BBK 11 : ಬಿಗ್‌ಬಾಸ್‌ ಪ್ರಾರಂಭದಲ್ಲೇ ʼನರಕʼಕ್ಕೆ ಹೋದ ನಟ ದರ್ಶನ್‌ ಅಭಿಮಾನಿ ಅನುಷಾ..! ಯಾರು ಈ ಸುಂದರಿ..?

Bigg Boss Anusha Rai : ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಪ್ರಾರಂಭವಾಗಿದೆ.. ಒಬ್ಬರಾಗಿ ಎಂಟಿಕೊಡುತ್ತಿರುವ ಸ್ಪರ್ಧಿಗಳನ್ನು ಕಂಡು ಪ್ರೇಕ್ಷಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಿಗ್‌ಹೌಸ್‌ಗೆ 5ನೇ ಸ್ಪರ್ಧಿಯಾಗಿ ನಟಿ ಅನುಷಾ ರೈ ಎಂಟ್ರಿಕೊಟ್ಟಿದ್ದಾರೆ.. ವಿಶೇಷ ಅಂದ್ರೆ ಅನುಷಾ ನಟ ಧರ್ಮ ಕೀರ್ತಿರಾಜ್‌ ಜೊತೆ ಕಿಚ್ಚನ ಮುಂದೆ ಹಾಜರಾಗಿದ್ದು.. ಸಧ್ಯ ಅನುಷಾ ಯಾರು..? ಅಂತ ತಲೆಕೆಡಿಸಿಕೊಂಡಿರುವ ಪ್ರೇಕ್ಷಕರಿಗೆ ಕ್ಲಾರಿಟಿ ನೀಡುವ ಬನ್ನಿ..

1 /8

ಅನುಷಾ ರೈ ಕನ್ನಡ ( Anusha Rai ) ಚಿತ್ರರಂಗದ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರು. 1999ರ ಮೇ 4ರಂದು ಬೆಂಗಳೂರಿನಲ್ಲಿ ಜನಿಸಿದರು.  

2 /8

ಅನುಷಾ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿರಿಂಗ್ ಮುಗಿಸಿದ್ದಾರೆ.   

3 /8

2017ರಲ್ಲಿ ತೆರೆಕಂಡ `ಮಹಾನುಭಾವರು' ಚಿತ್ರದಲ್ಲಿ ನಟಿಸುವ ಮೂಲಕ ಅನುಷಾ ರೈ ಕನ್ನಡ ಚಿತ್ರರಂಗ ಪ್ರವೇಶಿಸಿದರು.   

4 /8

ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  

5 /8

'ನಾಗಕನ್ನಿಕೆ', 'ರಾಜಕುಮಾರಿ' ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಅನುಷಾ ಚಿರಪರಿಚಿತರಾಗಿದ್ದಾರೆ.  

6 /8

ʼರಾಜಕುಮಾರಿʼ ಧಾರಾವಾಹಿ ಮೂಲಕ ಅನುಷಾ ಮುನ್ನೆಲೆಗೆ ಬಂದರು.. ಇವರ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ರಾಜಕುಮಾರಿ ಎಂದೇ ಕರೆಯುತ್ತಿದ್ದರು.  

7 /8

ಸಧ್ಯ ಅನುಷಾ ರೈ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ.    

8 /8

ನಟಿ ಅನುಷಾ ರೈ ನಟ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.. ಸಧ್ಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ (Bigg Boss Kannada Season 11) ಎಂಟ್ರಿಕೊಟ್ಟಿದ್ದು, ನಕರಕ್ಕೆ ಹೋಗಿದ್ದಾರೆ..