ಮಧ್ಯರಾತ್ರಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಪಬ್‌ನಲ್ಲಿ ಖ್ಯಾತ ನಟಿ..! ಅಪ್ಪಿ ಮುದ್ದಾಡಿದ.. ವಿಡಿಯೋ ವೈರಲ್‌

Yuvraj Singh on Manchu Lakshmi : ಕ್ರಿಕೆಟಿಗ ಯುವರಾಜ್ ಸಿಂಗ್ ಮಧ್ಯರಾತ್ರಿ ಪಾರ್ಟಿಯಲ್ಲಿ ನಟಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ.. ನಟಿಯನ್ನ ಅಪ್ಪಿಕೊಂಡ ಡಾನ್ಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.. ಹಾಗಿದ್ರೆ ಯುವರಾಜ್‌ ಜೊತೆ ಪಾರ್ಟಿಯಲ್ಲಿದ್ದ  ನಟಿ ಯಾರು..? ಎನ್‌ ಕಥೆ..? ಬನ್ನಿ ನೋಡೋಣ..

Written by - Krishna N K | Last Updated : Oct 9, 2024, 03:49 PM IST
    • ಕ್ರಿಕೆಟಿಗ ಯುವರಾಜ್ ಸಿಂಗ್ ಮಧ್ಯರಾತ್ರಿ ಪಾರ್ಟಿಯಲ್ಲಿ ನಟಿಯೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ..
    • ನಟಿಯನ್ನ ಅಪ್ಪಿಕೊಂಡ ಡಾನ್ಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ..
    • ಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್‌ಲೋಡ್‌ ಮಾಡಿದ್ದರು..
ಮಧ್ಯರಾತ್ರಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಪಬ್‌ನಲ್ಲಿ ಖ್ಯಾತ ನಟಿ..! ಅಪ್ಪಿ ಮುದ್ದಾಡಿದ.. ವಿಡಿಯೋ ವೈರಲ್‌ title=

Manchu Lakshmi : ತೆಲುಗು ಖ್ಯಾತ ನಟಿ ಮಂಚು ಲಕ್ಷ್ಮಿ ಪ್ರಸನ್ನ ಸದ್ಯ ಸಿನಿಮಾಗಳಿಂದ ದೂರವಿದ್ದಾರೆ.. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗಷ್ಟೇ ಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್‌ಲೋಡ್‌ ಮಾಡಿದ್ದರು.. ಇದೀಗ ಈ ವಿಡಿಯೋ ವೈರಲ್ ಆಗಿದೆ. 

ವಿಡಿಯೋದಲ್ಲಿ ಮಧ್ಯರಾತ್ರಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಮಂಚು ಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಬ್ಬಿಕೊಂಡು, ಡಾನ್ಸ್‌ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.. ಅಲ್ಲದೆ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ನೆಟ್‌ನಲ್ಲಿ ಹರಿದಾಡುತ್ತಿವೆ..

ಇದನ್ನೂ ಓದಿ:ನಾಗ ಚೈತನ್ಯ ಹೆತ್ತ ತಾಯಿಯಿಂದ ದೂರವಾಗಿದ್ದು ಇದೇ ಕಾರಣಕ್ಕೆ.. ಅಮೆ

ಮಹಾಲಕ್ಷ್ಮಿ ಅಕ್ಟೋಬರ್ 8 ರಂದು ಮಂಚು ಕುಟುಂಬದಲ್ಲಿ ಜನಿಸಿದರು. ಅವರ ಹುಟ್ಟುಹಬ್ಬದ ನಿಮಿತ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು,  ಸಂಬಂಧಿಕರು ಪಾಲ್ಗೊಂಡಿದ್ದರು. ಅದ್ಧೂರಿಯಾಗಿ ನಡೆದ ಪಾರ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ಇದ್ದರು. 

ಈ ಬರ್ತ್ ಡೇ ಪಾರ್ಟಿಗಾಗಿ ವಿಶೇಷವಾಗಿ ಯುವಿ ಹೈದರಾಬಾದ್‌ಗೆ ಬಂದಿದ್ದು ಚರ್ಚೆಗೆ ಗ್ರಾಸವಾಗಿದೆ. ಲಕ್ಷ್ಮಿಮತ್ತು ಯುವಿ ನಡುವಿನ ಸಂಬಂಧವೇನು ಎಂಬ ಚರ್ಚೆ ಶುರುವಾಗಿದೆ. ಆದರೆ ಯುವಿ ಮತ್ತು ಲಕ್ಷ್ಮಿ ಒಳ್ಳೆಯ ಸ್ನೇಹಿತರು ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ.. ಕ್ರಿಕೆಟಿಗನಾಗಿದ್ದ ಸಮಯದಲ್ಲಿ ಯುವಿ ಹೈದರಾಬಾದ್‌ಗೆ ಬಂದಾಗ ಲಕ್ಷ್ಮಿಯನ್ನು ಭೇಟಿಯಾಗುತ್ತಿದ್ದರು. ಈ ಕ್ರಮದಲ್ಲಿ ಹುಟ್ಟುಹಬ್ಬಕ್ಕೆ ಹಾಜರಾಗಿದ್ದಾರೆ...

ಇದನ್ನೂ ಓದಿ:ದಾಹದಿಂದ ಬಂದ ಕಾಳಿಂಗ ಸರ್ಪಕ್ಕೆ ನೀರುಣಿಸಿದ ಭೂಪ..! ಮನುಷ್ಯನ ಸಹಾಯ ಮೆಚ್ಚಿ ದೈತ್ಯ ಸರ್ಪ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ  

ಇನ್ನು ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಿನಿಮಾ ತಾರೆಯರಾದ ಪ್ರಜ್ಞಾ ಜೈಸ್ವಾಲ್, ರಾಕುಲ್ ಪ್ರೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು. ಜೂನಿಯರ್ ಎನ್ ಟಿಆರ್ ಪತ್ನಿ ಸ್ನೇಹಾ ಹಾಗೂ ಕೊನಿಡೆಲಾ ಸುಶ್ಮಿತಾ ಕೂಡ ಹಾಜರಾಗಿದ್ದರು.. ಲಕ್ಷ್ಮಿ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News