ನೀವು ಈ ದಿನಾಂಕದಲ್ಲಿ ಜನಿಸಿದ್ದರೆ 42 ವರ್ಷವಾಗುತ್ತಿದ್ದ ಹಾಗೆ ಕೋಟ್ಯಾಧಿಪತಿಯಾಗುವುದು ನಿಶ್ಚಿತ !ಕಡು ಬಡವ ಕೂಡಾ ಕಾಣುವ ಸಿರಿತನ

ಸಂಖ್ಯಾಶಾಸ್ತ್ರದ ಪ್ರಕಾರ,ರಾಹು ಸಂಖ್ಯೆ 4 ರ ಅಧಿಪತಿ.ಈ ಕಾರಣದಿಂದಾಗಿ ಈ ಜನರ ಜೀವನದ ಮೇಲೆ ರಾಹು ವಿಶೇಷ ಪ್ರಭಾವ ಬೀರುತ್ತಾನೆ.    

Written by - Ranjitha R K | Last Updated : Oct 1, 2024, 01:05 PM IST
  • ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಯ ಜನ್ಮ ದಿನಾಂಕವನ್ನು ಆಧರಿಸಿ ಭವಿಷ್ಯ
  • ಪ್ರತಿ ಮೂಲಾಂಕವನ್ನೂ ಆಳುವ ಗ್ರಹ ಇರುತ್ತದೆ.
  • ಮೂಲಾಂಕ 4 ಆಗಿದ್ದರೆ ಅಧಿಪತಿ ಗ್ರಹ ರಾಹು.
ನೀವು ಈ ದಿನಾಂಕದಲ್ಲಿ ಜನಿಸಿದ್ದರೆ 42 ವರ್ಷವಾಗುತ್ತಿದ್ದ ಹಾಗೆ ಕೋಟ್ಯಾಧಿಪತಿಯಾಗುವುದು ನಿಶ್ಚಿತ !ಕಡು ಬಡವ ಕೂಡಾ ಕಾಣುವ ಸಿರಿತನ   title=

ಬೆಂಗಳೂರು : ಜ್ಯೋತಿಷ್ಯದಲ್ಲಿ ಜನ್ಮ ದಿನ, ಸಮಯಕ್ಕೆ ಅನುಗುಣವಾಗಿ ರಾಶಿ ನಕ್ಷತ್ರ ನೋಡಿಕೊಂಡು ವ್ಯಕ್ತಿಯ ಭವಿಷ್ಯವನ್ನು ಊಹಿಸಲಾಗುತ್ತದೆ.ಹಾಗೆಯೇ ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಯ ಜನ್ಮ ದಿನಾಂಕವನ್ನು ಆಧರಿಸಿ, ಸ್ವಭಾವ,ನಡವಳಿಕೆ,ಭವಿಷ್ಯ, ವೈವಾಹಿಕ ಜೀವನ,ವೃತ್ತಿ,ಆರ್ಥಿಕ ಸ್ಥಿತಿ ಇತ್ಯಾದಿಗಳನ್ನು ತಿಳಿಯಬಹುದು.ಯಾವ ರೀತಿ ಪ್ರತಿ ರಾಶಿಗೆ ಅಧಿಪತಿ ಗ್ರಹ ಇರುತ್ತದೆಯೋ ಹಾಗೆಯೇ ಪ್ರತಿ ಮೂಲಾಂಕವನ್ನೂ ಆಳುವ ಗ್ರಹ ಇರುತ್ತದೆ. 

ಇನ್ನು ನಿಮ್ಮ ಮೂಲಾಂಕ 4 ಆಗಿದ್ದರೆ ಅಧಿಪತಿ ಗ್ರಹ ರಾಹು.ಯಾವುದೇ ತಿಂಗಳ 4, 13, 22 ಅಥವಾ 31ರಂದು ಜನಿಸಿದವರ ಮೂಲಾಂಕ ಅಥವಾ ರಾಡಿಕ್ಸ್ 4 ಆಗಿರುತ್ತದೆ. 

