲ್ ಬುಕ್ಕಿಂಗ್ ವೇಳೆ ಕನ್ಫರ್ಮ್  ರೈಲ್ವೇ ಟಿಕೆಟ್‌ಗಳನ್ನು ಪಡೆಯಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ..!

ಪ್ರಯಾಣ ವಿಮೆಯನ್ನು ಪಡೆಯುವುದು ಹೇಗೆ? 
ಐ‌ಆರ್‌ಸಿ‌ಟಿ‌ಸಿ (IRCTC) ಒದಗಿಸುತ್ತಿರುವ ಈ ವಿಮಾ ಸೌಲಭ್ಯವನ್ನು ಪಡೆಯಲು ರೈಲು ಟಿಕೆಟ್ ಬುಕ್ ಮಾಡುವಾಗ ವಿಮಾ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಆಗಷ್ಟೇ, ಈ ಪ್ರಯಾಣ ವಿಮಾ ಸೌಲಭ್ಯ ಲಭ್ಯವಾಗಲಿದೆ. ಇದಕ್ಕಾಗಿ ನೀವು ಐ‌ಆರ್‌ಸಿ‌ಟಿ‌ಸಿ  ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಿದಾಗಲೆಲ್ಲಾ, ಮುಂಭಾಗದ ವಿಂಡೋದಲ್ಲಿ ಕಾಣುವ 'ಪ್ರಯಾಣ ವಿಮೆ' ಆಯ್ಕೆಯನ್ನು ಆರಿಸಿ. ಕೆಲವು ವಿವರಗಳನ್ನು ಭರ್ತಿ ಮಾಡಬೇಕು. ಅದರ ನಂತರ ನೀವು ಈ ವಿಮೆ ಅಡಿಯಲ್ಲಿ ನೋಂದಾಯಿಸಿಕೊಳ್ಳುತ್ತೀರಿ. ಕೌಂಟರ್‌ನಿಂದ ಟಿಕೆಟ್ ಖರೀದಿಸಿ ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸುವವರಿಗೆ ಈ ವಿಮೆಯ ಪ್ರಯೋಜನವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ವಿಮೆಯನ್ನು ಖರೀದಿಸುವಾಗ, ನಾಮಿನಿಯ ಹೆಸರನ್ನು ಭರ್ತಿ ಮಾಡಿ, ಇದರಿಂದ ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ, ಅದನ್ನು ಕ್ಲೈಮ್ ಮಾಡಲು ಯಾವುದೇ ತೊಂದರೆ ಎದುರಾಗುವುದಿಲ್ಲ. 

ರೈಲಿನ ಪ್ರಯಾಣ ವಿಮೆ ಯಾವಾಗ ಉಪಯೋಗಕ್ಕೆ ಬರಲಿದೆ? 
ರೈಲು ಅಪಘಾತದ (Train Accident) ಸಂದರ್ಭದಲ್ಲಿ ಉಂಟಾಗುವ ಯಾವುದೇ ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದ ಐ‌ಆರ್‌ಸಿ‌ಟಿ‌ಸಿ ಈ ಪ್ರಯಾಣ ವಿಮೆಯನ್ನು  (Travel Insurance)  ಒದಗಿಸುತ್ತಿದೆ. ಐ‌ಆರ್‌ಸಿ‌ಟಿ‌ಸಿ ಒದಗಿಸುವ ಈ ಪ್ರಯಾಣ ವಿಮಾ ಸೌಲಭ್ಯದ ಅಡಿಯಲ್ಲಿ, ಪ್ರಯಾಣಿಕರು ರೈಲು ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ, 10 ಲಕ್ಷದವರೆಗೆ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಪ್ರಯಾಣಿಕರು ಭಾಗಶಃ ಅಂಗವಿಕಲರಾದರೆ ಅವರಿಗೆ 7.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಗಂಭೀರ ಗಾಯಗಳಾದರೆ 2 ಲಕ್ಷ ರೂ., ಸಣ್ಣಪುಟ್ಟ ಗಾಯಗಳಾದರೆ 10,000 ರೂ.ವರೆಗೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ನೆರವನ್ನು ಒದಗಿಸಲಾಗುತ್ತದೆ. 

ಇದನ್ನೂ ಓದಿ- ದುಬಾರಿ ಹೋಟೆಲ್‌ಗಳಲ್ಲಿ ಅಧಿಕ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ: ಕೇವಲ 20-40 ರೂ.ಗೆ ಸಿಗುತ್ತೆ ಎಸಿ ರೂ

'ಪ್ರಯಾಣ ವಿಮೆ' ಕ್ಲೈಮ್ ಮಾಡುವುದು ಹೇಗೆ? 
ಐ‌ಆರ್‌ಸಿ‌ಟಿ‌ಸಿ ಯ ಈ "ಪ್ರಯಾಣ ವಿಮೆ" ಪ್ರಯೋಜನವು ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿರುತ್ತದೆ. ವಿದೇಶಿ ನಾಗರಿಕರು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಯಾವುದೇ ಪ್ರಯಾಣಿಕರು ರೈಲು ಅಪಘಾತವಾದ 4 ತಿಂಗಳೊಳಗೆ ಈ ವಿಮೆಗಾಗಿ ಕ್ಲೈಮ್ ಮಾಡಬಹುದು. ಐ‌ಆರ್‌ಸಿ‌ಟಿ‌ಸಿ ಒದಗಿಸುವ ಈ ಸೌಲಭ್ಯಕ್ಕಾಗಿ, ನೀವು ವಿಮೆಯನ್ನು ಖರೀದಿಸಿದ ವಿಮಾ ಕಂಪನಿಯ ಕಚೇರಿಗೆ ಹೋಗಿ ಮತ್ತು ವಿಮೆಗಾಗಿ ಕ್ಲೈಮ್ ಅರ್ಜಿ ಅನ್ನು ಸಲ್ಲಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News