ಇದನ್ನೂ ಓದಿ :  ಈ ರಾಶಿಯಲ್ಲಿ 30 ವರ್ಷಗಳ ನಂತರ ವಿಶೇಷ ರಾಜಯೋಗ!ದೀಪಾವಳಿ ಮೊದಲ ದಿನದಿಂದಲೇ ಬೆನ್ನು ಹತ್ತುವುದು ಅದೃಷ್ಟ!ಧನಕನಕ ಹೊತ್ತು ತರುವಳು ಭಾಗ್ಯ ಲಕ್ಷ್ಮೀ

ರಾಹು ಯಾವಾಗಲೂ ಮೊದಲು ತೊಂದರೆಗಳನ್ನೇ ನೀಡುತ್ತಾನೆ.ನಂತರ ಅಪಾರ ಪ್ರಗತಿಯನ್ನು ಕರುಣಿಸುತ್ತಾನೆ. ಸಾಮಾನ್ಯವಾಗಿ,ರಾಹುವಿನ ಪ್ರಭಾವಕ್ಕೆ ಒಳಗಾದವರು 42 ವರ್ಷಗಳ ನಂತರವೇ ಯಶಸ್ಸನ್ನು ಪಡೆಯುತ್ತಾರೆ.ಆಶ್ಚರ್ಯಕರ ವಿಷಯವೆಂದರೆ ರಾಹು ಹಠಾತ್ ಬದಲಾವಣೆಗೆ ಕಾರಣನಾಗುತ್ತಾನೆ. ಅಂದರೆ ಒಬ್ಬ ವ್ಯಕ್ತಿಯು ರಾತ್ರೋರಾತ್ರಿ ಯಶಸ್ಸು ಕಂಡು ಶ್ರೀಮಂತನಾಗುತ್ತಾನೆ. 

ರಾಡಿಕ್ಸ್ ಸಂಖ್ಯೆ 4 ಹೊಂದಿರುವವರು ಯೋಜನೆ ಹಾಕುವುದರಲ್ಲಿ ಉತ್ತಮರಾಗಿರುತ್ತಾರೆ. ಅವರು ಏನೇ ಕೆಲ್ಸಕ್ಕೆ ಕೈ ಹಾಕಬೇಕಾದರೂ ಬಹಳ ಲೆಕ್ಕಾಚಾರದಿಂದ ಮಾಡುತ್ತಾರೆ.  ಇವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.ಯಾಕೆಂದರೆ ಇವರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. 

ರಾಡಿಕ್ಸ್ ಸಂಖ್ಯೆ 4 ಹೊಂದಿರುವವರು ತುಂಬಾ ಹಠಮಾರಿಗಳಾಗಿರುತ್ತಾರೆ. ಅವರು ತಮ್ಮ ಇಚ್ಛೆಯಂತೆ ಬದುಕಲು ಇಷ್ಟಪಡುತ್ತಾರೆ.ಯಾರ ಸಲಹೆಯನ್ನು ಇವರು ಗಣನೆಗೆ ತೆಗೆದುಕೊಳ್ಳುವುದಿಲ್ಲ. 

ಇದನ್ನೂ ಓದಿ :  ವಿಜಯದಶಮಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಈ ರಾಶಿಯವರಿಗೆ ಅಷ್ಟದಿಕ್ಕುಗಳಿಂದಲೂ ಅದೃಷ್ಟ!

ರಾಡಿಕ್ಸ್ ಸಂಖ್ಯೆ 4 ರ ಜನರು ಸಾಧ್ಯವಾದಷ್ಟು ಬೇಗ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಬಯಸಿದರೆ,ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಅಲ್ಲದೆ, ನಿಮ್ಮ ವಸ್ತುಗಳನ್ನು   ವ್ಯವಸ್ಥಿತವಾಗಿರಿಸಿಕೊಳ್ಳಬೇಕು.ರಾಹುವಿಗೆ ಕೊಳಕು ಇಷ್ಟವಾಗುವುದಿಲ್ಲ.  

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News